AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Medical Career Without NEET: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಈ ವರ್ಷ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಆದರೆ, ದೇಶದಲ್ಲಿ ಲಭ್ಯವಿರುವ ಎಂಬಿಬಿಎಸ್ (MBBS) ಸೀಟುಗಳ ಸಂಖ್ಯೆ ಕೇವಲ 1.5 ಲಕ್ಷಕ್ಕಿಂತ ಕಡಿಮೆ ಇದೆ. ಆದರೆ ನೀಟ್ ಇಲ್ಲದೆ, 12ನೇ ತರಗತಿ ಅಂಕಗಳ ಆಧಾರದ ಮೇಲೆ ಕೆಲವು ಹೆಲ್ತ್ ಕೇರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಫಿಸಿಯೋಥೆರಪಿ, ಆಪ್ಟೋಮೆಟ್ರಿ, ನ್ಯೂಟ್ರಿಷನ್‌ನಂತಹ ಕೋರ್ಸ್‌ಗಳು ಲಭ್ಯ. ಮುಂದಿನ ವರ್ಷದಿಂದ ನೀಟ್ ಸ್ಕೋರ್ ಕಡ್ಡಾಯವಾಗುವ ಕಾರಣ, ಇದು ಕೊನೆಯ ಅವಕಾಶವಾಗಿದೆ.

Medical Career Without NEET: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!
NEET ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ
ಅಕ್ಷತಾ ವರ್ಕಾಡಿ
| Edited By: |

Updated on:Jun 24, 2026 | 11:19 AM

Share

ನವದೆಹಲಿ: ಜೂನ್ 21 ರಂದು ದೇಶಾದ್ಯಂತ ನೀಟ್ ಯುಜಿ (NEET UG 2026) ಮರುಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ವರ್ಷ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, ದೇಶದಲ್ಲಿ ಲಭ್ಯವಿರುವ ಎಂಬಿಬಿಎಸ್ (MBBS) ಸೀಟುಗಳ ಸಂಖ್ಯೆ ಕೇವಲ 1.5 ಲಕ್ಷಕ್ಕಿಂತ ಕಡಿಮೆ ಇದೆ. ಇಂತಹ ಕಠಿಣ ಪೈಪೋಟಿಯ ನಡುವೆ, ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಸ್ಕೋರ್ ಗಳಿಸಿದರೂ ಎಂಬಿಬಿಎಸ್ ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ.

ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಈ ವರ್ಷ ಒಂದು ಸುವರ್ಣ ಅವಕಾಶವಿದೆ. ನೀಟ್ ಸ್ಕೋರ್ ಇಲ್ಲದೆಯೂ, ಕೇವಲ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಮೆಡಿಕಲ್ ಸೆಕ್ಟರ್‌ನ ಅತ್ಯುತ್ತಮ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು!

ನೀಟ್ ಇಲ್ಲದೆ ಪ್ರವೇಶ ಪಡೆಯಬಹುದಾದ ಹೆಲ್ತ್ ಕೇರ್ ಕೋರ್ಸ್‌ಗಳು:

ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್ (NCAHP) ಅಡಿಯಲ್ಲಿ ಬರುವ ಒಟ್ಟು 13 ಪ್ರಮುಖ ಕೋರ್ಸ್‌ಗಳಿಗೆ ನೀವು ನೀಟ್ ಪರೀಕ್ಷೆಯ ಅಗತ್ಯವಿಲ್ಲದೆ ನೇರವಾಗಿ ಸೇರಬಹುದು. ಆ ಕೋರ್ಸ್‌ಗಳು ಹೀಗಿವೆ:

ಫಿಸಿಯೋಥೆರಪಿ (BPT), ಆಕ್ಯುಪೇಷನಲ್ ಥೆರಪಿ (BOT), ಮೆಡಿಕಲ್ ಲ್ಯಾಬೊರೇಟರಿ ಸೈನ್ಸಸ್, ಆಪ್ಟೋಮೆಟ್ರಿ, ಡಯಾಲಿಸಿಸ್ ಥೆರಪಿ ಟೆಕ್ನಾಲಜಿ ಮತ್ತು ಡಯಾಲಿಸಿಸ್ ಥೆರಪಿ, ರೇಡಿಯೋಥೆರಪಿ ಟೆಕ್ನಾಲಜಿ, ಮೆಡಿಕಲ್ ರೇಡಿಯೋಲಜಿ ಮತ್ತು ಇಮೇಜಿಂಗ್ ಟೆಕ್ನಾಲಜಿ, ಅರಿವಳಿಕೆ (Anesthesia) ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಹೆಲ್ತ್ ಇನ್ಫರ್ಮೇಷನ್ ಮ್ಯಾನೇಜ್‌ಮೆಂಟ್, ಫಿಸಿಷಿಯನ್ ಅಸೋಸಿಯೇಟ್ಸ್, ಎಪ್ಲೈಡ್ ಸೈಕಾಲಜಿ ಮತ್ತು ಬಿಹೇವಿಯರಲ್ ಹೆಲ್ತ್, ನ್ಯೂಟ್ರಿಷನ್ ಮತ್ತು ಡಯೆಟಿಟಿಕ್ಸ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನಾಲಜಿಸ್ಟ್ (ಪ್ಯಾರಾಮೆಡಿಕ್), ಬರ್ನ್ ಕೇರ್ ಟೆಕ್ನಾಲಜಿಸ್ಟ್ ಮತ್ತು ಅಡ್ವಾನ್ಸ್ ಕೇರ್ ಪ್ಯಾರಾಮೆಡಿಕಲ್

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಇದೇ ಕೊನೆಯ ವರ್ಷ; ಮುಂದಿನ ವರ್ಷದಿಂದ ನಿಯಮ ಬದಲು:

ವಾಸ್ತವವಾಗಿ, ಈ 13 ಅಲೈಡ್ ಹೆಲ್ತ್ ಕೋರ್ಸ್‌ಗಳ ಪ್ರವೇಶಕ್ಕೂ ಈ ವರ್ಷದಿಂದಲೇ ನೀಟ್ ಯುಜಿ (NEET UG) ಸ್ಕೋರ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿತ್ತು ಮತ್ತು ಈ ಬಗ್ಗೆ ಅಧಿಕೃತ ಸೂಚನೆಯನ್ನೂ ಹೊರಡಿಸಲಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಪರಿಷ್ಕೃತ ಆದೇಶ ಹೊರಡಿಸಿದ NCAHP, ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2026-27) ಬಿಪಿಟಿ ಮತ್ತು ಬಿಒಟಿಯಂತಹ ಅಲೈಡ್ ಹೆಲ್ತ್ ಕೋರ್ಸ್‌ಗಳಿಗೆ ನೀಟ್ ಸ್ಕೋರ್ ಕಡ್ಡಾಯಗೊಳಿಸುವ ನಿರ್ಧಾರವನ್ನು ಮುಂದೂಡಿದೆ. ಈ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ (2027-28) ಮುಂದೂಡಲಾಗಿದೆ.

ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ:

ಇದರರ್ಥ, ನೀಟ್ ಸ್ಕೋರ್ ಇಲ್ಲದೆ ಕೇವಲ 12ನೇ ತರಗತಿಯ (ಪಿಯುಸಿ) ಅಂಕಗಳ ಮೆರಿಟ್ ಆಧಾರದ ಮೇಲೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ವರ್ಷವೇ ಕೊನೆಯ ಅವಕಾಶವಾಗಿದೆ. ನೀಟ್‌ನಲ್ಲಿ ಕಡಿಮೆ ಅಂಕ ಗಳಿಸಿದ ಅಥವಾ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಧೃತಿಗೆಡದೆ, ಈ ಪ್ರಮುಖ ಅಲೈಡ್ ಹೆಲ್ತ್ ಕೇರ್ ಕೋರ್ಸ್‌ಗಳನ್ನು ಆಯ್ದುಕೊಂಡು ವೈದ್ಯಕೀಯ ರಂಗದಲ್ಲಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: 

Published On - 4:02 pm, Tue, 23 June 26

Follow Us