ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್​​ಗೆ ಮುಜುಗರ ಉಂಟು ಮಾಡಿದ ನವಜೋತ್ ಸಿಂಗ್ ಸಿಧು; ಏನಿದು ಟ್ವೀಟ್ ಅರ್ಥ?

| Updated By: Lakshmi Hegde

Updated on: Mar 17, 2022 | 3:03 PM

ನವಜೋತ್​ ಸಿಂಗ್ ಸಿಧು ಈ ಟ್ವೀಟ್​ ಕಾಂಗ್ರೆಸ್​ಗೆ ಸ್ವಲ್ಪ ಮುಜುಗರ ತಂದಿದೆ. ಇಲ್ಲಿ ಸಿಧು, ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್​ ಮುನ್ನುಡಿ ಇಟ್ಟಿದ್ದಾರೆ ಎಂದು ಹೇಳಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್​​ಗೆ ಮುಜುಗರ ಉಂಟು ಮಾಡಿದ ನವಜೋತ್ ಸಿಂಗ್ ಸಿಧು; ಏನಿದು ಟ್ವೀಟ್ ಅರ್ಥ?
ನವಜೋತ್ ಸಿಂಗ್ ಸಿಧು
Follow us on

ಪಂಜಾಬ್ ಕಾಂಗ್ರೆಸ್​ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನವಜೋತ್​ ಸಿಂಗ್ ಸಿಧು ಆಪ್​ ಮುಖ್ಯಮಂತ್ರಿ ಭಗವಂತ್ ಮಾನ್​ರನ್ನು ಹೊಗಳಿದ್ದಾರೆ. ಪಂಜಾಬ್​​ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್​ ಈ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನವಜೋತ್​ ಸಿಂಗ್ ಸಿಧು, ಇಲ್ಲಿನ ಜನರು ಬದಲಾವಣೆ ಬಯಸಿದ್ದಾರೆ.  ಹಾಗಾಗಿ ಆಪ್​ ಪಕ್ಷವನ್ನು ಆಯ್ಕೆ ಮಾಡಿಕೊಂಡು, ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಜನರ ಇಚ್ಛೆಯೇ ದೇವರ ಇಚ್ಛೆ ಎಂದು ಹೇಳಿದ್ದರು. ಇದೀಗ ಭಗವಂತ್​ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಟ್ವೀಟ್​ ಮಾಡಿದ್ದಾರೆ.

ಯಾರಿಂದಲೂ ಏನನ್ನೂ ನಿರೀಕ್ಷಿಸದ ವ್ಯಕ್ತಿ ಅತ್ಯಂತ ಸಂತೋಷವಾಗಿರುತ್ತಾನೆ. ಇದೀಗ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್​ ಅವರು ಪಂಜಾಬ್​​ನಲ್ಲಿ ಮಾಫಿಯಾ-ವಿರೋಧಿ ಯುಗದ ಅನಾವರಣ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ನಿರೀಕ್ಷೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ. ಜನಪರ ನೀತಿಗಳೊಂದಿಗೆ ಪಂಜಾಬ್​​ನ್ನು ಪುನರುಜ್ಜೀವನದ ಹಾದಿಗೆ ವಾಪಸ್​ ತರುತ್ತಾರೆ ಎಂಬ ನಂಬಿಕೆಯಿದೆ ಎಂದು ಸಿಧು ಬರೆದುಕೊಂಡಿದ್ದಾರೆ.

ನವಜೋತ್​ ಸಿಂಗ್ ಸಿಧು ಈ ಟ್ವೀಟ್​ ಕಾಂಗ್ರೆಸ್​ಗೆ ಸ್ವಲ್ಪ ಮುಜುಗರ ತಂದಿದೆ. ಇಲ್ಲಿ ಸಿಧು, ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್​ ಮುನ್ನುಡಿ ಇಟ್ಟಿದ್ದಾರೆ ಎಂದು ಹೇಳಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್​ ಅವಧಿಯಲ್ಲಿ ಏನಾಗಿತ್ತು? ಅವರ್ಯಾಕೆ ಮಾಫಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ. ಈ ಟ್ವೀಟ್​​ಗೆ ಕಾಂಗ್ರೆಸ್​​ನಲ್ಲಿಯೇ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಿತ್ತಿಪತ್ರ ಹಿಡಿದು ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್; ಸದನದಲ್ಲಿ ಗಾಂಭೀರ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ