AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣನಗರ: ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ, ಮಹಿಳೆ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದ ವೈದ್ಯರು

ಪಶ್ಚಿಮ ಬಂಗಾಳದ ಕೃಷ್ಣನಗರ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಾಣೆಯಾಗಿದೆ. ಹೆರಿಗೆಗೆ ದಾಖಲಾಗಿದ್ದ ಮಹಿಳೆಗೆ ಮಗು ಜನಿಸಿಲ್ಲ, ಗರ್ಭದಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಇತ್ತೀಚಿನ ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಮಗು ಇರುವುದು ದೃಢಪಟ್ಟಿತ್ತು ಎಂದು ಆಶಾ ಕಾರ್ಯಕರ್ತೆ ತಿಳಿಸಿದ್ದಾರೆ. ಕುಟುಂಬವು ಪೊಲೀಸ್ ದೂರು ದಾಖಲಿಸಿದ್ದು, ಘಟನೆ ಬಗ್ಗೆ ತನಿಖೆಗೆ ಸಮಿತಿ ರಚಿಸಲಾಗಿದೆ.

ಕೃಷ್ಣನಗರ: ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ, ಮಹಿಳೆ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದ ವೈದ್ಯರು
ಮಗುವಿನ ತಾಯಿImage Credit source: TV9 Bangla
ನಯನಾ ರಾಜೀವ್
|

Updated on: Jan 30, 2026 | 1:04 PM

Share

ಕೃಷ್ಣನಗರ, ಜನವರಿ 30: ಸರ್ಕಾರಿ ಆಸ್ಪತ್ರೆ(Hospital)ಯಿಂದ ನವಜಾತ ಶಿಶು ಕಾಣೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ. ರೋಗಿಯ ಕುಟುಂಬವು ಆಸ್ಪತ್ರೆಯ ಬಾಗಿಲು ಮುಚ್ಚಿ ಪ್ರತಿಭಟಿಸಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯೂ ನಡೆದಿತ್ತು. ಆದರೆ ಮಗು ಮಾತ್ರ ಎಲ್ಲಿಗೆ ಹೋಗಿತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಆದರೆ ಮಗುವನ್ನು ಮಾತ್ರ ಆಸ್ಪತ್ರೆ ವೈದ್ಯರು ಕೊಡಲೇ ಇಲ್ಲ, ಅದರ ಬದಲು ಆಕೆಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮತ್ತೊಂದೆಡೆ, ಕೊನೆಯ ಅಲ್ಟ್ರಾ-ಸೋನೋಗ್ರಫಿಯಲ್ಲಿ 2 ಕೆಜಿ 400 ಗ್ರಾಂ ತೂಕದ ಮಗು ಇದೆ ಎಂದು ವರದಿಯಾಗಿದೆ ಎಂದು ಆಶಾ ಕಾರ್ಯಕರ್ತೆ ಹೇಳಿದ್ದಾರೆ. ಆದರೆ ಮಗು ಎಲ್ಲಿಯೂ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಘಟನೆಯಿಂದ ಆಸ್ಪತ್ರೆಯಲ್ಲಿ ಹೆಚ್ಚಿನ ಉದ್ವಿಗ್ನತೆ ಉಂಟಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮುಖ್ಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ.ನಾಡಿಯಾದ ಕೃಷ್ಣನಗರ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನಬದ್ವೀಪ್‌ನ ಇಪ್ಪತ್ತರ ಹರೆಯದ ಮಂಪಿ ಖಾತುನ್ ಎಂಬ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಅಲ್ಲಿ ಹಲವಾರು ಗಂಟೆಗಳ ಕಾಲ ದಾಖಲಾಗಿದ್ದ ನಂತರ, ಅವರನ್ನು ಹೆರಿಗೆ ಟೇಬಲ್‌ಗೆ ಕರೆದೊಯ್ಯಲಾಯಿತು. ನಂತರ ಅವರಿಗೆ ಹೆರಿಗೆ ಮಾಡಲಾಯಿತು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ರೋಗಿಯ ಕುಟುಂಬವು ಆಸ್ಪತ್ರೆಗೆ ಹಿಂತಿರುಗಿದಾಗ ಅವರಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಹೇಳುತ್ತದೆ. ಗರ್ಭಧಾರಣೆಯಿಂದ ಆಕೆಯ ದೈಹಿಕ ಪರೀಕ್ಷೆಯ ಎಲ್ಲಾ ದಾಖಲೆಗಳು ಅವರ ಬಳಿ ಇವೆ.

ಆಶಾ ಕಾರ್ಯಕರ್ತೆ ರೋಜಿನಾ ಬೀಬಿ ಶೇಖ್ಮ ಮಾತನಾಡಿ, ಮಹಿಳೆಗೆ ಮೋಸ ಮಾಡಲಾಗಿದೆ. ಅವಳು ಗರ್ಭಿಣಿಯಾಗಿದ್ದಾಗಿನಿಂದ ನಾನು ಅವಳನ್ನು ನೋಡುತ್ತಿದ್ದೇನೆ. ಜನವರಿ 21 ರಂದು ಅವಳಿಗೆ USG ಮಾಡಲಾಗಿತ್ತು ಮತ್ತು ಮಗು ಇತ್ತು ಎಂದರು. ಅವರು ನನ್ನನ್ನು ಮಲಗಿಸಿದ್ದರು, ನಂತರ ಹೆರಿಗೆ ಮಾಡಲಾಗಿದೆ ಎಂದು ನಾನು ಭಾವಿಸಿದ್ದೆ ಆದರೆ, ನನ್ನ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ