ಮತ್ತೆ ಶುರುವಾಯ್ತು ಲಾಕ್‌ಡೌನ್: ರೂಪಾಂತರಿ ಕೊರೊನಾ ತಡೆಯಲು ಲಾಕ್‌ಡೌನ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ರೂಪಾಂತರಿ ಕೊರೊನಾ ತಡೆಯಲು ಲಾಕ್‌ಡೌನ್ ಮಾಡಲು ನಿರ್ಧರಿಸಿದ ಮಹಾರಾಷ್ಟ್ರ. ಜನವರಿ ಅಂತ್ಯದ ತನಕ ಲಾಕ್‌ಡೌನ್.
ಮುಂಬೈ: ಬ್ರಿಟನ್ ದೇಶದಲ್ಲಿ ಶುರುವಾದ ರೂಪಾಂತರಿ ಕೊರೊನಾ ಭಾರತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತೆ ಲಾಕ್‌ಡೌನ್ ಮೊರೆ ಹೋಗಿದೆ. ಮಹಾರಾಷ್ಟ್ರದಲ್ಲಿ ಜನವರಿ 31ರವರೆಗೆ ಲಾಕ್‌ಡೌನ್ ಗೈಡ್‌ಲೈನ್ಸ್ ಮುಂದುವರಿಸಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ.
(ನವೆಂಬರ್ 25ರ ನಂತರ ಬ್ರಿಟನ್ನಿಂದ ಮುಂಬೈಗೆ ಆಗಮಿಸಿರುವ ಒಟ್ಟು 15 ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 3,018 ಕೊರೊನಾ ಪ್ರಕರಣ ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 19,25,066ಕ್ಕೆ ತಲುಪಿದೆ. ಆ ಮೂಲಕ ಭಾರತದ ಒಟ್ಟು ಪ್ರಕರಣಗಳ ಶೇ.60ರಷ್ಟು ಪಾಲು ಮಹಾರಾಷ್ಟ್ರದ್ದಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಉದ್ಧವ್ ಠಾಕ್ರೆ ಸರ್ಕಾರ ಮತ್ತೆ ಲಾಕ್‌ಡೌನ್ ಹೇರುವುದಾಗಿ ಘೋಷಣೆ ಮಾಡಿದೆ. ಲಾಕ್‌ಡೌನ್ ಹೇರಿದರೂ ಸರ್ಕಾರ ಅನುಮತಿ ನೀಡಿರುವ ಕಾರ್ಯ ಚಟುವಟಿಕೆಗಳು ಯಥಾಪ್ರಕಾರ ಮುಂದುವರೆಯಲಿವೆ ಎಂದು ತಿಳಿಸಲಾಗಿದೆ.
ಮುಂದಿನ ವಾರವೂ ಹಾರುವುದಿಲ್ಲ ಭಾರತ-ಬ್ರಿಟನ್ ವಿಮಾನಗಳು -ಸಚಿವ ಹರ್ದೀಪ್ ಸಿಂಗ್ ಪುರಿ
Published On - 12:47 pm, Wed, 30 December 20