Netaji Death Mystery: ಗುಮ್ನಾಮಿ ಬಾಬಾ DNA ಪರೀಕ್ಷೆ ವರದಿ ಬಹಿರಂಗಪಡಿಸಲು ಕೇಂದ್ರ ನಕಾರ

ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಶಂಕಿಸಲಾಗಿದ್ದ ಗುಮ್ನಾಮಿ ಬಾಬಾ ಅವರ DNA ಪರೀಕ್ಷೆ ವರದಿಯನ್ನು ಬಹಿರಂಂಗಪಡಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

Netaji Death Mystery: ಗುಮ್ನಾಮಿ ಬಾಬಾ DNA ಪರೀಕ್ಷೆ ವರದಿ ಬಹಿರಂಗಪಡಿಸಲು ಕೇಂದ್ರ ನಕಾರ
Netaji
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 22, 2022 | 5:34 PM

ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಶಂಕಿಸಲಾಗಿದ್ದ ಗುಮ್ನಾಮಿ ಬಾಬಾ ಅವರ DNA ಪರೀಕ್ಷೆ ವರದಿಯನ್ನು ಬಹಿರಂಂಗಪಡಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ. ಇದಕ್ಕೆ ದೇಶದ ಸಮಗ್ರತೆಗೆ ಧಕ್ಕೆಯಾಗಬಹುದು ಮತ್ತು ಬೇರೆ ದೇಶವೊಂದರ ಜೊತೆಗಿನ ಬಾಂಧವ್ಯಕ್ಕೆ ಹಾನಿಯಾಗಬಹುದು ಎಂಬ ಕಾರಣವನ್ನು ಸಚಿವಾಲಯ ನೀಡಿದೆ. ಕೇಂದ್ರ ಗೃಹ ಸಚಿವಾಲಯದ (MHA) ಅಡಿಯಲ್ಲಿ ಬರುವ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯವು (CFSL) ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಹೇಳಲಾಗಿದ್ದ ಗುಮ್ನಾಮಿ ಬಾಬಾ ಅವರ DNA ಮಾದರಿಯ ಎಲೆಕ್ಟ್ರೋಫೆರೋಗ್ರಾಮ್ ವರದಿಯ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಹೂಗ್ಲಿಯ ಕೊನ್ನಗರ್ ನಿವಾಸಿ ಸಾಯಕ್ ಸೇನ್ ಅವರು ಆರ್‌ಟಿಐ ಸಲ್ಲಿಸಿದ್ದರು. 2022 ಸೆಪ್ಟೆಂಬರ್ 24 ರಂದು ಆರ್‌ಟಿಐ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)ರ ಪ್ರಕಾರ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ ಅಥವಾ ಭಾರತದ ಮೇಲೆ ಪೂರ್ವಾಗ್ರಹ ಪರಿಣಾಮ ಬೀರುತ್ತದೆ. ರಾಜ್ಯದ ಭದ್ರತೆ, ಕಾರ್ಯತಂತ್ರ, ಆರ್ಥಿಕ ಹಿತಾಸಕ್ತಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಇದನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದೆ.

ಇಂಡಿಯಾ ಟುಡೇ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿದ ಸಾಯಕ್ ಸೇನ್, ಸಿಎಫ್‌ಎಸ್‌ಎಲ್ ತನ್ನ ಆರ್‌ಟಿಐ ವರದಿಯನ್ನು ತಿರಸ್ಕರಿಸಿದೆ, ಮೂರು ಕಾರಣಗಳ ಆಧಾರದ ಮೇಲೆ ಎಲೆಕ್ಟ್ರೋಫೆರೋಗ್ರಾಮ್ ವರದಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಸಚಿವಾಲಯ ಹೇಳಿದೆ.

ಎಲೆಕ್ಟ್ರೋಫೆರೋಗ್ರಾಮ್ ಎನ್ನುವುದು ಎಲೆಕ್ಟ್ರೋಫೋರೆಸಿಸ್ ಸ್ವಯಂಚಾಲಿತ ಅನುಕ್ರಮದಿಂದ ಮಾಡಿದ ವಿಶ್ಲೇಷಣೆಯಾಗಿದೆ. ಎಲೆಕ್ಟ್ರೋಫೆರೋಗ್ರಾಮ್ ಸ್ವಯಂಚಾಲಿತ ಡಿಎನ್‌ಎ ಅನುಕ್ರಮ ಯಂತ್ರದಿಂದ ಉತ್ಪತ್ತಿಯಾಗುವ ಡೇಟಾದ ಫಲಿತಾಂಶವನ್ನು ಒದಗಿಸುತ್ತದೆ. ಫಲಿತಾಂಶಗಳನ್ನು ಪಡೆಯಲು ಎಲೆಕ್ಟ್ರೋಫೆರೋಗ್ರಾಮ್‌ಗಳನ್ನು ಬಳಸಬಹುದು, ವಂಶಾವಳಿಯ DNA ಪರೀಕ್ಷೆ ಮತ್ತು ಪಿತೃತ್ವ ಪರೀಕ್ಷೆ ಮೂಲಕ ಇದನ್ನು ಪಡೆದುಕೊಳ್ಳಬಹುದು.

ಎಲೆಕ್ಟ್ರೋಫೆರೋಗ್ರಾಮ್ ಅನ್ನು 3 ಕಾರಣಗಳಿಗಾಗಿ ನೀಡಲಾಗುವುದಿಲ್ಲ ಎಂದು ಕೇಂದ್ರ ನಮಗೆ ಅಧಿಕೃತವಾಗಿ ತಿಳಿಸಲಾಗಿದೆ. ಮುಖ್ಯವಾಗಿ, ಅದನ್ನು ಸಾರ್ವಜನಿಕಗೊಳಿಸುವುದರಿಂದ ಭಾರತದ ಸಾರ್ವಭೌಮತ್ವ ಮತ್ತು ಬೇರೆ ದೇಶವೊಂದರ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಸೇನ್ ಹೇಳಿದರು.

ಇದನ್ನು ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್​​ ಅಸ್ಥಿಯನ್ನು ಭಾರತಕ್ಕೆ ತನ್ನಿ: ಮಗಳು ಅನಿತಾ ಬೋಸ್

ಉತ್ತರ ಪ್ರದೇಶದಲ್ಲಿ ಉಳಿದುಕೊಂಡಿರುವ ವ್ಯಕ್ತಿಯೊಬ್ಬರು ಭಾರತದ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಅವರ ಎಲೆಕ್ಟ್ರೋಫೆರೋಗ್ರಾಮ್ ಅನ್ನು ಸಾರ್ವಜನಿಕಗೊಳಿಸಿದರೆ ದೇಶದಲ್ಲಿ ಕೋಲಾಹಲವನ್ನು ಉಂಟುಮಾಡುತ್ತದೆ ಎಂದು ಸೇನ್ ತಮ್ಮ ಆರ್‌ಟಿಐನಲ್ಲಿ ಕೇಳಿದ್ದಾರೆ.

ಗುಮ್ನಾಮಿ ಬಾಬಾ ಒಬ್ಬ ಕಮನ್ ಮ್ಯಾನ್‌ಗಿಂತ ಹೆಚ್ಚು ಮತ್ತು ವಿಶೇಷ ಎಂಬುದಕ್ಕೆ ಸ್ಪಷ್ಟ ಸೂಚನೆ ಇದು. ನನ್ನ ಎಲ್ಲಾ ಸಂಶೋಧನೆಗಳ ಪ್ರಕಾರ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ವೇಷದಲ್ಲಿದ್ದರು ಎಂದು ನಾನು ನಂಬುತ್ತೇನೆ ಎಂದು ಸೇನ್ ಇಂಡಿಯಾ ಟುಡೇಗೆ ತಿಳಿಸಿದರು. ಆಗಸ್ಟ್ 18, 1945 ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ನಿಧನರಾದರು ಎಂದು ಹೇಳಲಾಗಿದೆ. ಅವರು ಅಪಘಾತದಿಂದ ಬದುಕುಳಿದರು ಮತ್ತು ಆಗಿನ ಬ್ರಿಟಿಷ್ ಸರ್ಕಾರದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡರು ಎಂದು ಜನರ ಒಂದು ವರ್ಗ ಹೇಳಿಕೊಳ್ಳುತ್ತಾರೆ.

Published On - 5:32 pm, Sat, 22 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ