AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಮರುಪರೀಕ್ಷೆ ಯಶಸ್ವಿ; 22 ಲಕ್ಷಕ್ಕೂ ಅಧಿಕ ಮಕ್ಕಳು ಹಾಜರ್; ಕಳೆದ ಬಾರಿಗಿಂತ ಭೌತಶಾಸ್ತ್ರ ಪತ್ರಿಕೆ ಕಠಿಣವಿತ್ತೆಂದ ವಿದ್ಯಾರ್ಥಿಗಳು

NEET re-examination successfully conducted across the country: ಮೆಡಿಕಲ್ ಕೋರ್ಸ್​ಗಳ ಪ್ರವೇಶ ಪರೀಕ್ಷೆಯಾದ ನೀಟ್​ನ ಮರುಪರೀಕ್ಷೆ ಜೂನ್ 21, ಭಾನುವಾರ ಯಶಸ್ವಿಯಾಗಿ ನಡೆದಿದೆ. ದೇಶಾದ್ಯಂತ 5,440 ಕೇಂದ್ರಗಳಲ್ಲಿ ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5:15ರವರೆಗೆ ಪರೀಕ್ಷೆ ನಡೆದಿದೆ. ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳ ಪರೀಕ್ಷೆ ಇತ್ತು. ಕಳೆದ ಬಾರಿಗಿಂತ ಫಿಸಿಕ್ಸ್ ಕಠಿಣವಾಗಿತ್ತೆಂದು ಬಹಳ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

ನೀಟ್ ಮರುಪರೀಕ್ಷೆ ಯಶಸ್ವಿ; 22 ಲಕ್ಷಕ್ಕೂ ಅಧಿಕ ಮಕ್ಕಳು ಹಾಜರ್; ಕಳೆದ ಬಾರಿಗಿಂತ ಭೌತಶಾಸ್ತ್ರ ಪತ್ರಿಕೆ ಕಠಿಣವಿತ್ತೆಂದ ವಿದ್ಯಾರ್ಥಿಗಳು
ನೀಟ್ ಮರುಪರೀಕ್ಷೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2026 | 8:10 PM

Share

ನವದೆಹಲಿ, ಜೂನ್ 21: ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶಾತಿಗೆಂದು ನಡೆಸಲಾಗುವ ನೀಟ್​ನ ಮರುಪರೀಕ್ಷೆ (NEET Re-examination) ದೇಶಾದ್ಯಂತ ಇಂದು ಭಾನುವಾರ ಯಶಸ್ವಿಯಾಗಿ ನಡೆದಿದೆ. ಪೇಪರ್ ಲೀಕ್ ಆಗಿದ್ದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದರಿಂದ ಇವತ್ತು ಮರುಪರೀಕ್ಷೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸಿ ಪರೀಕ್ಷೆ ಏರ್ಪಡಿಸಿತ್ತು. ಮತ್ತು ನಕಲಿ ಸೋರಿಕೆ ಪ್ರಕರಣಗಳ ಹಾವಳಿಯ ಮಧ್ಯೆ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ದೇಶಾದ್ಯಂತ 551 ನಗರಗಳಲ್ಲಿ, 5,440 ಕೇಂದ್ರಗಳಲ್ಲಿ 22.79 ಅಭ್ಯರ್ಥಿಗಳಿಗೆ ನೀಟ್ ಪರೀಕ್ಷೆ ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15ರವರೆಗೆ ರೀ ಎಕ್ಸಾಮಿನೇಶನ್ ನಡೆದಿದೆ. ವಿದ್ಯಾರ್ಥಿಗಳ ಫೇಸ್ ಅಥೆಂಟಿಕೇಶನ್ ಹಾಗೂ ಇತರ ಭದ್ರತೆಗಾರಿ ಲಕ್ಷ ಸಮೀಪದಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತೀ ಕೇಂದ್ರದಲ್ಲೂ 40-50 ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿತ್ತು. 48,448 ಬಯೋಮೆಟ್ರಿಕ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್, ಪ್ಯಾರಾಮಿಲಿಟರಿ ಪಡೆಗಳನ್ನೂ ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ಮರುನೇಮಕ; ಸರ್ವೋಚ್ಚ ನ್ಯಾಯಾಲಯದ ಐವರು ಎಎಸ್​ಜಿಗಳ ಅವಧಿಯೂ ವಿಸ್ತರಣೆ

ಕಳೆದ ಬಾರಿಗಿಂತ ಪರೀಕ್ಷೆ ಕಠಿಣ ಎಂದ ವಿದ್ಯಾರ್ಥಿಗಳು

ಮಾಧ್ಯಮಗಳಿಗೆ ಬಂದ ವರದಿಗಳ ಪ್ರಕಾರ, ಕಳೆದ ತಿಂಗಳು ನಡೆದಿದ್ದ ನೀಟ್ ಪರೀಕ್ಷೆಗಿಂತ ಈ ಮರುಪರೀಕ್ಷೆ ಹೆಚ್ಚು ಕಠಿಣವಾಗಿತ್ತು ಎಂದು ಹೆಚ್ಚಿನ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಅದರಲ್ಲೂ ಭೌತಶಾಸ್ತ್ರ ಪತ್ರಿಕೆ ಬಹಳ ಕಠಿಣ ಇತ್ತು ಎಂದು ಬಹಳ ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪತ್ರಿಕೆಗಳ ಪೈಕಿ ಜೀವಶಾಸ್ತ್ರ ಇದ್ದುದರಲ್ಲಿ ಸುಲಭವಿತ್ತೆಂದು ಬಹಳ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸುಸೂತ್ರವಾಗಿ ನಡೆದ ನೀಟ್‌ ಮರು ಪರೀಕ್ಷೆ: ಎಕ್ಸಾಂ ಬಗ್ಗೆ ವಿದ್ಯಾರ್ಥಿಗಳು ಹೇಳಿದ್ದೇನು?

ಅಭ್ಯರ್ಥಿಗಳಿಗೆ ತೊಂದರೆಯಾಗದಿರಲೆಂದು ಏರ್​ಪೋರ್ಟ್​ನಲ್ಲೇ ಸ್ವಲ್ಪ ಹೊತ್ತು ಉಳಿದುಕೊಂಡ ಮೋದಿ

ನೀಟ್ ಪರೀಕ್ಷೆ ನಡೆದ ಇಂದು ಹಲವು ರೀತಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಪ್ರಧಾನಿಗಳು ಏರ್​​ಪೋರ್ಟ್​ನಲ್ಲೇ 45 ನಿಮಿಷ ಕಾದು ನಿಂತ ಘಟನೆಯೂ ಸೇರಿದೆ. ಮೋದಿಯವರು ಕೋಲ್ಕತಾದಿಂದ ಫ್ಲೈಟ್​ನಲ್ಲಿ ಮಧ್ಯಾಹ್ನ 1:15ಕ್ಕೆ ದಿಲ್ಲಿ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಅವರು ಅಲ್ಲಿಂದ ರಸ್ತೆ ಮೂಲಕ ಸಾಗಿ ಹೋಗುವುದಿತ್ತು. ಆದರೆ, ನೀಟ್ ಪರೀಕ್ಷೆ ಎರಡು ಗಂಟೆಗೆ ಇತ್ತು. ನಗರದ ವಿವಿಧೆಡೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪುವ ಧಾವಂತದಲ್ಲಿ ಇದ್ದಿರುತ್ತಾರೆ. ಈ ಹೊತ್ತಲ್ಲಿ ಪ್ರಧಾನಿಗಳು ರಸ್ತೆ ಮೂಲಕ ಸಾಗಿದರೆ ಟ್ರಾಫಿಕ್ ಜಾಮ್ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಪ್ರಧಾನಿಗಳು ಪರೀಕ್ಷೆಯ ಆರಂಭದ ಸಮಯವಾದ ಎರಡು ಗಂಟೆಯವರೆಗೂ ಏರ್​ಪೋರ್ಟ್​ನಲ್ಲೇ ಕಾದು ನಂತರ ತಮ್ಮ ನಿವಾಸಕ್ಕೆ ತೆರಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ