Afghanistan: ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಪಡೆಯಲು ಆಫ್ಘನ್ ಮಹಿಳೆಯರಿಂದ ಬೀದಿಗಿಳಿದು ಹೋರಾಟ
Afghanistan: ಪ್ಲಕಾರ್ಡ್ಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಅಫ್ಘಾನ್ ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ. ತಮಗೆ ಶಿಕ್ಷಣ ಪಡೆಯಲು ಹಾಗೂ ಉದ್ಯೋಗ ಹೊಂದಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಆ ಬಳಿಕ ಮಾನವ ಹಕ್ಕುಗಳು, ಮಹಿಳಾ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅನುಮಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಬೂಲ್ ನಗರದಲ್ಲಿ ಮಹಿಳೆಯರು ಶುಕ್ರವಾರ ಹಾಗೂ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ವೃತ್ತಿ ಹಾಗೂ ಶಿಕ್ಷಣದಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ಪ್ರತಿಭಟನಾನಿರತ ಮಹಿಳೆಯರ ಮೇಲೆ ತಾಲಿಬಾನಿಗಳು ಹಲ್ಲೆ ನಡೆಸಿದ್ದಾರೆ. ಅವರ ಬಳಿ ಇದ್ದ ಘೋಷಣಾ ಫಲಕಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಪ್ಲಕಾರ್ಡ್ಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಅಫ್ಘಾನ್ ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ. ತಮಗೆ ಶಿಕ್ಷಣ ಪಡೆಯಲು ಹಾಗೂ ಉದ್ಯೋಗ ಹೊಂದಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ತಾಲಿಬಾನಿಗಳು ಹೊಸ ಸರ್ಕಾರ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಹೊಸ ಸರ್ಕಾರದಲ್ಲಿ ಮಹಿಳಾ ಆಡಳಿತ ಅಧಿಕಾರಿಗಳು ಇರುವುದು ಅನುಮಾನವಾಗಿದೆ. ಇದಕ್ಕೂ ಮೊದಲು ಹೆರಾತ್ ನಗರದಲ್ಲಿ ಅಫ್ಘಾನ್ ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗ ಹಕ್ಕಿಗಾಗಿ ಪ್ರತಿಭಟನೆ ನಡೆಸಿದ್ದರು.
ಕೆಲವು ಮಾಧ್ಯಮಗಳ ವರದಿ ಪ್ರಕಾರ ಮಹಿಳೆಯರ ಗುಂಪೊಂದು ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಮಹಿಳೆಯರ ಬಗ್ಗೆ ತಾಲಿಬಾನ್ ಸರ್ಕಾರದ ನೀತಿಯ ಬಗ್ಗೆ ವಿವರಣೆ ಕೇಳಿದ್ದಾರೆ. ಆದರೆ, ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
Yesterday their were few women protested in Kabul but, today there are dozens women and girls gathered in front of @ARG_AFG asking for their rights and justice. #Afghanistan pic.twitter.com/ZLQfdzxJse
— Zahra Rahimi (@ZahraSRahimi) September 4, 2021
ನಿನ್ನೆ (ಸಪ್ಟೆಂಬರ್ 3) ಕೆಲವು ಮಹಿಳೆಯರು ಕಾಬೂಲ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಇಂದು (ಸಪ್ಟೆಂಬರ್ 4) ಅಧಿಕ ಸಂಖ್ಯೆಯಲ್ಲಿ ಮಹಿಳಾ ಹೋರಾಟಗಾರರು ಅಫ್ಘಾನಿಸ್ತಾನದ ಅಧ್ಯಕ್ಷರ ಮನೆ ಮುಂದೆ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ ಎಂದು ಜಹ್ರಾ ರಮೀಮಿ ಟ್ವಿಟರ್ನಲ್ಲಿ ಮಾಹಿತಿ ನೀಡಿ, ಫೋಟೊ ಹಂಚಿಕೊಂಡಿದ್ದಾರೆ.
The video shows that Taliban armed fighters are beating protesters women and girls who ask for their rights. pic.twitter.com/QmBwikESEg
— Zahra Rahimi (@ZahraSRahimi) September 3, 2021
ಈ ಮೊದಲು, 1996- 2001 ರ ವರೆಗಿನ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಶಿಕ್ಷಣ ಹಾಗೂ ಉದ್ಯೋಗವನ್ನು ಬ್ಯಾನ್ ಮಾಡಲಾಗಿತ್ತು. ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಿಂದ ಮಹಿಳೆಯರು ಹೊರಗುಳಿದಿದ್ದಾರೆ. ಮಹಿಳೆಯರ ನೇತೃತ್ವದ ಎನ್ಜಿಒಗಳನ್ನು ಹುಡುಕಿ ಅವುಗಳನ್ನು ಪ್ರಶ್ನೆ ಮಾಡಲಾಗುತ್ತಿದೆ, ಮುಚ್ಚಲು ಹೇಳಲಾಗುತ್ತಿದೆ. ಪ್ರಮುಖ ಮಹಿಳಾ ಹೋರಾಟಗಾರರನ್ನು ಫೋನ್ ಕಾಲ್, ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಸಲಾಗುತ್ತಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ಗೆ ಕೆಲಸ ಮಾಡುತ್ತಿರುವ ಸಮೀರಾ ಹಮೀದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
This is how women are being ignored and removed from the society. #Kabul. pic.twitter.com/AhcAbZLY5B
— Zahra Rahimi (@ZahraSRahimi) September 3, 2021
ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಹೇಗೆ ಕಾಣಲಾಗುತ್ತದೆ, ಹೇಗೆ ತಿರಸ್ಕರಿಸಲಾಗುತ್ತದೆ ಎಂಬ ಕ್ಯಾಪ್ಶನ್ ಜೊತೆಗೆ ಜಹ್ರಾ ರಹೀಮಿ ಕಾಬೂಲ್ ನಗರದ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕುತ್ತಿರುವ ತಾಲಿಬಾನ್ ಉಗ್ರರು; ಜೀವ ತೆಗೆಯಲು ಸಿದ್ಧತೆ
ಇದನ್ನೂ ಓದಿ: ಅಫ್ಘಾನಿಸ್ತಾನದ ಸೈನಿಕರು ಓಡಿ ಹೋಗುವಾಗ ತಂದಿಟ್ಟ ಶಸ್ತ್ರಾಸ್ತ್ರಗಳನ್ನು ತಾಲಿಬಾನಿಗಳಿಗೆ ಮರಳಿಸಿದ ಇರಾನ್