AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು, ಮೊಸರು, ಪನ್ನೀರ್ ಇತ್ಯಾದಿ ಡೈರಿ ಉತ್ಪನ್ನಗಳ ಪ್ಯಾಕೆಟ್​ಗಳಿಗೆ ಹೊಸ ಲೋಗೋ; 2028ರ ಜುಲೈ 1ರಿಂದ ನಿಯಮ ಜಾರಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರವು (FSSAI) ಹಾಲು ಮತ್ತು ಡೈರಿ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಹೊಸ ನೀಲಿ ಮತ್ತು ಬಿಳಿ ಬಣ್ಣದ ಏಕರೂಪದ ಲೋಗೋವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ. 2028ರ ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಹಾಲು, ಮೊಸರು, ಪನ್ನೀರ್ ಇತ್ಯಾದಿ ಡೈರಿ ಉತ್ಪನ್ನಗಳ ಪ್ಯಾಕ್​ಗಳಲ್ಲಿ ಹೊಸ ಲೋಗೋವನ್ನು ಕಾಣಬಹುದು.

ಹಾಲು, ಮೊಸರು, ಪನ್ನೀರ್ ಇತ್ಯಾದಿ ಡೈರಿ ಉತ್ಪನ್ನಗಳ ಪ್ಯಾಕೆಟ್​ಗಳಿಗೆ ಹೊಸ ಲೋಗೋ; 2028ರ ಜುಲೈ 1ರಿಂದ ನಿಯಮ ಜಾರಿ
ಹಾಲುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2026 | 6:36 PM

Share

ನವದೆಹಲಿ, ನವೆಂಬರ್ 13: ಗ್ರಾಹಕರು ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಎಫ್‌ಎಸ್‌ಎಸ್‌ಎಐ (FSSAI) ಹೊಸ ಏಕರೂಪದ ಗುರುತಿನ ಲೋಗೋವನ್ನು ಪರಿಚಯಿಸಿದೆ. ಈ ಹೊಸ ಲೋಗೋವು ನೀಲಿ ಬಣ್ಣದ ಚೌಕಾಕಾರದ ಹಿನ್ನೆಲೆಯಲ್ಲಿ ಬಿಳಿ ಬಣ್ಣದ ಹನಿ (White droplet on a blue square background) ವಿನ್ಯಾಸವನ್ನು ಹೊಂದಿದೆ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.

‘ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ (ಲೇಬಲಿಂಗ್ ಮತ್ತು ಡಿಸ್ಪ್ಲೇ) ಎರಡನೇ ತಿದ್ದುಪಡಿ ನಿಯಮಗಳು, 2026’ ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಎಲ್ಲಾ ರೀತಿಯ ಹಾಲು, ಹಾಲಿನ ಉತ್ಪನ್ನಗಳು, ಮೊಸರು, ಪನ್ನೀರ್ ಹಾಗೂ ಇತರೆ ಡೈರಿ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಈ ಲೋಗೋ ಮುದ್ರಿಸುವುದು 2028ರ ಜುಲೈ 1ರಿಂದ ಕಡ್ಡಾಯವಾಗಲಿದೆ. ತಯಾರಕರಿಗೆ ತಮ್ಮ ಪ್ಯಾಕೇಜಿಂಗ್ ಬದಲಾಯಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಮೆಜಾನ್ ಭರ್ಜರಿ ಕೊಡುಗೆ: 4 ವರ್ಷಕ್ಕೆ 2 ಲಕ್ಷ ವಿದ್ಯಾರ್ಥಿವೇತನ, ಉಚಿತ ಲ್ಯಾಪ್‌ಟಾಪ್ ಜೊತೆಗೆ ಇಂಟರ್ನ್‌ಶಿಪ್ ಅವಕಾಶ

ಲೋಗೋದ ಉದ್ದೇಶ ಹಾಗೂ ಅಳತೆಗಳು

ವಿವಿಧ ಉತ್ಪನ್ನಗಳ ಮಧ್ಯೆ ಡೈರಿ ಉತ್ಪನ್ನಗಳನ್ನು ಗುರುತಿಸಲು ಈ ಲೋಗೊ ನೆರವಾಗುತ್ತದೆ. ವಿವಿಧ ಬ್ರ್ಯಾಂಡ್‌ಗಳ ನಡುವೆ ಡೈರಿ ಉತ್ಪನ್ನಗಳ ಗುಣಮಟ್ಟ ಹಾಗೂ ನಿಯಂತ್ರಕ ಗುರುತನ್ನು ಗ್ರಾಹಕರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಪ್ಯಾಕೆಟ್‌ಗಳ ಗಾತ್ರಕ್ಕೆ ಅನುಗುಣವಾಗಿ ಲೋಗೋದ ಕನಿಷ್ಠ ಅಳತೆಗಳನ್ನು ಪ್ರಾಧಿಕಾರವು ನಿಗದಿಪಡಿಸಿದೆ. ಉದಾಹರಣೆಗೆ ಪ್ಯಾಕೆಟ್ ಗಾತ್ರದ ಆಧಾರದ ಮೇಲೆ 6 ಮಿಮೀ ನಿಂದ 16 ಮಿಮೀ ವರೆಗೆ ಲೋಗೋ ಗಾತ್ರ ಇರುತ್ತದೆ.

ಪ್ಯಾಕೆಟ್​ನ ಗಾತ್ರ ಮತ್ತು ಲೋಗೋ ಗಾತ್ರ

  • 100 ಚದರ ಸೆಂಟಿಮೀಟರ್​ವರೆಗೆ ಡಿಸ್​ಪ್ಲೇ ಪ್ಯಾನೆಲ್ ಇರುವ ಪ್ಯಾಕ್​ಗಳಿಗೆ 6 ಎಂಎಂ ಲೋಗೋ ಹಾಕಬೇಕು
  • 100ರಿಂದ 500 ಚದರ ಸೆಂಟಿಮೀಟರ್ ಗಾತ್ರದ ಪ್ಯಾನೆಲ್ ಇರುವ ಪ್ಯಾಕ್​ಗಳಿಗೆ 8 ಎಂಎಂ ಲೋಗೊ ಹಾಕಬೇಕು.
  • 500ರಿಂದ 2,500 ಚದರ ಸೆಂಟಿಮೀಟರ್ ಇರುವ ಪ್ಯಾನಲ್​ಗಳಿಗೆ 12 ಎಂಎಂ ಲೋಗೋ ಹಾಕಬೇಕು.
  • 2,500 ಚದರ ಸೆಂಟಿಮೀಟರ್​ಗಿಂತ ಹೆಚ್ಚಿರುವ ಪ್ಯಾನಲ್​ಗಳಿಗೆ 16 ಎಂಎಂ ಲೋಗೋ ಹಾಕಬೇಕು.

ಇದನ್ನೂ ಓದಿ: ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು

ಲೋಗೋದಲ್ಲಿ ಬಿಳಿ ಹನಿಯ ಗಾತ್ರಕ್ಕೂ ನಿಯಮ…

  • 6 ಎಂಎಂ ಲೋಗೋದಲ್ಲಿ ಬಿಳಿ ಹನಿಯ ಕನಿಷ್ಠ ಎತ್ತರ 4.56 ಎಂಎಂ ಮತ್ತು ಅಗಲ 3 ಎಂಎಂ ಇರಬೇಕು.
  • 8 ಎಂಎಂ ಲೋಗೋದಲ್ಲಿ ಬಿಳಿ ಹನಿಯ ಗಾತ್ರ 6.08 ಎಂಎಂ ಎತ್ತರ ಮತ್ತು 4 ಎಂಎಂ ಅಗಲ ಇರಬೇಕು.
  • 12 ಎಂಎಂ ಲೋಗೋದಲ್ಲಿ ಬಿಳಿ ಹನಿಯ ಗಾತ್ರವು 9.12 ಎಂಎಂ ಎತ್ತರ, 6 ಎಂಎಂ ಅಗಲ ಇರಬೇಕು.
  • 16 ಎಂಎಂ ಲೋಗೋದಲ್ಲಿ ಬಿಳಿ ಹನಿ ಗಾತ್ರವು 12.16 ಎಂಎಂ ಎತ್ತರ, 16 ಎಂಎಂ ಅಗಲ ಇರಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ