ಹೊಸ ಸಂಸತ್ ಕಟ್ಟಡ ಏಕೆ ತ್ರಿಕೋನ ಆಕಾರದಲ್ಲಿದೆ? ಇಲ್ಲಿದೆ ನೂತನ ಭವನದ ವಿಶೇಷಗಳ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ನೂತನ ಸಂಸತ್ ಕಟ್ಟಡವನ್ನು (New Parliament building) ಉದ್ಘಾಟಿಸಲಿದ್ದು, ಇದು ಸೊಗಸಾದ ಕಲಾಕೃತಿ ಮತ್ತು ಹಲವಾರು ವೈಶಿಷ್ಟ್ಯಗಳ ನಡುವೆ ವಿಧ್ಯುಕ್ತ ರಾಜದಂಡ ‘ಸೆಂಗೊಲ್' ಅನ್ನು ಹೊಂದಿರಲಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ನೂತನ ಸಂಸತ್ ಕಟ್ಟಡವನ್ನು (New Parliament building) ಉದ್ಘಾಟಿಸಲಿದ್ದು, ಇದು ಸೊಗಸಾದ ಕಲಾಕೃತಿ ಮತ್ತು ಹಲವಾರು ವೈಶಿಷ್ಟ್ಯಗಳ ನಡುವೆ ವಿಧ್ಯುಕ್ತ ರಾಜದಂಡ ‘ಸೆಂಗೊಲ್’ ಅನ್ನು ಹೊಂದಿರಲಿದೆ. ಸುಮಾರು 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸಂಸತ್ ಭವನದ ಸಂಕೀರ್ಣವು ಭಾರತದ ಪ್ರಗತಿಯ ಸಂಕೇತವಾಗಿದೆ. ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ವೆಬ್‌ಸೈಟ್‌ನ ಪ್ರಕಾರ ‘135 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು’ ಪ್ರತಿಬಿಂಬಿಸುತ್ತದೆ. ಸ್ಥಳದ ಸದ್ಬಳಕೆ ಉದ್ದೇಶದಿಂದ ತ್ರಿಕೋನ ಆಕೃತಿಯಲ್ಲಿ ರಚಿಸಲಾಗಿದೆ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
- ಹೊಸ ಸಂಸತ್ ಭವನವು ದೊಡ್ಡ ಶಾಸಕಾಂಗ ಕೋಠಡಿಗಳನ್ನು ಹೊಂದಿರುತ್ತದೆ. ಹೊಸ ಲೋಕಸಭೆಯು ಪ್ರಸ್ತುತ ಆಸನ ಸಾಮರ್ಥ್ಯಕ್ಕಿಂತ ಮೂರು ಪಟ್ಟು, ಅಂದರೆ 888 ಆಸನಗಳನ್ನು ಹೊಂದಿರುತ್ತದೆ. ರಾಜ್ಯಸಭೆಗೆ 348 ಆಸನಗಳು ಇರುತ್ತವೆ. ಇದು ತಾವರೆ ಹೂವಿನ ಥೀಮ್ ಆಧರಿಸಿದೆ. ಒಟ್ಟಾರೆಯಾಗಿ ಲೋಕಸಭೆಯ ಸಭಾಂಗಣವು ಜಂಟಿ ಅಧಿವೇಶನಗಳಿಗೆ 1,272 ಆಸನಗಳಿಗೆ ಅವಕಾಶ ಕಲ್ಪಿಸುತ್ತದೆ.
- ಎರಡು ಶಾಸಕಾಂಗ ಕೊಠಡಿಗಳನ್ನು ಹೊರತುಪಡಿಸಿ, ಹೊಸ ಸಂಕೀರ್ಣವು ‘ಸಾಂವಿಧಾನಿಕ ಸಭಾಂಗಣ’ವನ್ನು ಹೊಂದಿರಲಿದೆ.
- ಅತ್ಯಾಧುನಿಕ ‘ಸಾಂವಿಧಾನಿಕ ಸಭಾಂಗಣ’ವು ಸಂಸತ್ತಿನ ಸಂಕೀರ್ಣಕ್ಕೆ ಹೊಸ ಸೇರ್ಪಡೆಯಾಗಿದೆ. ಇದು ಸಾಂಕೇತಿಕವಾಗಿ ಮತ್ತು ಭೌತಿಕವಾಗಿ ನಾಗರಿಕರನ್ನು ‘ಪ್ರಜಾಪ್ರಭುತ್ವದ ಹೃದಯಭಾಗದಲ್ಲಿ’ ಇರಿಸುತ್ತದೆ ಎಂದು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ವೆಬ್‌ಸೈಟ್ ಉಲ್ಲೇಖಿಸಿದೆ. ಹೊಸ ಸಂಕೀರ್ಣದಲ್ಲಿ, ಆಧುನಿಕ ಸಂವಹನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಇದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.
- ಇಂಧನ ದಕ್ಷತೆಯ ಮೇಲೆ ಗಮನ ಕೇಂದ್ರೀಕರಿಸಿ, ಹೊಸ ಸಂಕೀರ್ಣವು ‘ಪ್ಲಾಟಿನಂ-ರೇಟೆಡ್ ಹಸಿರು ಕಟ್ಟಡ’ ಮತ್ತು ‘ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆಯನ್ನು’ ಪ್ರದರ್ಶಿಸಲಿದೆ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಅನೇಕ ಪ್ರಾದೇಶಿಕ ಕಲಾಕೃತಿಗಳನ್ನು ಸಹ ಹೊಸ ಕಟ್ಟಡಲ್ಲಿ ಅಳವಡಿಸಲಾಗಿದೆ.
- ಹೊಸ ಸಂಸತ್ತಿನ ಸಂಕೀರ್ಣವು ‘ದಿವ್ಯಾಂಗ್-ಸ್ನೇಹಿ’ ಆಗಿದೆ. ಇದು ತೆರೆದ ಅಂಗಳಕ್ಕೆ ಪೂರಕವಾಗಿ ಕೇಂದ್ರ ವಿಶ್ರಾಂತಿ ಕೋಣೆಯನ್ನು ಹೊಂದಿದೆ ಮತ್ತು ಸದಸ್ಯರು ಸಂವಹನ ನಡೆಸಲು ಉದ್ದೇಶಿಸಿ ನಿರ್ಮಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ