ರೀಲ್ಸ್ಗಾಗಿ ರೈಲ್ವೆ ಹಳಿ ಮೇಲೆ ಸಿಲಿಂಡರ್, ಸೈಕಲ್ ಸೇರಿ ಅಪಾಯಕಾರಿ ವಸ್ತುಗಳನ್ನು ಇರಿಸಿದ್ದ ಯೂಟ್ಯೂಬರ್ ಬಂಧನ
ರೈಲ್ವೆ ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇರಿಸಿದ್ದ ಯೂಟ್ಯೂಬರ್ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಯುವ ಜನತೆಗೆ ರೀಲ್ಸ್ ಗೀಳು ಹೆಚ್ಚಾಗಿದೆ, ತಾನು ಕೂಡ ರಾತ್ರೋ ರಾತ್ರಿ ಫೇಮಸ್ ಆಗಬೇಕು ಎಂದು ಕನಸು ಕಾಣುತ್ತಾ ಬೇರೆಯವರ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ. ಯೂಟ್ಯೂಬರ್ ಗುಲ್ಜಾರ್ ಶೇಖ್ ಎಂಬಾತ ರೀಲ್ಸ್ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್, ಕಲ್ಲುಗಳು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇಟ್ಟಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲೀಗಲ್ ಹಿಂದೂ ಡಿಫೆನ್ಸ್ ಶೇಖ್ ಅವರ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ದೂರು ದಾಖಲಿಸಿದ ನಂತರ ಬಂಧಿಸಲಾಗಿದೆ. ಆರ್‌ಪಿಎಫ್ ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಉತ್ತರ ಪ್ರದೇಶದ ಖಂಡ್ರೌಲಿ ಗ್ರಾಮದ ಆತನ ನಿವಾಸದಿಂದ ಬಂಧಿಸಿದ್ದಾರೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಬಿಜೆಪಿ ನಾಯಕ, ಆರೋಪಿಯನ್ನು ರೈಲ್ ಜಿಹಾದಿ ಎಂದು ಉಲ್ಲೇಖಿಸಿದ್ದಾರೆ ಮತ್ತು ಯೂಟ್ಯೂಬರ್ ಅನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ತ್ವರಿತ ಕ್ರಮಕ್ಕಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯುಪಿ ಪೊಲೀಸ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ಗೆ ಧನ್ಯವಾದ ಅರ್ಪಿಸಿದರು.
ದೂರಿನಲ್ಲಿ ರೈಲ್ವೆ ಕಾಯ್ದೆಯ ಸೆಕ್ಷನ್ 147,145,153 ಮತ್ತು ಭಾರತೀಯ ನ್ಯಾಯ ಸಂಹಿತೆಯ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಉಲ್ಲಂಘನೆಗಳನ್ನು ಉಲ್ಲೇಖಿಸಲಾಗಿದೆ, ಇದು ಸಾರ್ವಜನಿಕ ಕಿಡಿಗೇಡಿತನ ಮತ್ತು ಸಂಭಾವ್ಯ ರೈಲು ಹಳಿತಪ್ಪುವಿಕೆಯ ಅಪಾಯವನ್ನು ಎತ್ತಿ ತೋರಿಸುತ್ತದೆ.
ಮತ್ತಷ್ಟು ಓದಿ: Video: ರೈಲ್ವೆ ಹಳಿಯ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ವಿಡಿಯೋ ಮಾಡಿದ ಯೂಟ್ಯೂಬರ್, ಲೈಕ್ಸ್, ವೀವ್ಸ್‌ಗಾಗಿ ಜನರ ಜೀವದ ಜತೆ ಚೆಲ್ಲಾಟ
ಯೂಟ್ಯೂಬರ್ ತನ್ನ ಚಾನೆಲ್‌ನಲ್ಲಿ ರೈಲ್ವೇ ಹಳಿಗಳ ಅನೇಕ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
“Rail Jihadi” Gulzar arrested
रेल जिहादी गुलज़ार गिरफ़्तार
I assured you that Rail Jihadi won’t be spared by authorities @legalhindudef
Thank you @myogiadityanath @Uppolice @RailMinIndia @AshwiniVaishnaw https://t.co/oMTTc29Up0 pic.twitter.com/AytyZGZBy3
— Shehzad Jai Hind (Modi Ka Parivar) (@Shehzad_Ind) August 1, 2024
ರೈಲು ಹಳಿ ಮೇಲೆ ಕಲ್ಲು, ಸೈಕಲ್, ಸಿಲಿಂಡರ್, ಇಟ್ಟಿಗೆ, ಮೊಬೈಲ್, ಸಾಬೂನು, ಮೋಟಾರ್, ಸುತ್ತಿಗೆ, ಕಬ್ಬಿಣ ಇತ್ಯಾದಿಗಳನ್ನು ಇಟ್ಟು ಹಲವು ವಿಡಿಯೋಗಳನ್ನು ಬಾಲಕ ಮಾಡಿದ್ದಾನೆ.
ರೈಲ್ವೆ ಹಳಿ ಮೇಲಿರುವ ಈ ವಸ್ತುಗಳ ಮೇಲೆ ರೈಲು ಹಾದುಹೋದರೆ ಏನಾಗುತ್ತೆ ಎಂದು ತೋರಿಸುವ ವಿಡಿಯೋ ಇದಾಗಿದೆ. ಈ ಯೂಟ್ಯೂಬರ್‌ಗೆ ರೈಲ್ವೆ ಹಳಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೆ, ರೈಲಿನೊಳಗೆ ಕುಳಿತಿರುವ ಸಾವಿರಾರು ಜನರ ಜೀವಕ್ಕೆ ಅಪಾಯವಿದೆ ಎಂದು ತಿಳಿದಿಲ್ಲವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ