ಭಾರತ ಮುಂದಿನ ವರ್ಷದಿಂದ ಪ್ರತಿದಿನ 60 ಕಿಮೀ ಹೊಸ ಹೆದ್ದಾರಿಗಳನ್ನು(highways) ಸೇರಿಸಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಗುರಿಯನ್ನು ಸಾಧಿಸಲು ಶೀಘ್ರದಲ್ಲೇ ತನ್ನ ನಿರ್ಮಾಣವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari)
ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕನಿಷ್ಠ 12,000 ಕಿಲೋಮೀಟರ್‌ಗಳಷ್ಟು ಹೊಸ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ. ಬಾಕಿ ಉಳಿದಿರುವ ಕೆಲವು ಪ್ರಮುಖ ನಿರ್ಮಾಣ ಕಾರ್ಯಗಳಲ್ಲಿ ಒಂದಾಗಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಎರಡು ಪ್ರಮುಖ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 12 ಗಂಟೆಗಳವರೆಗೆ ಕಡಿಮೆ ಮಾಡುವ ಭರವಸೆಯನ್ನು ನೀಡುತ್ತದೆ. ಉತ್ತಮ ರಸ್ತೆ ಮೂಲಸೌಕರ್ಯವು ಸಮೃದ್ಧಿಗೆ ಮಾತ್ರವಲ್ಲದೆ ಉದ್ಯೋಗಕ್ಕೂ ಕಾರಣವಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು. ಸಚಿವಾಲಯವು ಪ್ರತಿದಿನ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವ ಗುರಿ ಹೊಂದಿದೆ. “ನಾವು ದಿನಕ್ಕೆ 40 ಕಿಮೀ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ, ದಿನಕ್ಕೆ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿ ಅವರ ಅಧಿಕಾರಾವಧಿಯಲ್ಲಿ, ಎನ್‌ಎಚ್‌ಎಐ ಹೊಸ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಗಳನ್ನು ಮಾಡುತ್ತಿದೆ.
ಎನ್‌ಎಚ್‌ಎಐ ಏಪ್ರಿಲ್ 2019 ರಿಂದ ದೇಶದಾದ್ಯಂತ 30,000 ಕಿ.ಮೀ ಗಿಂತಲೂ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಿದೆ. ಪ್ರಮುಖ ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ದೆಹಲಿಯನ್ನು ಮೀರತ್ ಅಥವಾ ಯುಪಿಯ ಘಾಜಿಪುರದೊಂದಿಗೆ ಲಕ್ನೋವನ್ನು ಸಂಪರ್ಕಿಸುತ್ತದೆ. ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ದಿನಕ್ಕೆ 37 ಕಿಮೀ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ಎನ್‌ಎಚ್‌ಎಐ ದಾಖಲೆ ಮಾಡಿದೆ. ಕೋವಿಡ್ -19 ಸಾಂಕ್ರಾಮಿಕ ಮತ್ತು ದೇಶದ ಕೆಲವು ಭಾಗಗಳಲ್ಲಿ ದೀರ್ಘ ಮುಂಗಾರು ಋತುವಿನಿಂದ ಉಂಟಾದ ವಿಳಂಬದಿಂದಾಗಿ ಹಿಂದಿನ ಹಣಕಾಸು ವರ್ಷದಲ್ಲಿ ವೇಗವು ದಿನಕ್ಕೆ 28.64 ಕಿಲೋಮೀಟರ್‌ಗಳಿಗೆ ಇಳಿದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಎಚ್‌ಎಐ ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 12,000 ಕಿಮೀಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. 2019 ಮತ್ತು 2020 ರ ನಡುವೆ, NHAI 10,237 ಕಿಮೀ ಹೆದ್ದಾರಿಯನ್ನು ನಿರ್ಮಿಸಿದೆ. ನಂತರದ ವರ್ಷದಲ್ಲಿ ಇದು 13,327 ಕಿಮೀಗೆ ಏರಿತು. ಆದರೆ ಅದರ ನಂತರದ ವರ್ಷ 10,457 ಕಿಮೀಗೆ ಕುಸಿಯಿತು. ಹೊಸ ಹೆದ್ದಾರಿಗಳನ್ನು ನಿರ್ಮಿಸಲು ಎನ್‌ಎಚ್‌ಎಐ ಹಣ ಸಂಗ್ರಹಿಸುತ್ತಿದೆ ಎಂದು ಗಡ್ಕರಿ ಹೇಳಿದರು. ಮುಂಬರುವ 26 ಹಸಿರು ಎಕ್ಸ್‌ಪ್ರೆಸ್‌ವೇಗಳು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ಸಂಗ್ರಹಣೆಯ ಮೂಲಕ ಎನ್‌ಎಚ್‌ಎಐ ವಾರ್ಷಿಕ ಸುಮಾರು ₹40,000 ಕೋಟಿ ಆದಾಯವನ್ನು ಗಳಿಸುತ್ತದೆ. 2024 ರ ಅಂತ್ಯದ ವೇಳೆಗೆ ಇದು ₹1.40 ಲಕ್ಷ ಕೋಟಿಗೆ ಏರುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Thu, 10 November 22