
ರಾಜಸ್ಥಾನ, ಸೆಪ್ಟೆಂಬರ್ 24: ರಾಜಸ್ಥಾನದ ಭಿಲ್ವಾರದಲ್ಲಿ 15 ದಿನಗಳ ಶಿಶು(Baby) ಪತ್ತೆಯಾಗಿದೆ. ಅದರ ಪುಟ್ಟ ತುಟಿಗಳಿಗೆ ಗಮ್ ಅಂಡಿಸಲಾಗಿತ್ತು, ಅಳಲು ಆಗದಂತೆ ಬಾಯಿಗೆ ಕಲ್ಲುಗಳನ್ನು ತುಂಬಿಸಿ ಅಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.ವ್ಯಕ್ತಿಯೊಬ್ಬರು ಶಿಶುವನ್ನು ಕಂಡು, ಹೇಗೋ ಮಾಡಿ ಬಾಯಿ ತೆರೆಯಲು ಯಶಸ್ವಿಯಾದರೂ ಕೂಡ ಬಾಯೊಳಗೆ ತುಂಬಿದ್ದ ಕಲ್ಲು ನೋಡಿ ದಿಗ್ಭ್ರಮೆಗೊಂಡಿದ್ದಾರೆ.
ಮಗುವನ್ನು ಕೊಲ್ಲಲು ಅದೆಷ್ಟೇ ಪ್ರಯತ್ನಗಳು ನಡೆದಿದ್ದರೂ, ಅದೃಷ್ಟವಶಾತ್ ಅದು ಬದುಕುಳಿದಿದೆ. ದನ ಕಾಯುವವರೊಬ್ಬರು ಕಾಡಿನಲ್ಲಿ ಮಗುವನ್ನು ನೋಡಿ ಅದರ ಬಾಯಿಯಿಂದ ಕಲ್ಲನ್ನು ಹೊರತೆಗೆದರು. ತಕ್ಷಣ ಅವನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮಗು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ.
ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ಮಗು ಪತ್ತೆಯಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಮತ್ತಷ್ಟು ಓದಿ: Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಗುವಿನ ಪೋಷಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹತ್ತಿರದ ಆಸ್ಪತ್ರೆಗೆಯಲ್ಲಿ ಆಗಿರುವ ಹೆರಿಗೆಗಳ ಬಗ್ಗೆಯೂ ಅವರು ಪರಿಶೀಲಿಸುತ್ತಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಜನರನ್ನು ಸಹ ಅವರು ಹುಡುಕುತ್ತಿದ್ದಾರೆ ಮತ್ತು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಯಾರು ಆ ಕಾಡಿನಲ್ಲಿ ಮಗುವನ್ನು ಎಸೆದು ಹೋಗಿರಬಹುದು ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಮಗುವಿನ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ