ಅಮೆರಿಕದಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾದ ಐಡ್ರಾಪ್ಸ್; ಉತ್ಪನ್ನ ಸ್ಥಗಿತಗೊಳಿಸಿದ ಚೆನ್ನೈ ಮೂಲದ ಕಂಪನಿ
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ , ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ತಯಾರಿಸಿದ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಐ ಡ್ರಾಪ್ಸ್‌ನ ತೆರೆಯದ ಬಾಟಲಿಗಳನ್ನು ಪರೀಕ್ಷಿಸುತ್ತಿದೆ.
ದೆಹಲಿ: ಐ ಡ್ರಾಪ್ಸ್ (Eye Drops) ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರಬಹುದು. ಹಾಗಾಗಿಯೇ ಇದು ಶಾಶ್ವತವಾಗಿ ಕುರುಡುತನ ಮತ್ತು ಒಬ್ಬರ ಸಾವಿಗೆ ಕಾರಣವಾಗಿದ್ದು ಎಂದು ಅಮೆರಿಕದ ಆರೋಗ್ಯ ರಕ್ಷಣಾ ಸಂಸ್ಥೆ ಹೇಳಿದ ನಂತರ ಚೆನ್ನೈ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಅಮೆರಿಕದ ಮಾರುಕಟ್ಟೆಯಿಂದ ಕಣ್ಣಿನ ಡ್ರಾಪ್ಸ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ಸ್ಟೇಟ್ ಡ್ರಗ್ ಕಂಟ್ರೋಲರ್ ತಂಡಗಳು ಚೆನ್ನೈನಿಂದ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿರುವ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಘಟಕಕ್ಕೆ ಹೋಗಿ ಪರಿಶೀಲಿಸಲಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC), ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ತಯಾರಿಸಿದ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಐ ಡ್ರಾಪ್ಸ್‌ನ (EzriCare Artificial Tears eye drops) ತೆರೆಯದ ಬಾಟಲಿಗಳನ್ನು ಪರೀಕ್ಷಿಸುತ್ತಿದೆ. ಆದರೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಈ ಕಂಪನಿ ತಯಾರಿಸಿದ ಉತ್ಪನ್ನಗಳ ಆಮದನ್ನು ನಿರ್ಬಂಧಿಸಲು ಮುಂದಾಗಿದೆ. ಸಂಭಾವ್ಯ ಬ್ಯಾಕ್ಟೀರಿಯಾದ ಮಾಲಿನ್ಯದಿಂದಾಗಿ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಅಥವಾ Delsam Pharma’s Artificial Tears ಅನ್ನು ಖರೀದಿಸಬೇಡಿ. ತಕ್ಷಣವೇ ಬಳಸುವುದನ್ನು ನಿಲ್ಲಿಸುವಂತೆ FDA ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದೆ. ಕಲುಷಿತವಾಗಿರುವ ಈ ಐ ಡ್ರಾಪ್ಸ್ ಬಳಕೆಯು ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದು ಕುರುಡುತನ ಅಥವಾ ಸಾವಿಗೆ ಕಾರಣವಾಗಬಹುದು” ಎಂದು ಸಂಸ್ಥೆ ಗುರುವಾರ ಹೇಳಿದೆ.
ಈ ಹಿಂದೆ, ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪನಿಯು ” ಸಂಭವನೀಯ ಮಾಲಿನ್ಯದ ಕಾರಣದಿಂದಾಗಿ EzriCare, LLC- ಮತ್ತು Delsam Pharma ನಿಂದ ವಿತರಿಸಲಾದ ಐ ಡ್ರಾಪ್ಸ್‌ನ ಅವಧಿ ಮುಗಿಯುವುದರೊಳಗೆ ಸ್ವಯಂಪ್ರೇರಣೆಯಿಂದ ಎಲ್ಲಾ ಲಾಟ್‌ಗಳನ್ನು ಹಿಂಪಡೆಯುತ್ತಿದೆ ಎಂದು ಹೇಳಿತ್ತು.
ಸ್ಯೂಡೋಮೊನಾಸ್ ಎರುಗಿನೋಸಾ ಎಂಬ ರೋಗ ಹರಡಿದ್ದು, ಒಂದು ಡಜನ್ ರಾಜ್ಯಗಳಲ್ಲಿ ಕನಿಷ್ಠ 55 ಜನರ ಮೇಲೆ ಪರಿಣಾಮ ಬೀರಿದೆ.ಈ ರೋಗದಿಂದ ಒಂದು ಸಾವು ಸಂಭವಿಸಿದ್ದು ಈ ಬಗ್ಗೆ ದೇಶಾದ್ಯಂತ ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಇಲ್ಲಿಯವರೆಗೆ, ಕಣ್ಣುಗಳಲ್ಲಿ ನೇರವಾಗಿ ಸೋಂಕನ್ನು ಹೊಂದಿರುವ 11 ರೋಗಿಗಳಲ್ಲಿ ಕನಿಷ್ಠ ಐದು ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಸಿಡಿಸಿ ವಕ್ತಾರರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಸ್ಯೂಡೋಮೊನಾಸ್ ಎರುಗಿನೋಸಾ ರಕ್ತ, ಶ್ವಾಸಕೋಶಗಳು ಅಥವಾ ಗಾಯಗಳಲ್ಲಿ ಸೋಂಕನ್ನು ಉಂಟುಮಾಡಬಹುದು. ಪ್ರತಿಜೀವಕ ಪ್ರತಿರೋಧದಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ರೋಗಾಣು ಬಾಧಿತರಿಗೆ ಚಿಕಿತ್ಸೆ ನೀಡುವುದುಕೂಡಾ ಕಷ್ಟ ಎಂದು Insider.com ವರದಿ ಮಾಡಿದೆ.
ಸಿಡಿಸಿ ಪ್ರಕಾರ, ಕಲುಷಿತ ನೀರು ಅಥವಾ ಮಣ್ಣಿಗೆ ಒಡ್ಡಿಕೊಂಡಾಗ ಬ್ಯಾಕ್ಟೀರಿಯಂ ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಅಥವಾ ಇತರ ಆರೋಗ್ಯ ರಕ್ಷಣೆಯ ಸೆಟ್ಟಿಂಗ್‌ಗಳಲ್ಲಿ ಜನರಿಗೆ ಹರಡುತ್ತದೆ. ಕಳೆದ ವರ್ಷ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‌ನಲ್ಲಿ ಕೆಮ್ಮು ಸಿರಪ್‌ಗಳಿಗೆ ಸಂಬಂಧಿಸಿದ ಹತ್ತಾರು ಮಕ್ಕಳ ಸಾವುಗಳ ನಂತರ ಭಾರತದಲ್ಲಿ ತಯಾರಿಸಿದ ಐ ಡ್ರಾಪ್ಸ್ ನ ಪರಿಶೀಲನೆಗೆ ಒಳಪಡುವ ಇತ್ತೀಚಿನ ಔಷಧೀಯ ಉತ್ಪನ್ನವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ