ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಶಿಶು ಸಾವು
ಶಾಲೆಯ ಶೌಚಾಲಯದಲ್ಲಿ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಚೀಮಕುರ್ತಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿಯು ಕೋತಪಟ್ಟಣಂನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಓದುತ್ತಿದ್ದಳು. ಆಕೆ ಜೂನ್ 19 ರಂದು ಶಾಲೆಗೆ ಸೇರಿದ್ದಳು ಮತ್ತು ನಿತ್ಯವೂ ತರಗತಿಗಳಿಗೆ ಹಾಜರಾಗುತ್ತಿದ್ದಳು.
ಬಾಲಕಿಯೊಬ್ಬಳು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ನಡೆದಿದೆ. ಹುಟ್ಟಿ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಸಾವನ್ನಪ್ಪಿದೆ. ಚೀಮಕುರ್ತಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿಯು ಕೋತಪಟ್ಟಣಂನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಓದುತ್ತಿದ್ದಳು. ಆಕೆ ಜೂನ್ 19 ರಂದು ಶಾಲೆಗೆ ಸೇರಿದ್ದಳು ಮತ್ತು ನಿತ್ಯವೂ ತರಗತಿಗಳಿಗೆ ಹಾಜರಾಗುತ್ತಿದ್ದಳು.
ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ಹಲವಾರು ಗಂಟೆಗಳ ಕಾಲ ಹೆರಿಗೆ ನೋವು ಕಾಣಿಸಿಕೊಂಡರೂ ಯಾರಿಗೂ ತಿಳಿಸಿರಲಿಲ್ಲ. ಆಕೆ ಗರ್ಭಿಣಿಯಾಗಿರುವ ಬಗ್ಗೆ ಶಾಲಾ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ತಿಳಿದಿರಲಿಲ್ಲ.
ವಿದ್ಯಾರ್ಥಿನಿ ತುಂಬಾ ಸಮಯದವರೆಗೆ ತರಗತಿಗೆ ಹಿಂದಿರುಗದಿದ್ದಾಗ ಆಕೆಯ ಸಹಪಾಠಿಗಳುಹಾಗೂ ಶಿಕ್ಷಕರು ಪರೀಕ್ಷಿಸಲು ಶೌಚಾಲಯಕ್ಕೆ ಹೋಗಿದ್ದಾರೆ. ಅಲ್ಲಿ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಕಂಡು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮತ್ತಷ್ಟು ಓದಿ: ಗಂಡು ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ; ಸಹೋದರ ಅರೆಸ್ಟ್, ಪ್ರಾಚಾರ್ಯ ಹಾಗೂ ವಾರ್ಡನ್ ಅಮಾನತು
ವಿದ್ಯಾರ್ಥಿನಿಯನ್ನು ಒಂಗೋಲ್‌ನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ರವಾನಿಸಲಾಗಿದ್ದು, ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ನವಜಾತ ಶಿಶು ಜನಿಸಿದ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿತು. ಈ ವಿಚಾರ ಆಕೆಯ ಪೋಷಕರಿಗೆ ತಿಳಿದಿತ್ತೇ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ