ವಾಷಿಂಗ್ಟನ್: ಇಂಗ್ಲೆಡ್ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡಿರುವ ವಿಚಾರ ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಆತಂಕವನ್ನು ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್ ಮೂರ್ತಿ ಅವರು ದೂರ ಮಾಡಿದ್ದಾರೆ. ರೂಪಾಂತರಗೊಂಡಿರುವ ವೈರಸ್ನಿಂದ ಯಾವುದೇ ಹಾನಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ವೇಗವಾಗಿ ಹರಡಲಿದೆ. ಆದರೆ, ಇದು ಮಾರಕವಲ್ಲ ಎಂದು ಡಾ.ವಿವೇಕ್ ಹೇಳಿದ್ದಾರೆ. ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ತುಂಬಾನೇ ಅಪಾಯಕಾರಿ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೇ ವೈದ್ಯರಿಂದ ಸ್ಪಷ್ಟನೆ ಸಿಕ್ಕಿದ್ದು, ನಿಟ್ಟುಸಿರು ಬಿಡುವಂತಾಗಿದೆ.
ಕೊರೊನಾಗೆ ಈಗಾಗಲೇ ಔಷಧ ಕಂಡು ಹಿಡಿಯಲಾಗಿದೆ. ಆದರೆ, ಕೊರೊನಾ ರೂಪ ಬದಲಿಸಿದ್ದರಿಂದ ಅಭಿವೃದ್ಧಿಪಡಿಸಿರುವ ಔಷಧ ಪರಿಣಾಮಕಾರಿಯಾಗದು ಎಂದು ಹೇಳಲಾಗಿತ್ತು. ಈ ಬಗ್ಗೆಯೂ ಡಾ. ವಿವೇಕ್ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಈಗ ಅಭಿವೃದ್ಧಿಪಡಿಸಿರುವ ಲಸಿಕೆ ರೂಪಾಂತರಗೊಂಡಿರುವ ಕೊರೊನಾ ಮೇಲೆ ಪರಿಣಾಮಕಾರಿಯಾಗದು ಎಂದು ಹೇಳುವುದಕ್ಕೇ ಯಾವುದೇ ಸಾಕ್ಷ್ಯ ಇಲ್ಲ. ಹೀಗಾಗಿ, ಈ ಸುದ್ದಿಗಳನ್ನು ನಂಬಬೇಡಿ ಎಂದು ಕೋರಿದ್ದಾರೆ.
ರೂಪಾಂತರಗೊಂಡಿರುವ ಕೊರೊನಾ ವೈರಸ್ ವೇಗವಾಗಿ ಹರಡಲಿದೆ. ಆದರೆ, ಸರಿಯಾಗಿ ಕೈ ತೊಳೆದುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಸದಾ ಮಾಸ್ಕ್ ಧರಿಸಿದ್ದರೆ ಕೊರೊನಾದಿಂದ ದೂರ ಉಳಿಯಬಹುದು ಎನ್ನುವ ಕಿವಿಮಾತನ್ನು ಡಾ.ವಿವೇಕ್ ಹೇಳಿದ್ದಾರೆ.
ಬರಾಕ್ ಒಬಾಮಾ ಅಮೇರಿಕದ ಅಧ್ಯಕ್ಷರಾಗಿದ್ದಾಗ ಸರ್ಜನ್ ಜನರಲ್ ಆಗಿ ಹೆಸರು ಮಾಡಿದ್ದ ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೊಸದಾಗಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್ ಫೋರ್ಸ್ನಲ್ಲಿ ಡಾ.ವಿವೇಕ್ ಮೂರ್ತಿ ಕೂಡ ಇದ್ದಾರೆ.
ಬ್ರಿಟನ್ ವಿಮಾನ ಹಾರಾಟ ರದ್ದು
ನಾಳೆ ರಾತ್ರಿಯಿಂದ ಬ್ರಿಟನ್ ವಿಮಾನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ನಾಳೆಯೊಳಗೆ ಬ್ರಿಟನ್ನಿಂದ ಬರುವವರು ಕಡ್ಡಾಯವಾಗಿ RTPCR ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.ಬ್ರಿಟನ್ನಲ್ಲಿ ಹೊಸ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ.
ವೇಗವಾಗಿ ಹರಡುವ ಹೊಸ ಪ್ರಭೇದದ ಕೊರೊನಾ ವೈರಾಣು ಪತ್ತೆ: ಎಚ್ಚರಿಕೆ ವಹಿಸಲು ಜನರಿಗೆ ಸುಧಾಕರ್ ಮನವಿ
Published On - 9:49 pm, Mon, 21 December 20