25 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ
2017ರಲ್ಲಿ ಬಿಟೆಕ್ ಮುಗಿಸಿದ ತಕ್ಷಣ 25 ಲಕ್ಷ ರೂಪಾಯಿ ಸಂಬಳ ಸಿಗುವ ಉದ್ಯೋಗ ಸಿಕ್ಕಿತ್ತು. ಇದಲ್ಲದೇ ವಿದೇಶದಿಂದ ಹಲವು ಉದ್ಯೋಗಗಳ ಆಫರ್ ಕೂಡ ಬಂದಿತ್ತು. ಆದರೆ ಇದೆಲ್ಲವನ್ನೂ ತಿರಸ್ಕರಿಸಿ UPSCಗೆ ತಯಾರಿ ನಡೆಸುತ್ತಿದ್ದ ಯುವಕ, ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶ: 25 ಲಕ್ಷ ರೂಪಾಯಿ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರಾವತ್‌ಪುರದಲ್ಲಿ ನಡೆದಿದೆ. ಮೃತ ಕುಲದೀಪ್ ಸಿಂಗ್ ಸೋಲಂಕಿಯ ವಯಸ್ಸು ಕೇವಲ 29 ವರ್ಷ. ಕಾಸ್ಗಂಜ್ ಭುಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಧಪುರದಲ್ಲಿ ವಾಸಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಯುಪಿಎಸ್‌ಸಿಗೆ ತಯಾರಿ ನಡೆಸಲು ತುಳಸಿ ವಿಹಾರದಲ್ಲಿರುವ ಪ್ರಿನ್ಸ್ ಬಾಯ್ಸ್ ಹಾಸ್ಟೆಲ್‌ನಲ್ಲಿದ್ದರು. ಪೂರ್ವ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ ಕೂಡ ಅಂತಿಮ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದಾಗಿ ಮನ ನೊಂದು ವಿಷ ಸೇವಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
2017ರಲ್ಲಿ ಬಿಟೆಕ್ ಮುಗಿಸಿದ ತಕ್ಷಣ ಕುಲದೀಪ್ಗೆ 25 ಲಕ್ಷ ರೂಪಾಯಿ ಸಂಬಳ ಸಿಗುವ ಉದ್ಯೋಗ ಸಿಕ್ಕಿತ್ತು. ಆದರೆ UPSCಗೆ ತಯಾರಿ ನಡೆಸಲು ಆ ಕೆಲಸ ಬಿಟ್ಟಿದ್ದ. ಇದಲ್ಲದೇ ಕುಲದೀಪ್‌ಗೆ ವಿದೇಶದಿಂದ ಹಲವು ಉದ್ಯೋಗ ಆಫರ್‌ಗಳೂ ಬಂದಿದ್ದವು. ಆದರೆ ಎಲ್ಲಾ ಉದ್ಯೋಗಗಳನ್ನು ತಿರಸ್ಕರಿಸಲಾಗಿದೆ. ಇದೀಗ UPSCಯ ಅಂತಿಮ ಪಟ್ಟಿಯಲ್ಲಿ ಹೆಸರು ಬಾರದೇ ಇದ್ದಾಗ ಮಾನಸಿಕವಾಗಿ ನೊಂದಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಮೃತ ಕುಲದೀಪ್ ಅವರ ಸಹೋದರ ಸಂದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕುಲದೀಪ್ ತನ್ನ ಸಹೋದರ ಸಂದೀಪ್ ಸೋಲಂಕಿ ಮತ್ತು ತಾಯಿ ವಿಮಲಾ ದೇವಿ ಜೊತೆಗೆ ವಾಸಿಸುತ್ತಿದ್ದ. ಇದೀಗ ಮಗನ ಸಾವಿನ ಸುದ್ದಿ ತಿಳಿದು ಕುಟುಂಬ ಆಘಾತಕೊಳ್ಳಗಾಗಿದೆ. ಮೃತ ಕುಲದೀಪ್ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Fri, 2 August 24