ನಾವು ಲಡಾಖ್ ಜನರು ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ ಉತ್ತಮವಾಗಿದ್ದೆವು: ಸೋನಮ್ ವಾಂಗ್ಚುಕ್
ಆದರೆ ಈಗ ನಾನು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿಯೇ ಉತ್ತಮವಾಗಿದ್ದೆವು ಎಂದು ಹೇಳಬೇಕಾಗುತ್ತದೆ. ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಅದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಯ ಹಿಡಿಯಿತು
ಶ್ರೀನಗರ: ಲಡಾಖ್‌ನ (Ladakh)ಉನ್ನತ ಪರಿಸರವಾದಿ ಮತ್ತು ಪ್ರಸಿದ್ಧ ನವೋದ್ಯಮಿ ಸೋನಮ್ ವಾಂಗ್‌ಚುಕ್ (Sonam Wangchuk), ಲಡಾಖ್ ಶಾಶ್ವತ ರಾಜ್ಯಪಾಲರ ಆಳ್ವಿಕೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಲಡಾಖ್‌ನ ಕೇಂದ್ರಾಡಳಿತ ಸ್ಥಾನಮಾನದಲ್ಲಿ ತಾನು ಅಸುರಕ್ಷಿತ ಮತ್ತು ರಕ್ಷಣೆಯಿಲ್ಲದ ಭಾವನೆ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಮಂಗಳವಾರ ತನ್ನ ಐದು ದಿನಗಳ ಉಪವಾಸವನ್ನು ಕೊನೆಗೊಳಿಸಿದ ವಾಂಗ್ಚುಕ್, ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯ ಸ್ಥಾನಮಾನ ಮತ್ತು ಲಡಾಖ್‌ಗೆ ವಿಶೇಷ ಸ್ಥಾನಮಾನದ ಬೇಡಿಕೆಗಾಗಿ ಒತ್ತಾಯಿಸಿದ್ದಾರೆ”ಈಗ 370 ನೇ ವಿಧಿಯಂತಾ ರಕ್ಷಣೆ ಇಲ್ಲ. ಆದ್ದರಿಂದ ಲಡಾಖ್‌ಗೆ ಆರ್ಟಿಕಲ್ 244 ರ 6 ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ಇರಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ ವಾಂಗ್ಚುಕ್.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ವಾಂಗ್ಚುಕ್, ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ನಂತರ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಯಿತು ಎಂದಿದ್ದಾರೆ. ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಅದರ ರಾಜ್ಯತ್ವ ಮತ್ತು ವಿಶೇಷ ಸ್ಥಾನಮಾನವನ್ನು 370 ನೇ ವಿಧಿಯ ಅಡಿಯಲ್ಲಿ ತೆಗೆದುಹಾಕಿ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ನಂತರ ವಾಂಗ್ಚುಕ್ ಮೋದಿಗೆ ಧನ್ಯವಾದ ಸಲ್ಲಿಸಿದ್ದರು.
THANK YOU PRIME MINISTER Ladakh thanks @narendramodi @PMOIndia for fulfilling Ladakh’s longstanding dream. It was exactly 30 years ago in August 1989 that Ladakhi leaders launched a movement for UT status. Thank you all who helped in this democratic decentralization! ??? pic.twitter.com/X7pmJ5zZin
— Sonam Wangchuk (@Wangchuk66) August 5, 2019
ಆದರೆ ಈಗ ನಾನು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿಯೇ ಉತ್ತಮವಾಗಿದ್ದೆವು ಎಂದು ಹೇಳಬೇಕಾಗುತ್ತದೆ. ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಅದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಯ ಹಿಡಿಯಿತು. ಈ ಪ್ರದೇಶಕ್ಕೆ ಯಾವುದೇ ರಕ್ಷಣಾತ್ಮಕ ಕ್ರಮಗಳಿಲ್ಲದಿದ್ದಾಗ ನಾನು ಅಸುರಕ್ಷಿತ ಮತ್ತು ರಕ್ಷಣೆಯಿಲ್ಲದರಂತೆ ಭಾಸವಾಗುತ್ತದೆ.
ಲಡಾಖ್‌ಗೆ ಆರನೇ ಶೆಡ್ಯೂಲ್ ಮತ್ತು ರಾಜ್ಯ ಸ್ಥಾನಮಾನ ಮಾತ್ರ ಜನರಲ್ಲಿ ಬೆಳೆಯುತ್ತಿರುವ ಪರಕೀಯತೆಯನ್ನು ಪರಿಹರಿಸುತ್ತದೆ ಎಂದು ಲಡಾಕಿ ನಾಯಕರು ಹೇಳುತ್ತಾರೆ.
EVEN BALTISTAN IN PAK WANTS TO JOIN LADAKH UT … Meanwhile some in Kargil seem confused. I request @PMOIndia @narendramodi ji to respect their voice n give them the option to join Jammu Kashmir. Only then wl the voice of those who r for Ladakh UT come outhttps://t.co/bh8JrCxZS1
— Sonam Wangchuk (@Wangchuk66) August 8, 2019
ವಾಂಗ್ಚುಕ್ ಮಂಗಳವಾರ ತನ್ನ ಐದು ದಿನಗಳ ಉಪವಾಸವನ್ನು ಕೊನೆಗೊಳಿಸಿದಾಗ, ಸಾವಿರಾರು ಜನರು ಲೇಹ್‌ನ ಪೋಲೋ ಮೈದಾನದಲ್ಲಿ ಅವರ ಬೆಂಬಲಕ್ಕೆ ಬಂದಿದ್ದು ರಾಜ್ಯತ್ವ ಮತ್ತು 6 ನೇ ಶೆಡ್ಯೂಲ್ಗಾಗಿ ಪ್ರತಿಭಟನೆ ನಡೆಸಿದರು.2019 ರಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದೊಂದಿಗೆ, ಲಡಾಖ್ ನೇರ ಕೇಂದ್ರ ಆಡಳಿತ ಇರುವುದಿಲ್ಲ. ಸ್ಥಳೀಯ ಜನರು ಆಡಳಿತ ನಡೆಸುವಲ್ಲಿ ಯಾವುದೇ ಹೇಳಿಕೆಯನ್ನು ಹೊಂದಿಲ್ಲ. ಈ ಪ್ರದೇಶವು ಪರಿಸರದ ಬೆದರಿಕೆಯನ್ನು ಎದುರಿಸುತ್ತಿರುವಾಗ ಅವರು ಮೌನವಾಗಿರಲು ಸಾಧ್ಯವಿಲ್ಲ ಎಂದು ವಾಂಗ್ಚುಕ್ ಹೇಳುತ್ತಾರೆ. ಇದನ್ನೂ ಓದಿ: Baba Ramdev: ಮೊದಲು ನಮಾಜ್ ಓದುವುದು, ನಂತರ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸುವುದು, ಭಯೋತ್ಪಾದನೆ ಸೃಷ್ಟಿಸುವುದು: ಬಾಬಾ ರಾಮ್ದೇವ್ ನಾನು ಇದನ್ನು ಹೇಳಲು ಬಯಸಲಿಲ್ಲ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಉತ್ತಮವಾಗಿದ್ದೇವೆ ಎಂದು ನಾನು ಹೇಳಲೇಬೇಕು ಎಂದು ವಾಂಗ್ಚುಕ್ ತಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದ್ದಾರೆ.
Published On - 6:32 pm, Fri, 3 February 23