ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?

| Updated By: ಸಾಧು ಶ್ರೀನಾಥ್​

Updated on: Oct 28, 2020 | 3:51 PM

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ. NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA […]

ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ.

NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA ವಿರುದ್ಧದ ಪ್ರತಿಭಟನಾಕಾರರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ದಂಗೆ ಏಳಲು ಹುನ್ನಾರ ನಡೆಸಿದರು ಎಂದು ಹೇಳಲಾಗಿದೆ.

ಬಂಧಿತರು ದೇಶದಲ್ಲಿ ಕೊರೊನಾ ಮಹಾಮಾರಿಯನ್ನು ಬಳಸಿ ಕೊರೊನಾ ಜಿಹಾದ್​ ನಡೆಸಲು ಯೋಚಿಸಿದ್ದರು. ಜೊತೆಗೆ, ಏಕಾಂಗಿ ಉಗ್ರ ದಾಳಿಗಳನ್ನೂ ನಡೆಸಲು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೇಲೆ ವಾಹನ ಹಾಯಿಸಿ, ಹತ್ಯೆ ಮಾಡಲು ಸಹ ಸ್ಕೆಚ್​​ ಹಾಕಿದ್ದರಂತೆ.

ಇದಲ್ಲದೆ, ದೇಶದ ಪ್ರಮುಖ RSS ನಾಯಕರ ಹತ್ಯೆಗೈದು ದೇಶದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಸಹ ಯೋಜನೆ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ದೇಶದಲ್ಲಿ ಉಗ್ರ ಚಟುವಟಿಕೆ ನಡೆಸಲು ಬೇಕಾದ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಜನರಿಂದ ದೇಣಿಗೆ ಪಡೆಯುವಲ್ಲಿ ಸಹ ತೊಡಗಿದ್ದರು ಎಂದೂ ಸಹ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.