ಭಾರತ-ವಿಯೆಟ್ನಾಂಗಳ ಸಹಭಾಗಿತ್ವ ಹೊಸ ಭಾಷ್ಯ ಬರೆಯಲಿದೆ: ಪ್ರಧಾನಿ ನರೇಂದ್ರ ಮೋದಿ
ಇಂಡೋ-ಫೆಸಿಫಿಕ್ ವಲಯದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯೇ ಭಾರತ ಮತ್ತು ವಿಯೆಟ್ನಾಂಗಳ ಸಾಮಾನ್ಯ ಗುರಿ. ಎರಡು ದೇಶಗಳ ನಡುವಿನ ಸಹಭಾಗಿತ್ವ ಹೊಸ ಭಾಷ್ಯ ಬರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿ: ಇಂಡೋ-ಫೆಸಿಫಿಕ್ ವಲಯದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯೇ ಭಾರತ ಮತ್ತು ವಿಯೆಟ್ನಾಂಗಳ ಸಾಮಾನ್ಯ ಗುರಿ. ಎರಡು ದೇಶಗಳ ನಡುವಿನ ಸಹಭಾಗಿತ್ವ ಹೊಸ ಭಾಷ್ಯ ಬರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತ ಮತ್ತು ವಿಯೆಟ್ನಾಂ ನಡುವಿನ ವರ್ಚುವಲ್ ಸಭೆಯಲ್ಲಿ ಮೋದಿ ಮಾತನಾಡಿದರು. ಸಮ್ಮಿಟ್ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದಿನ ವರ್ಷ ಭಾರತ ಮತ್ತು ವಿಯೆಟ್ನಾಂ ಎರಡೂ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಾಗಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ಸಹಭಾಗಿತ್ವ ಹೆಚ್ಚಬೇಕಿದೆ. ವಿಜ್ಞಾನ, ಅಣುಶಕ್ತಿ ಮತ್ತು ನವೀಕರಿಸಬಹುದಾದ ಇಂಧನ, ಪೆಟ್ರೋಕೆಮಿಕಲ್, ಭದ್ರತೆ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜೊತೆಗೆ, ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಲು ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಎಂದು ಅವರು ತಿಳಿಸಿದರು.
ಧನ್ಯವಾದ ಅರ್ಪಿಸಿದ ವಿಯೆಟ್ನಾಂ ಪ್ರಧಾನಿ ನ್ಗುಯೇನ್ ಕ್ಸುವಾನ್ ಫುಕ್ ಭಾರತ ಮತ್ತು ವಿಯೆಟ್ನಾಂ ನಡುವೆ ಸಂಬಂಧ ವೃದ್ಧಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಚೀನಾದಿಂದ ಉಪಟಳ ಎದುರಿಸುತ್ತಿರುವ ಹೊತ್ತಲ್ಲೇ ಭಾರತ ಮತ್ತು ವಿಯೆಟ್ನಾಂಗಳ ನಡುವಿನ ಒಪ್ಪಂದಗಳು ರಾಜತಾಂತ್ರಿಕವಾಗಿ ಮಹತ್ವ ಪಡೆದಿವೆ. ಎರಡು ದೇಶಗಳು ಚೀನಾದಿಂದ ಗಡಿ ತಕರಾರು ಅನುಭವಿಸುತ್ತಿರುವಾಗ ಈ ಒಪ್ಪಂದಗಳು ಏರ್ಪಟ್ಟಿರುವುದು ಹೆಚ್ಚಿನ ನಿರೀಕ್ಷೆ ಮೂಡಿಸಿವೆ.