GAVI ಸದಸ್ಯನಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ್ ನೇಮಕ
ಹರ್ಷ ವರ್ಧನ್ ಅವರು GAVI ಮಂಡಳಿಯಲ್ಲಿ ಆಗ್ನೇಯ ಪ್ರದೇಶ ಪ್ರಾದೇಶಿಕ ಕಚೇರಿ (SEARO) ಪಶ್ಚಿಮ ಪೆಸಿಫಿಕ್ ಪ್ರಾದೇಶಿಕ ಕಚೇರಿಯನ್ನು (WPRO) ಪ್ರತಿನಿಧಿಸಲಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಮ್ಯಾನ್ಮಾರ್ನ ಮೈಂಟ್ ಹೆಚ್ಟಿವೆ ಪ್ರತಿನಿಧಿಸುತ್ತಿದ್ದಾರೆ.
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ್ ಅವರು ಮಂಗಳವಾರ ಲಸಿಕೆ ಮತ್ತು ರೋಗನಿರೋಧಕ ಶಕ್ತಿಗಾಗಿ ಜಾಗತಿಕ ಒಕ್ಕೂಟದ (GAVI) ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಹರ್ಷ ವರ್ಧನ್ ಅವರು GAVI ಮಂಡಳಿಯಲ್ಲಿ ಆಗ್ನೇಯ ಪ್ರದೇಶ ಪ್ರಾದೇಶಿಕ ಕಚೇರಿ (SEARO) ಪಶ್ಚಿಮ ಪೆಸಿಫಿಕ್ ಪ್ರಾದೇಶಿಕ ಕಚೇರಿಯನ್ನು (WPRO) ಪ್ರತಿನಿಧಿಸಲಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಮ್ಯಾನ್ಮಾರ್ನ ಮೈಂಟ್ ಹೆಚ್ಟಿವೆ ಪ್ರತಿನಿಧಿಸುತ್ತಿದ್ದಾರೆ.
GAVIಯಲ್ಲಿ ಜನವರಿ 1, 2021ರಿಂದ ಡಿಸೆಂಬರ್ 31, 2023ರವರೆಗೆ ಹರ್ಷ ವರ್ಧನ್ ಸದಸ್ಯತ್ವ ಇರಲಿದ್ದು, ಈ ಅವಧಿಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. GAVI ಒಕ್ಕೂಟದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ ಮತ್ತು ಕಾರ್ಯಕ್ರಮದ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತದೆ.
GAVI ಅಂತಾರಾಷ್ಟ್ರೀಯ ಒಕ್ಕೂಟ ಆಗಿದ್ದು, 2000ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿತ್ತು. ಪ್ರಾಣ ಉಳಿಸುವುದು, ಬಡತನ ಕಡಿಮೆ ಮಾಡುವುದು, ವಿಶ್ವವನ್ನು ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮಾಡುವ ಜವಾಬ್ದಾರಿ ಕೂಡ ಈ ಒಕ್ಕೂಟಡದ ಮೇಲಿದೆ.
ದೇಶದಲ್ಲಿ ಸುಮಾರು 20 ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ -ಸಚಿವ ಹರ್ಷವರ್ಧನ್