
ನವದೆಹಲಿ, ಜುಲೈ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇಂದು ‘ನೀಟ್ ಯುಜಿ 2026’ (NEET UG 2026) ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 715 ಅಂಕಗಳೊಂದಿಗೆ ಇಬ್ಬರಿಗೆ ಪ್ರಥಮ ಸ್ಥಾನ ಲಭಿಸಿದೆ. ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಜೂನ್ 21ರಂದು ದೇಶಾದ್ಯಂತ 551 ನಗರಗಳು ಹಾಗೂ ವಿದೇಶದ 14 ನಗರಗಳು ಸೇರಿದಂತೆ ಒಟ್ಟು 5,440 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗಿತ್ತು.
NTA Declares Result of NEET (UG) 2026
11.21 lakh candidates qualify;
Results declared in time for counselling and Medical College Admissions;
Toppers from almost all States and Union Territories;
More than 58 per cent of qualified candidates are women;
Examination conducted in…— National Testing Agency (@NTA_Exams) July 16, 2026
ನೀಟ್ ಯುಜಿ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?:
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಪರೀಕ್ಷಾ ಪ್ರಾಧಿಕಾರ ಇದರೊಂದಿಗೆ ಅಖಿಲ ಭಾರತ ಟಾಪರ್‌ಗಳು, ರಾಜ್ಯವಾರು ಟಾಪರ್‌ಗಳು, ವರ್ಗವಾರು ಟಾಪರ್‌ಗಳು, ಕಟ್-ಆಫ್ ಅಂಕಗಳು ಮತ್ತು ಭಾಷಾವಾರು ಭಾಗವಹಿಸುವಿಕೆಯ ವಿವರಗಳನ್ನು ಕೂಡ ಬಿಡುಗಡೆ ಮಾಡಿದೆ.
ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಲು ಅನುಸರಿಸಬೇಕಾದ ಹಂತಗಳು:
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (ಎನ್‌ಟಿಎ) ಮಾಹಿತಿಯ ಪ್ರಕಾರ, ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು ಒಟ್ಟು 13 ಭಾಷೆಗಳಲ್ಲಿ ಈ ಪರೀಕ್ಷೆಯನ್ನು ಬರೆದಿದ್ದರು.
STORY | NEET-UG: Punjab’s Aryan Gupta, Haryana’s Panshul Bansal emerge topper; 11.21L candidates qualify
Punjab’s Aryan Gupta and Haryana’s Panshul Bansal topped the NEET-UG for medical admissions with 11.21 lakh candidates qualifying the entrance exam this year, the National… pic.twitter.com/yp2zLzrt4J
— Press Trust of India (@PTI_News) July 16, 2026
ದೇಶದ ಎಲ್ಲಾ ಭಾಗಗಳಿಂದಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ 43 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವರ್ಷದ ನೀಟ್ ಪರೀಕ್ಷೆಯ ಟಾಪರ್‌ಗಳು:
19 ಅಭ್ಯರ್ಥಿಗಳು 700ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
138 ಅಭ್ಯರ್ಥಿಗಳು 690ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
10,160 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಇದನ್ನೂ ಓದಿ: ಲೋಪದೋಷಗಳನ್ನು ಸರಿಪಡಿಸಿದ್ದೇವೆ, ನೀಟ್ ಮರುಪರೀಕ್ಷೆ ಯಶಸ್ವಿಯಾಗಿದೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
690ಕ್ಕಿಂತ ಹೆಚ್ಚು ಅಂಕ ಗಳಿಸಿದ 138 ಅಭ್ಯರ್ಥಿಗಳು ದೇಶದ ಬೇರೆ ಬೇರೆ 66 ನಗರಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ 705ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಗ್ರ 17 ರ‍್ಯಾಂಕರ್‌ಗಳು 8 ರಾಜ್ಯಗಳವರು. ಆ ರಾಜ್ಯಗಳೆಂದರೆ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ತೆಲಂಗಾಣ.
ಫಲಿತಾಂಶಗಳು ಸಮಯಕ್ಕೆ ಸರಿಯಾಗಿ ಪ್ರಕಟವಾಗಿರುವುದರಿಂದ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಫಲಿತಾಂಶ ಪ್ರಕಟಿಸುವ ಮುನ್ನ ಎನ್‌ಟಿಎ ಅಂತಿಮ ಕೀಲಿ ಉತ್ತರವನ್ನು ಬಿಡುಗಡೆ ಮಾಡಿತ್ತು. ಮೌಲ್ಯಮಾಪನ ನೀತಿಯ ಪ್ರಕಾರ, ಭೌತಶಾಸ್ತ್ರದ ಎರಡು ಪ್ರಶ್ನೆಗಳನ್ನು ಪರಿಷ್ಕರಿಸಲಾಗಿತ್ತು. ಇದರಲ್ಲಿ ಒಂದು ಪ್ರಶ್ನೆಯನ್ನು ಕೈಬಿಡಲಾಗಿದ್ದು, ಮತ್ತೊಂದು ಪ್ರಶ್ನೆಗೆ ಎರಡು ಸರಿಯಾದ ಉತ್ತರಗಳನ್ನು ಅಂಗೀಕರಿಸಲಾಗಿತ್ತು. ಇದರಿಂದಾಗಿ ಎಲ್ಲಾ ಅಭ್ಯರ್ಥಿಗಳಿಗೆ 8 ಬೋನಸ್ ಅಂಕಗಳನ್ನು ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 pm, Thu, 16 July 26