2 ಬಾರಿ ನೋಟಿಸ್ ಕೊಟ್ರೂ ಡೋಂಟ್ ಕೇರ್ ಎಂದ ಆಳ್ವಾ, CCB ಎದುರಿರುವ ಆಯ್ಕೆಗಳೇನು?
ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಆದಿತ್ಯ ಆಳ್ವಾ ಎಸ್ಕೇಪ್ ಆಗಿದ್ದಕ್ಕೆ ಸಹೋದರಿ ಪ್ರಿಯಾಂಕ ಆಳ್ವಾಗೆ ಸಂಕಷ್ಟ ಎದುರಾಗಿದೆ. ಆದಿತ್ಯ ಎಸ್ಕೇಪ್ ಆಗಲು ಸಹಾಯ ಮಾಡಿದ ಆರೋಪದಡಿ ಪ್ರಿಯಾಂಕ ಆಳ್ವಾಗೆ ಈಗಾಗಲೇ 2 ಬಾರಿ ಸಿಸಿಬಿ ನೋಟಿಸ್ ನೀಡಿದೆ. ಆದರೆ ಸಿಸಿಬಿ ನೋಟಿಸ್ಗೆ ಪ್ರಿಯಾಂಕ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ. ನಾನು ಸದ್ಯಕ್ಕೆ ವಿಚಾರಣೆಗಾಗಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಮಕ್ಕಳನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಬೆಂಗಳೂರಿನಲ್ಲಿ ಕೊರೊನಾ […]
ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಆದಿತ್ಯ ಆಳ್ವಾ ಎಸ್ಕೇಪ್ ಆಗಿದ್ದಕ್ಕೆ ಸಹೋದರಿ ಪ್ರಿಯಾಂಕ ಆಳ್ವಾಗೆ ಸಂಕಷ್ಟ ಎದುರಾಗಿದೆ. ಆದಿತ್ಯ ಎಸ್ಕೇಪ್ ಆಗಲು ಸಹಾಯ ಮಾಡಿದ ಆರೋಪದಡಿ ಪ್ರಿಯಾಂಕ ಆಳ್ವಾಗೆ ಈಗಾಗಲೇ 2 ಬಾರಿ ಸಿಸಿಬಿ ನೋಟಿಸ್ ನೀಡಿದೆ. ಆದರೆ ಸಿಸಿಬಿ ನೋಟಿಸ್ಗೆ ಪ್ರಿಯಾಂಕ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ.
ನಾನು ಸದ್ಯಕ್ಕೆ ವಿಚಾರಣೆಗಾಗಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಮಕ್ಕಳನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಿರುವುದರಿಂದ ಮಕ್ಕಳನ್ನು ಕರೆದುಕೊಂಡು ಮುಂಬೈನಿಂದ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ನಂತರ ಬಂದು ವಿಚಾರಣೆಗೆ ಹಾಜರಾಗುತ್ತೇನೆ. ಆಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಗೆ ಇ-ಮೇಲ್ ಮೂಲಕ ಉತ್ತರಿಸಿದ್ದಾರೆ.
ನೋಟಿಸ್ ಕೊಟ್ಟರೂ ಸಿಸಿಬಿ ಮುಂದೆ ಹಾಜರಾಗದ ಪ್ರಿಯಾಂಕ ಆಳ್ವಾ ವಿರುದ್ಧ ಸಿಸಿಬಿ ಮುಂದಿನ ನಡೆ ಏನು? ಸಾಧ್ಯತೆ -1: ಪ್ರಿಯಾಂಕ ಆಳ್ವಾ ವಿಚಾರಣೆಗೆ ಹಾಜರಾಗುವ ತನಕ ಕಾಯುವುದು. ಸಾಧ್ಯತೆ -2: ಮೂರನೇ ಬಾರಿ ಪ್ರಿಯಾಂಕ ಆಳ್ವಾಗೆ ನೋಟಿಸ್ ಜಾರಿ ಮಾಡುವುದು. ಸಾಧ್ಯತೆ -3: ಮುಂಬೈಗೆ ತೆರಳಿ ಸ್ಥಳೀಯ ಠಾಣೆಗೆ ಕರೆಸಿ ವಿಚಾರಣೆ ನಡೆಸುವುದು. ಸಾಧ್ಯತೆ -4: ಕೇಸ್ ಹೈಕೋರ್ಟ್ ನಲ್ಲಿರುವುದರಿಂದ ತೀರ್ಮಾನ ಆಗುವವರೆಗೂ ಕಾಯುವುದು. ಸಾಧ್ಯತೆ -5: ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು
Published On - 8:19 am, Wed, 28 October 20