AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ಮರುನೇಮಕ; ಸರ್ವೋಚ್ಚ ನ್ಯಾಯಾಲಯದ ಐವರು ಎಎಸ್​ಜಿಗಳ ಅವಧಿಯೂ ವಿಸ್ತರಣೆ

Tushar Mehta reappointed as Solicitor General of India: ಭಾರತದ ಸಾಲಿಸಿಟರ್ ಜನರಲ್ ಆಗಿ ಹಿರಿಯ ನ್ಯಾಯವಾದಿ ತುಷಾರ್ ಮೆಹ್ತಾ ಅವರನ್ನು ಮುಂದುವರಿಸಲಾಗಿದೆ. 2018ರ ಅಕ್ಟೋಬರ್ 10ರಂದು ಮೆಹ್ತಾ ಅವರು ಮೊದಲ ಬಾರಿಗೆ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿದ್ದರು. ಆ ನಂತರ ಮರುನೇಮಕವಾಗುತ್ತಲೇ ಬಂದಿದ್ದಾರೆ. ಈಗ ದೇಶದಲ್ಲಿ ಅತಿಹೆಚ್ಚು ಅವಧಿಗೆ ಸಾಲಿಸಿಟರ್ ಜನರಲ್ ಆಗಿರುವ ದಾಖಲೆ ಮಾಡಿದ್ದಾರೆ.

ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ಮರುನೇಮಕ; ಸರ್ವೋಚ್ಚ ನ್ಯಾಯಾಲಯದ ಐವರು ಎಎಸ್​ಜಿಗಳ ಅವಧಿಯೂ ವಿಸ್ತರಣೆ
ತುಷಾರ್ ಮೆಹ್ತಾImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 21, 2026 | 6:43 PM

Share

ನವದೆಹಲಿ, ಜೂನ್ 21: ಹಿರಿಯ ನ್ಯಾಯವಾದಿ ತುಷಾರ್ ಮೆಹ್ತಾ (Tushar Mehta) ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಭಾರತದ ಸಾಲಿಸಿಟರ್ ಜನರಲ್ (Solicitor General for India) ಆಗಿ ಮರುನೇಮಕ ಮಾಡಲು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಅನುಮೋದನೆ ನೀಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿರುವ ಆದೇಶದ ಪ್ರಕಾರ, ತುಷಾರ್ ಮೆಹ್ತಾ ಅವರ ಈ ಹೊಸ ಅಧಿಕಾರಾವಧಿಯು ಜುಲೈ 1 ರಿಂದ ಜಾರಿಗೆ ಬರಲಿದೆ.

ತುಷಾರ್ ಮೆಹ್ತಾ ಅವರು 2018ರ ಅಕ್ಟೋಬರ್ 10 ರಿಂದ ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹೊಸ ವಿಸ್ತರಣೆಯೊಂದಿಗೆ ಅವರು ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕಾನೂನು ಅಧಿಕಾರಿಗಳಲ್ಲಿ ಒಬ್ಬರಾಗಲಿದ್ದಾರೆ. ಸಾಲಿಸಿಟರ್ ಜನರಲ್ ಎಂಬುದು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸ್ಥಾನ ಆಗಿದೆ. ಅಟಾರ್ನಿ ಜನರಲ್ ಅವರು ಅಗ್ರಗಣ್ಯರಾಗಿದ್ದಾರೆ. ಅವರ ನಂತರದ ಸ್ಥಾನ ಸಾಲಿಸಿಟರ್ ಜನರಲ್ ಅವರದ್ದು.

ತುಷಾರ್ ಮೆಹ್ತಾ ಅವರ ಮರುನೇಮಕಾತಿಯ ಪತ್ರ

ಐದು ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಮರುನೇಮಕ

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಐದು ಹಿರಿಯ ನ್ಯಾಯವಾದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಮೂರು ವರ್ಷಗಳ ಅವಧಿಗೆ ಮರುನೇಮಕ ಮಾಡಲಾಗಿದೆ. ಹಿರಿಯ ನ್ಯಾಯವಾದಿಗಳಾದ ವಿಕ್ರಮಜಿತ್ ಬ್ಯಾನರ್ಜಿ ಮತ್ತು ಕೆ.ಎಂ. ನಟರಾಜ್ ಅವರ ಅವಧಿಯು ಜುಲೈ 1 ರಿಂದ ಜಾರಿಗೆ ಬರಲಿದೆ. ಹಿರಿಯ ನ್ಯಾಯವಾದಿಗಳಾದ ಸೂರ್ಯಪ್ರಕಾಶ್ ವಿ. ರಾಜು, ಎನ್. ವೆಂಕಟರಾಮನ್ ಮತ್ತು ಐಶ್ವರ್ಯ ಭಾಟಿ ಅವರ ಅವಧಿಯು ಜೂನ್ 30 ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಮೀನು ರಫ್ತು ಘಟಕದಲ್ಲಿ ಗ್ಯಾಸ್ ಲೀಕ್; ಹಲವು ಸಾವು ನೋವು

ದೆಹಲಿ ಹೈಕೋರ್ಟ್ ಎಎಸ್‌ಜಿ ಅವಧಿ ವಿಸ್ತರಣೆ: ಇದೇ ವೇಳೆ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ಚೇತನ್ ಶರ್ಮಾ ಅವರ ಅಧಿಕಾರಾವಧಿಯನ್ನು ಜುಲೈ 1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sun, 21 June 26

Follow Us
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ