AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಸ್ಪೆಂಡ್ ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿದ 8 ದುಬಾರಿ, ಐಷಾರಾಮಿ ಕಾರುಗಳು ಯಾವುವು?

ವಿಶೇಷವೆಂದರೆ ಸಚಿನ್ ವಾಜೆ ಇಷ್ಟೆಲ್ಲ ಕಾರುಗಳನ್ನು ಬಳಸಿದ್ದರೂ, ಈ ಯಾವ ದುಬಾರಿ ಮತ್ತು ಐಷಾರಾಮಿ ಕಾರುಗಳೂ ಅವರ ಸ್ವಂತದ್ದಲ್ಲ. ಹಾಗಾದರೆ ಈ ಎಲ್ಲ ಕಾರುಗಳ ಮಾಲೀಕರು ಯಾರು? ಅವುಗಳನ್ನು ಸಚಿನ್ ವಾಜೆ ಹೇಗೆ ಬಳಸಿದರು ಮತ್ತು ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟ ಪ್ರಕರಣಕ್ಕೂ ಈ ಕಾರುಗಳಿಗೂ ಎಲ್ಲಿಂದೆಲ್ಲಿಗೆ ಸಂಬಂಧ?

ಸಸ್ಪೆಂಡ್ ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿದ 8 ದುಬಾರಿ, ಐಷಾರಾಮಿ ಕಾರುಗಳು ಯಾವುವು?
ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿರುವ ಐಷಾರಾಮಿ ಮತ್ತು ದುಬಾರಿ ಕಾರುಗಳು
guruganesh bhat
|

Updated on:Apr 04, 2021 | 2:10 PM

Share

ಓರ್ವ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಹೇಗೆ ಜೀವಿಸಬಹುದು. ಸರ್ಕಾರ ಕೊಡುವ ಸಂಬಳ ನೆಚ್ಚಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸ್ವಂತದ್ದೊಂದು ಮನೆ, ಚಿಕ್ಕ ಕಾರು ಖರೀದಿಸಬಹುದೇನೋ..ಆದರೆ ಬೆಂಜ್ ಆಡಿಯಂತಹ ದುಬಾರಿ ಮತ್ತು ಐಷಾರಾಮಿ ಕಾರುಗಳಲ್ಲಿ ಓಡಾಡಲಂತೂ ಸಾಧ್ಯವಿಲ್ಲ. ಅದೇ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಮುಂದೆ ದೇಶಕ್ಕೆ ದೇಶವೇ ಕುತೂಹಲದಿಂದ ಕಾಯವಂತಹ ಪ್ರಕರಣವೊಂದರಲ್ಲಿ ಅಮಾನತಾಗುತ್ತಾರೆ.  ಮರ್ಸಿಡೀಸ್ ಬೆಂಜ್, ಆಡಿಯಂತಹ ಕೋಟ್ಯಾಂತರ ಮೊತ್ತದ ಕಾರುಗಳಲ್ಲಿ ಆ ಪೊಲೀಸ್ ಸಿಬ್ಬಂದಿ ತಿರುಗಾಡುವುದು ಬೆಳಕಿಗೆ ಬರುತ್ತದೆ. ಓರ್ವ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಇಷ್ಟು ಐಷಾರಾಮಿ ಕಾರುಗಳಲ್ಲಿ ಹೇಗೆ ತಿರುಗಾಡಬಹುದು ಎಂದು ಮುಂಬೈ ಮಹಾನಗರದ ಜನರು ಮೂಗಿನ ಮೇಲೆ ಬೆರಳಿಟ್ಟು ಚಕಿತರಾಗುತ್ತಾರೆ. ಯಾರಿದು ಅಂದಿರಾ? ದೇಶದ ಉದ್ಯಮಪತಿ ಮುಕೇಶ್ ಅಂಬಾನಿ ಮನೆ ಮುಂದೆ ಅಪರಿಚಿತ ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ದಳದಿಂದ (The National Investigation Agency – NIA) ವಿಚಾರಣೆ ಎದುರಿಸುತ್ತಿರುವ ಸಚಿನ್ ವಾಜೆ ಅವರ ಕಥೆಯನ್ನೇ ನಾವು ಹೇಳುತ್ತಿರುವುದು.

ಮೊನ್ನೆ ಮೊನ್ನೆಯಷ್ಟೆ ರಾಷ್ಟ್ರೀಯ ಭದ್ರತಾ ದಳ ಮರ್ಸಿಡೀಸ್ ಬೆಂಜ್ ML 250 CDI ಕಾರನ್ನು ವಶಪಡಿಸಿಕೊಂಡಿತು. ಈ ಕಾರಿಗೂ ಮನ್​ಸುಖ್ ಹಿರೇನ್ ಸಾವು- ಸಚಿನ್ ವಾಜೆಗೂ ಏನು ಎತ್ತ ಸಂಬಂಧ ಎಂದು ತನಿಖಾ ದಳ ವಿಚಾರಣೆ ನಡೆಸುತ್ತಿದೆ. ಅಲ್ಲದೇ ಇದೇ ಪ್ರಕರಣದ ಬೆನ್ನು ಹತ್ತಿ ಇನ್ನೂ ಏಳು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಕೈಗೆತ್ತಿಕೊಂಡ ಕೆಲ ದಿನಗಳಲ್ಲಿ ಸಚಿನ್ ವಾಜೆಯ ಖಾಸಗಿ ವಾಹನ ಮಿತ್ಸುಬಿಶಿ ಔಟ್​ಲ್ಯಾಂಡರ್​ನ್ನು ವಶಪಡಿಸಿಕೊಂಡಿತು. ಅವರ ಖಾಸಗಿ ವಾಹನ ನವೀ ಮುಂಬೈಯ ಪ್ರದೇಶವೊಂದರಲ್ಲಿ ಅಪರಿಚಿತ ವಾಹನದಂತೆ ನಿಂತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಎಲ್ಲಕ್ಕಿಂತ ಮೊದಲು ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಐಎ ವಶಪಡಿಸಿಕೊಂಡಿದ್ದು ಸ್ಫೋಟಕ ಪತ್ತೆಯಾದ ಹಸಿರು ಬಣ್ಣದ ಸ್ಕಾರ್ಪಿಯೋ. ನಂತರ ಒಂದರ ಮೇಲೊಂದರಂತೆ ಈವರೆಗೆ ಒಟ್ಟು 8 ಕಾರುಗಳನ್ನು ವಶಪಡಿಸಿಕೊಂಡಿದೆ ಎನ್​ಐಎ. ನಂತರ ಒಂದು ಇನೋವಾ ಕಾರು, ಮರ್ಸಿಡೀಸ್ ಬೆಂಜ್​ನ್ನು ವಶಪಡಿಸಿಕೊಂಡಿತು. ಈ ಬೆಂಜ್​ ಕಾರಲ್ಲಿ 5.75 ಲಕ್ಷ ಹಣ ಮತ್ತು ಹಣ ಎಣಿಸುವ ಯಂತ್ರವೂ ಪತ್ತೆಯಾಗಿತ್ತು. ಅಷ್ಟೇ ಅಲ್ಲ, ಫೆಬ್ರವರಿ 17ರಂದು ಮನ್​ಸುಖ್ ಹಿರೇನ್​ರನ್ನು ಇದೇ ಬೆಂಜ್​ ಕಾರ್​ನಲ್ಲಿ ಕರೆದೊಯ್ಯಲಾಗಿತ್ತು ಎಂಬುದು ತನಿಖಾಧಿಕಾರಿಗಳಿಗೆ ಶಾಕ್ ನೀಡಿತ್ತು.

MERCEDES BENZH

ಪ್ರಾತಿನಿಧಿಕ ಚಿತ್ರ (ಚಿತ್ರಕೃಪೆ: ಮರ್ಸಿಡೀಸ್ ಬೆಂಜ್ ವೆಬ್​ಸೈಟ್)

ಈ ಪ್ರಕರಣದಲ್ಲಿ ವಶಕ್ಕೆ ಪಡೆದ ಇನ್ನೊಂದು ಕಾರು ಲ್ಯಾಂಡ್ ಕ್ರ್ಯೂಸರ್ ಪ್ರಾಡೋ. ಈ ಕಾರಿಗೂ ಸ್ಫೋಟಕ ಹೊತ್ತುನಿಂತಿದ್ದ ಹಸಿರು ಬಣ್ಣದ ಸ್ಕಾರ್ಪಿಯೋ ಕಾರಿಗೂ ನೇರಾನೇರ ಲಿಂಕ್ ಇದೆ ಎನ್ನಲಾಗಿದೆ. ಸಚಿನ್ ವಾಜೆ ವಾಸವಿದ್ದ ಟ್ರಿಡೆಂಟ್ ಹೊಟೇಲ್​ನ ಸಿಸಿಟಿವಿಯಲ್ಲಿ ಲ್ಯಾಂಡ್ ಕ್ರ್ಯೂಸರ್ ಪ್ರಾಡೋ ಸೆರೆಯಾಗಿದೆ. ಎನ್ಐಎ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮುನ್ನ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ ಇದರ ತನಿಖೆಯ ಉಸ್ತುವಾರಿ ವಹಿಸಿತ್ತು. ಆಗಲೇ ದಮನ್ ಬಳಿ ಕಪ್ಪನೆಯ ವೋಲ್ವೋ ಕಾರು ಮತ್ತು ಅದರಲ್ಲಿದ್ದ ಎರಡು ಬ್ಯಾಗ್​ಗಳನ್ನು ಎಟಿಎಸ್ ವಶಪಡೆದಿತ್ತು.

LAND CRUISER PRADO

ಲ್ಯಾಂಡ್ ಕ್ರೂಸರ್​ ಕಾರಿನ ಪ್ರಾತಿನಿಧಿಕ ಚಿತ್ರ (ಚಿತ್ರಕೃಪೆ: ವಿಕಿಪೀಡಿಯಾ)

ಮಾರ್ಚ್ 2ರಂದು ಸಚಿನ್ ವಾಜೆ ಆಡಿ ಕಾರು ಚಲಾಯಿಸುತ್ತಿರುವುದು ಬಾಂದ್ರಾ ವೊರ್ಲಿ ಸೀ ಲಿಂಕ್ ಬಳಿಯ ಟೋಲ್ ಗೇಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಚಿನ್ ವಾಜೆ ಆ ಪ್ರದೇಶದಲ್ಲಿ ಆಡಿ ಕಾರು ಓಡಿಸಿದ ಮೂರೇ ದಿನಕ್ಕೆ ಮನ್​ಸುಖ್ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಆನಂತರ ಮನ್​ಸುಖ್ ಹಿರೇನ್ ಸಾವಿನ ಆರೋಪದ ಮೇಲೆ ಪೊಲೀಸ್ ಕಾನ್ಸ್​ಟೇಬಲ್ ವಿನಾಯಕ್ ಶಿಂಧೆಯನ್ನು ತನಿಖಾ ದಳ ಬಂಧಿಸಿತ್ತು. ಅತ್ಯಂತ ಶಾಕಿಂಗ್ ವಿಷಯ ಏನೆಂದರೆ ಆಡಿ ಕಾರಿನಲ್ಲಿ ಸಚಿನ್ ವಾಜೆ ಜತೆ ವಿನಾಯಕ್ ಶಿಂಧೆಯೂ ಪ್ರಯಾಣ ಮಾಡಿದ್ದರು!

SACHIN VAZE AUDIO CAR

ಸಿಸಿಟಿವಿಯಲ್ಲಿ ಸೆರೆಸಿಕ್ಕ ಸಚಿನ್ ವಾಜೆ ಚಾಲಿಸುತ್ತಿದ್ದ ಆಡಿ ಕಾರ್

ವಿಶೇಷವೆಂದರೆ ಸಚಿನ್ ವಾಜೆ ಇಷ್ಟೆಲ್ಲ ಕಾರುಗಳನ್ನು ಬಳಸಿದ್ದರೂ, ಈ ಯಾವ ದುಬಾರಿ ಮತ್ತು ಐಷಾರಾಮಿ ಕಾರುಗಳೂ ಅವರ ಸ್ವಂತದ್ದಲ್ಲ. ಹಾಗಾದರೆ ಈ ಎಲ್ಲ ಕಾರುಗಳ ಮಾಲೀಕರು ಯಾರು? ಅವುಗಳನ್ನು ಸಚಿನ್ ವಾಜೆ ಹೇಗೆ ಬಳಸಿದರು ಮತ್ತು ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟ ಪ್ರಕರಣಕ್ಕೂ ಈ ಕಾರುಗಳಿಗೂ ಎಲ್ಲಿಂದೆಲ್ಲಿಗೆ ಸಂಬಂಧ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿರುವುದು ನಾವೊಂದೇ ಅಲ್ಲ, ಸ್ವತಃ ರಾಷ್ಟ್ರೀಯ ತನಿಖಾ ದಳವೂ ಈ ಕುರಿತು ಇಂಚಿಂಚೂ ಬಿಡದೇ ಶೋಧಿಸುತ್ತಿದೆ. ಕಾದುನೋಡೋಣ

ಇದನ್ನೂ ಓದಿ:ವ್ಯಕ್ತಿ ವ್ಯಕ್ತಿತ್ವ: ಹಿಂದೂ ಮುಸ್ಲಿಂ ಸಾಮರಸ್ಯ, ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಏಷ್ಯಾಕ್ಕೇ ಪ್ರಥಮ; ಸಚಿನ್ ವಾಜೆಯ ವೈವಿಧ್ಯಮಯ ವ್ಯಕ್ತಿತ್ವ

‘ಸೂಪರ್ ಕಾಪ್‘ ಆಗಲು ನಾನೇ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದೆ; ತಪ್ಪೊಪ್ಪಿಗೆ ಹೇಳಿಕೆ ನೀಡಿದ ಸಚಿನ್ ವಾಜೆ

(NIA recovers many high end cars including Mercedes, Audi used by Sachin Vaze linked to Antilia bomb scare)

Published On - 1:20 pm, Sun, 4 April 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ