ಪಾರ್ಕ್​ನಲ್ಲಿ ರುಂಡವಿಲ್ಲದ ನವಜಾತ ಶಿಶುವನ್ನು ಎಳೆದೊಯ್ಯುತ್ತಿತ್ತು ನಾಯಿ

|

Updated on: Aug 07, 2024 | 12:49 PM

ಪಾರ್ಕ್​ವೊಂದರಲ್ಲಿ ನವಜಾತ ಶಿಶುವನ್ನು ಕಚ್ಚಿ ಎಳೆದೊಯ್ಯುತ್ತಿದ್ದ ನಾಯಿಯೊಂದು ಪತ್ತೆಯಾಗಿದೆ. ಶಿಶುವಿನ ತಲೆ ಸೇರಿದಂತೆ ಹಲವು ಭಾಗಗಳು ನಾಪತ್ತೆಯಾಗಿವೆ.

ಪಾರ್ಕ್​ನಲ್ಲಿ ರುಂಡವಿಲ್ಲದ ನವಜಾತ ಶಿಶುವನ್ನು ಎಳೆದೊಯ್ಯುತ್ತಿತ್ತು ನಾಯಿ
ಶಿಶು-ಸಾಂದರ್ಭಿಕ ಚಿತ್ರ
Image Credit source: Firstcry
Follow us on

ದೆಹಲಿಯ ರೋಹಿಣಿ ಬಳಿಯ ಪಾರ್ಕ್​ವೊಂದರಲ್ಲಿ ನಾಯಿಯೊಂದು ರುಂಡವಿಲ್ಲದ ನವಜಾತ ಶಿಶುವಿನ ದೇಹವನ್ನು ಎಳೆದೊಯ್ಯುತ್ತಿದ್ದ ಭಯಾನಕ ದೃಶ್ಯ ಕಂಡುಬಂದಿತ್ತು. ಶನಿವಾರ ಬೆಳಗ್ಗೆ 10.08ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಪ್ರಾಥಮಿಕ ತನಿಖೆಯಲ್ಲಿ ಪಾರ್ಕ್​ನಲ್ಲಿ ಶಿಶುವನ್ನು ಎಸೆದ ಬಳಿಕ ಅದು ಮೃತಪಟ್ಟಿರುವಂತೆ ಕಾಣುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲೇ ಪಾರ್ಕ್​ನಲ್ಲಿ ಓಡಾಡುವವರು ತಲೆ ಇಲ್ಲದ ಶಿಶುವನ್ನು ನಾಯಿ ಎಳೆದೊಯ್ಯುತ್ತಿದ್ದುದನ್ನು ಕಂಡು ಬಳಿಕ ನಮಗೆ ಮಾಹಿತಿ ನೀಡಿದ್ದಾರೆ. ಎರಡು ಅಥವಾ ಮೂರು ದಿನಗಳ ಹಿಂದೆ ಮಗುವನ್ನು ಪಾರ್ಕ್​ನಲ್ಲಿ ಎಸೆದಿರಬಹುದು ಎಂದು ಹೇಳಲಾಗುತ್ತಿದೆ.

ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉದ್ಯಾನದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆ ಇದ್ದು ಅಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಶಿಶು ಸಾವು

ಎಲ್ಲಾ ಕಡೆಯೂ ದೇಹ ಊದಿಕೊಂಡಿದೆ ಜತೆಗೆ ದೇಹ ಊನವಾಗಿರುವ ಹಿನ್ನೆಲೆಯಲ್ಲಿ ಲಿಂಗಪತ್ತೆ ಸಾಧ್ಯವಾಗುತ್ತಿಲ್ಲ, ತಲೆ ಸೇರಿದಂತೆ ಹಲವು ಭಾಗಗಳು ನಾಪತ್ತೆಯಾಗಿವೆ. ಅವುಗಳನ್ನು ಪ್ರಾಣಿಗಳು ತಿಂದಿರಬಹುದು ಎಂದು ಅಂದಾಜಿಸಿದ್ದಾರೆ. ಶಿಶುವನ್ನು ಎಸೆದ ವ್ಯಕ್ತಿಯನ್ನು ಗುರುತಿಸಲು ಹತ್ತಿರವಿರುವ ಸಿಸಿಟಿವಿಯನ್ನು ಪರೀಕ್ಷಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ