ವಾಹನಗಳ ಕರ್ಕಶ ಹಾರ್ನ್​ ಸಹಿಸಿಕೊಳ್ಳದ ನಿತಿನ್​ ಗಡ್ಕರಿಯಿಂದ ಹೊಸ ಪ್ಲ್ಯಾನ್​; ಶೀಘ್ರವೇ ತಬಲಾ, ಕೊಳಲು, ಪಿಟೀಲು ನಾದದ ಹಾರ್ನ್​

| Updated By: Lakshmi Hegde

Updated on: Sep 04, 2021 | 3:53 PM

ವಾಹನಗಳ ತಯಾರಕರು ಹಾರ್ನ್​ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ವಾಹನಗಳ ಕರ್ಕಶ ಹಾರ್ನ್​ ಸಹಿಸಿಕೊಳ್ಳದ ನಿತಿನ್​ ಗಡ್ಕರಿಯಿಂದ ಹೊಸ ಪ್ಲ್ಯಾನ್​; ಶೀಘ್ರವೇ ತಬಲಾ, ಕೊಳಲು, ಪಿಟೀಲು ನಾದದ ಹಾರ್ನ್​
ನಿತಿನ್​ ಗಡ್ಕರಿ
Follow us on

ವಾಹನ ದಟ್ಟಣೆಯಿಂದ ಬರೀ ವಾಯುಮಾಲಿನ್ಯವಷ್ಟೇ ಅಲ್ಲ, ಶಬ್ದಮಾಲಿನ್ಯವೂ ಆಗುತ್ತದೆ. ಅದರಲ್ಲೂ ವಾಹನಗಳ ಕರ್ಕಶ ಹಾರ್ನ್​​ನಿಂದ ಆಗುವ ಕೆಟ್ಟ ಕಿರಿಕಿರಿಯಂತೂ ಹೇಳತೀರದ್ದು. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ (Nitin Gadkari) ಇದಕ್ಕೊಂದು ಪರಿಹಾರ ಸೂಚಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೇ, ಹೊಸದಾದ..ವಿನೂತನ ಕಾಯ್ದೆ ಜಾರಿ ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ಈ ನೂತನ ನಿಯಮವೇನಾದರೂ ಜಾರಿಯಾದರೆ, ದೇಶದಲ್ಲಿ ವಾಹನಗಳ ಹಾರ್ನ್​ (Vehicle Horn) ನಿಂದ ತಬಲಾ, ಕೊಳಲು, ಪಿಟೀಲು, ತಾಳ ಇತ್ಯಾದಿ ಭಾರತೀಯ ಸಂಗೀತ ಸಾಧನಗಳ ನಾದ ಕೇಳಿಬರಲಿದೆ..!

ವಾಹನಗಳ ತಯಾರಕರು ಹಾರ್ನ್​ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡುವ ಸಂಬಂಧ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಿತಿನ್​ ಗಡ್ಕರಿ ತಿಳಿಸಿದ್ದಾರೆ. ನಾನು ನಾಗ್ಪುರದ ಕಟ್ಟಡವೊಂದರ 11ನೇ ಫ್ಲೋರ್​​ನಲ್ಲಿ ವಾಸವಾಗಿದ್ದೇನೆ. ಪ್ರತಿ ಮುಂಜಾನೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಆದರೆ ಅಂಥ ಮುಂಜಾನೆಯ ಮೌನದ ಹೊತ್ತಲ್ಲೂ ವಾಹನಗಳ ಕರ್ಕಶ ಹಾರ್ನ್​ಗಳು ನನ್ನನ್ನು ಡಿಸ್ಟರ್ಬ್​ ಮಾಡುತ್ತವೆ. ಈ ಗಲಾಟೆಯನ್ನು ಪ್ರತಿದಿನ ಕೇಳಿ ಸಾಕಾಗಿದೆ. ಹಾಗೇ ನನ್ನಲ್ಲಿ ಒಂದು ಯೋಚನೆಯೂ ಬಂದಿದೆ..ವಾಹನಗಳ ಹಾರ್ನ್​ಗಳು ಸರಿಯಾಗಿ, ಇಂಪಾಗಿ ಇರಬೇಕು. ಅದರಂತೆ ಭಾರತೀಯ ಸಂಗೀತ ವಾದ್ಯಗಳ ಧ್ವನಿಯನ್ನು ವಾಹನಗಳ ಹಾರ್ನ್​​ನಲ್ಲಿ ಅಳವಡಿಸಬೇಕು ಎಂದೆನಿಸಿದೆ. ಎಲ್ಲವೂ ಸರಿ ಎನ್ನಿಸಿದರೆ ಮುಂದೆ ವಾಹನಗಳು ಹಾರ್ನ್​ ಹಾಕಿದಾಗ, ಅದರಿಂದ ತಬಲಾ, ಕೊಳಲು, ಪಿಟೀಲಿನ ಇಂಪು ನಾದ ಕೇಳಿಬರಲಿದೆ ಎಂದು ನಿತಿನ್​ ಗಡ್ಕರಿ ಹೇಳಿದ್ದಾರೆ.

ಗತಿಶಕ್ತಿ ಯೋಜನೆಯಿಂದ ಅನುಕೂಲ
ಇನ್ನು ಸೆಪ್ಟೆಂಬರ್​ 2ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿತಿನ್ ಗಡ್ಕರಿ 100 ಲಕ್ಷ ಕೋಟಿ ರೂಪಾಯಿ ವೆಚ್ಚದ ಗತಿಶಕ್ತಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ಈ ಯೋಜನೆ ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್​ ಕಾರ್ಯಕ್ರಮಕ್ಕೆ ಒಂದು ಚೌಕಟ್ಟು ಒದಗಿಸುತ್ತದೆ. ಹಾಗೇ ಲಾಜಿಸ್ಟಿಕ್​ ವೆಚ್ಚವನ್ನು ಕಡಿಮೆ ಮಾಡಿ, ಪೂರೈಕೆ ಸರಪಳಿಯನ್ನು ಅಭಿವೃದ್ಧಿಗೊಳಿಸುತ್ತದೆ. ಈ ಮೂಲಕ ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧೆ ಒಡ್ಡುವಂತೆ ಮಾಡುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: Afghanistan: ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಪಡೆಯಲು ಆಫ್ಘನ್ ಮಹಿಳೆಯರಿಂದ ಬೀದಿಗಿಳಿದು ಹೋರಾಟ

Ban Online Gambling: ರಾಜ್ಯದಲ್ಲಿ ಆನ್ಲೈನ್​ ಗ್ಯಾಂಬ್ಲಿಂಗ್ ನಿಷೇಧ; ಎಷ್ಟರ ಮಟ್ಟಿಗೆ ಪರಿಣಾಮಕಾರಿ?