ಇಂದು(ಭಾನುವಾರ) ನೂತನ ಸಂಸತ್ ಭವನದ (New Parliament) ಉದ್ಘಾಟನೆ ಕಾರ್ಯ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಚಿವರು, ಧಾರ್ಮಿಕ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಲಿದ್ದಾರೆ. ನೂತನ ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭವು ಮುಂಜಾನೆ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಔಪಚಾರಿಕ ಉದ್ಘಾಟನೆ ಕಾರ್ಯ ನಿರ್ವಹಿಸಲಿದ್ದಾರೆ. ಹೊಸ ಸಂಸತ್ ಕಟ್ಟಡಕ್ಕೆ ಡಿಸೆಂಬರ್ 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದರು.
ಉದ್ಘಾಟನೆಯ ಉದ್ಘಾಟನಾ ಸಮಾರಂಭವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಒಂದು ದಿನದ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಹೊಸ ಸಂಸತ್ ಕಟ್ಟಡದ ಹೊರಗೆ ಹವನ ನಡೆಯಲಿದ್ದು, ಅಲ್ಲಿ ಶೈವ ಧರ್ಮದ ಹಿರಿಯ ಅರ್ಚಕರು ಸೆಂಗೋಲ್ (ರಾಜದಂಡವನ್ನು) ಮೋದಿಗೆ ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಯವರೆಗೆ ಪೂಜೆಗಳು ನಡೆಯಲಿದ್ದು, ನಂತರ ಉದ್ಘಾಟನಾ ಸಮಾರಂಭವು ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉಪ ಸಭಾಪತಿ ಹರಿವಂಶ್ ಮತ್ತು ಇತರ ಕೆಲವು ಉನ್ನತ ಅಧಿಕಾರಿಗಳು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಹೊಸ ಸಂಸತ್ ಕಟ್ಟಡ ಏಕೆ ತ್ರಿಕೋನ ಆಕಾರದಲ್ಲಿದೆ? ಇಲ್ಲಿದೆ ನೂತನ ಭವನದ ವಿಶೇಷಗಳ ಮಾಹಿತಿ
ಸಂಸತ್ತಿನ ಉದ್ಘಾಟನೆಯ ನೇರ ಪ್ರಸಾರವನ್ನು ಟಿವಿ9 ವಾಹಿನಿ ಮತ್ತು ಟಿವಿ9 ಯುಟ್ಯೂಬ್ನಲ್ಲಿ ವೀಕ್ಷಿಸಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:30 am, Sun, 28 May 23