AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹ್ಮದಾಬಾದ್​ನಲ್ಲಿ ವಸತಿಗಳು ಕೈಗೆಟಕುವ ದರದಲ್ಲಿ ಲಭ್ಯ..ಮುಂಬೈ ದುಬಾರಿ ನಗರ

ವಸತಿ ಮಾರುಕಟ್ಟೆಗಳ 2020ರ ದರದ ಸೂಚ್ಯಂಕವನ್ನು Knight Frank India ಇಂದು ಬಿಡುಗಡೆ ಮಾಡಿದೆ. ಅದರ ಅನ್ವಯ, ಅಹ್ಮದಾಬಾದ್​ನಲ್ಲಿ ವಸತಿಗಳು ಶೇ.24ರ ಅನುಪಾತದಲ್ಲಿ ಸಿಗುತ್ತವೆ.. ಅದಾದ ಬಳಿಕ ಚೆನ್ನೈ ಮತ್ತು ಪುಣೆಗಳಲ್ಲಿ ಶೇ.26ರಷ್ಟಿದೆ. ಶೇ.50ಕ್ಕಿಂತಲೂ ಹೆಚ್ಚು ಅನುಪಾತದ ಪ್ರಮಾಣ ಇದ್ದರೆ, ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳಿಂದ ಗೃಹಸಾಲ ಪಡೆಯುವುದು ಕಷ್ಟವಾಗುತ್ತದೆ.

ಅಹ್ಮದಾಬಾದ್​ನಲ್ಲಿ ವಸತಿಗಳು ಕೈಗೆಟಕುವ ದರದಲ್ಲಿ ಲಭ್ಯ..ಮುಂಬೈ ದುಬಾರಿ ನಗರ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Oct 09, 2026 | 3:43 PM

Share

ದೆಹಲಿ: ಅಹ್ಮದಾಬಾದ್​ನಲ್ಲಿ ದೇಶದಲ್ಲಿಯೇ ಅತ್ಯಂತ ಒಳ್ಳೆಯ ಕೈಗೆಟಕುವ ದರದಲ್ಲಿ ನಿವೇಶನಗಳು ಲಭ್ಯವಾಗುತ್ತವೆ..ಹಾಗೇ ಮುಂಬೈನಲ್ಲಿ ಅತಿದುಬಾರಿಯಾಗಿವೆ ಎಂದು ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರ ಕಂಪನಿ Knight Frank India ವರದಿ ನೀಡಿದೆ.

ವಸತಿ ಮಾರುಕಟ್ಟೆಗಳ 2020ರ ದರದ ಸೂಚ್ಯಂಕವನ್ನು Knight Frank India ಇಂದು ಬಿಡುಗಡೆ ಮಾಡಿದೆ. ಅದರ ಅನ್ವಯ, ಅಹ್ಮದಾಬಾದ್​ನಲ್ಲಿ ವಸತಿಗಳು ಶೇ.24ರ ಅನುಪಾತದಲ್ಲಿ ಸಿಗುತ್ತವೆ.. ಅದಾದ ಬಳಿಕ ಚೆನ್ನೈ ಮತ್ತು ಪುಣೆಗಳಲ್ಲಿ ಶೇ.26ರಷ್ಟಿದೆ. ಶೇ.50ಕ್ಕಿಂತಲೂ ಹೆಚ್ಚು ಅನುಪಾತದ ಪ್ರಮಾಣ ಇದ್ದರೆ, ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳಿಂದ ಗೃಹಸಾಲ ಪಡೆಯುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಮನೆಗಳನ್ನು ಖರೀದಿಸಲು ಬ್ಯಾಂಕ್​, ಹಣಕಾಸು ಸಂಸ್ಥೆಗಳಿಂದ ಸಾಲ ಮಾಡುವುದು ತೀರ ಕಷ್ಟವಾಗುತ್ತದೆ. ಹೀಗಾಗಿ ಅದು ದುಬಾರಿಯಾಗಿ ಪರಿಣಮಿಸುತ್ತದೆ ಎಂದು ಕಂಪನಿ ಹೇಳಿದೆ.

ಹಾಗೇ ಮುಂಬೈನಲ್ಲಿ ವಸತಿ ದರದ ಅನುಪಾತ ಶೇ.61ರಷ್ಟಿದ್ದು, ದೇಶದಲ್ಲಿಯೇ ಅತ್ಯಂತ ದುಬಾರಿ ವಸತಿ ಮಾರುಕಟ್ಟೆ ಹೊಂದಿರುವ ನಗರವಾಗಿದೆ. ಮುಂಬೈನಲ್ಲಿ ಈ ಪ್ರಮಾಣ 2010ರಲ್ಲಿ ಶೇ. 93 ಇತ್ತು. ಅದೀಗ ಗಣನೀಯವಾಗಿ ಕಡಿಮೆಯಾಗಿದ್ದರೂ ಇನ್ನೂ ದುಬಾರಿ ಸಿಟಿಯಾಗಿಯೇ ಮುಂದುವರಿಯುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ. ಹಾಗೇ ಬೆಂಗಳೂರಿನಲ್ಲಿ ರೇಷಿಯೋ ಶೇ. 28ರಷ್ಟಿದ್ದು, ದಶಕಗಳ ಹಿಂದೆ ಈ ಪ್ರಮಾಣ ಶೇ.48ರಷ್ಟಿತ್ತು ಎಂದು ಕಂಪನಿಯ ವರದಿ ತಿಳಿಸಿದೆ.

Published On - 9:39 pm, Wed, 30 December 20

Follow Us
Lakshmi Hegde
Lakshmi Hegde
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ