ಸಡಿಲಗೊಂಡ ಮಣ್ಣು: ನೂತನ ತಂತ್ರಜ್ಞಾನ ಬಳಸಿ ರಾಮ ಮಂದಿರಕ್ಕೆ ಅಡಿಪಾಯ ಹಾಕಲು ಸಜ್ಜು

| Updated By: ಸಾಧು ಶ್ರೀನಾಥ್​

Updated on: Dec 30, 2020 | 5:46 PM

ಸುಮಾರು 200 ಅಡಿ ಆಳದಲ್ಲಿ ಮಣ್ಣಿನ ಪದರ ಸಡಿಲಗೊಂಡಿದ್ದ ಕಾರಣ ಟಾಟಾ ಕನ್ಸಲ್ಟೆನ್ಸಿ ಹಾಗೂ ಲಾರ್ಸೆನ್​ ಮತ್ತು ಟರ್ಬೋ ಸಂಸ್ಥೆಯ ಇಂಜಿನಿಯರ್​ಗಳು ಅಡಿಪಾಯ ನಿರ್ಮಾಣಕ್ಕೆ ಹೊಸ ದಾರಿಯನ್ನು ಹುಡುಕಿದ್ದಾರೆ. ದೆಹಲಿಯಲ್ಲಿ ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನೂತನ ತಂತ್ರಜ್ಞಾನ ಬಳಕೆಯ ಕುರಿತು ಚರ್ಚಿಸಲಾಗಿದೆ.

ಸಡಿಲಗೊಂಡ ಮಣ್ಣು: ನೂತನ ತಂತ್ರಜ್ಞಾನ ಬಳಸಿ ರಾಮ ಮಂದಿರಕ್ಕೆ ಅಡಿಪಾಯ ಹಾಕಲು ಸಜ್ಜು
Follow us on

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ದೇಗುಲದ ಅಡಿಪಾಯ ನಿರ್ಮಾಣ ಕಾಮಗಾರಿ ವೇಳೆ ಕೆಳ ಪದರದ ಮಣ್ಣು ಸಡಿಲಗೊಂಡಿರುವುದು ಸೆಪ್ಟೆಂಬರ್​ 11ರಂದು ಬೆಳಕಿಗೆ ಬಂದಿತ್ತು. ಆ ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಆ ಸಮಸ್ಯೆಯನ್ನು ಎದುರಿಸಲು ಸಿದ್ಧವಾಗಿರುವ ತಜ್ಞರ ತಂಡ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಅಡಿಪಾಯ ನಿರ್ಮಿಸಲು ಸಿದ್ಧವಾಗಿದೆ.

ಸುಮಾರು 200 ಅಡಿ ಆಳದಲ್ಲಿ ಮಣ್ಣಿನ ಪದರ ಸಡಿಲಗೊಂಡಿದ್ದ ಕಾರಣ ಟಾಟಾ ಕನ್ಸಲ್ಟೆನ್ಸಿ ಹಾಗೂ ಲಾರ್ಸೆನ್​ ಮತ್ತು ಟರ್ಬೋ ಸಂಸ್ಥೆಯ ಇಂಜಿನಿಯರ್​ಗಳು ಅಡಿಪಾಯ ನಿರ್ಮಾಣಕ್ಕೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಈ ಕುರಿತು ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರ ಸಮಿತಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಅನಿಲ್​ ಮಿಶ್ರಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನೂತನ ತಂತ್ರಜ್ಞಾನ ಬಳಕೆಯ ಕುರಿತು ಚರ್ಚಿಸಲಾಗಿದ್ದು, ಸದ್ಯದಲ್ಲೇ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಅಯೋಧ್ಯೆ ಜಗಮಗಿಸುತ್ತಿದೆ.. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ತಿದ್ದಾರೆ ರಾಮಭಕ್ತರು!

Video: ರಾಮ ಲಲ್ಲಾಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಾರಿಜಾತ ಸಸಿ ನೆಟ್ಟ ಪ್ರಧಾನಿ ಮೋದಿ!

 

Published On - 3:51 pm, Wed, 30 December 20