ನೈಜೀರಿಯಾದಲ್ಲಿ ಕೊರೊನಾದ ಮತ್ತೊಂದು ಹೊಸ ರೂಪ; ಬ್ರಿಟನ್​ನಲ್ಲಿ ಪತ್ತೆಯಾದ ವೈರಾಣುಗಿಂತ ಭಿನ್ನ !

| Updated By: Lakshmi Hegde

Updated on: Dec 25, 2020 | 2:05 PM

ಕೊರೊನಾ ವೈರಾಣು ರೂಪಾಂತರಗೊಂಡು ಇಡೀ ವಿಶ್ವವನ್ನು ಮತ್ತೊಮ್ಮೆ ಭಯದ ಕಡಲಿಗೆ ನೂಕಿದೆ. ಬ್ರಿಟನ್​ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ಇದೀಗ ಹೊಸ ರೂಪದಲ್ಲಿ ನೈಜೀರಿಯಾ ದೇಶದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ವೈರಾಣು ತನ್ನ ರೂಪವನ್ನು ವೇಗವಾಗಿ ಬದಲಿಸಿಕೊಳ್ಳುತ್ತಿದೆ ಎಂಬುದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ನೈಜೀರಿಯಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾಕ್ಕೂ ಬ್ರಿಟನ್​ ಮತ್ತು ದ.ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಾಣುವಿಗೂ ಕೆಲ  ವ್ಯತ್ಯಾಸಗಳಿವೆ. ನೈಜೀರಿಯಾದಲ್ಲಿ ಕಾಣಿಸಿಕೊಂಡ ಕೊರೊನಾ 501 ಬಾರಿ ರೂಪಾಂತರಗೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸದ್ಯಕ್ಕೆ […]

ನೈಜೀರಿಯಾದಲ್ಲಿ ಕೊರೊನಾದ ಮತ್ತೊಂದು ಹೊಸ ರೂಪ; ಬ್ರಿಟನ್​ನಲ್ಲಿ ಪತ್ತೆಯಾದ ವೈರಾಣುಗಿಂತ ಭಿನ್ನ !
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ವೈರಾಣು ರೂಪಾಂತರಗೊಂಡು ಇಡೀ ವಿಶ್ವವನ್ನು ಮತ್ತೊಮ್ಮೆ ಭಯದ ಕಡಲಿಗೆ ನೂಕಿದೆ. ಬ್ರಿಟನ್​ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ಇದೀಗ ಹೊಸ ರೂಪದಲ್ಲಿ ನೈಜೀರಿಯಾ ದೇಶದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ವೈರಾಣು ತನ್ನ ರೂಪವನ್ನು ವೇಗವಾಗಿ ಬದಲಿಸಿಕೊಳ್ಳುತ್ತಿದೆ ಎಂಬುದಕ್ಕೆ ಪುಷ್ಠಿ ಸಿಕ್ಕಂತಾಗಿದೆ.

ನೈಜೀರಿಯಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾಕ್ಕೂ ಬ್ರಿಟನ್​ ಮತ್ತು ದ.ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಾಣುವಿಗೂ ಕೆಲ  ವ್ಯತ್ಯಾಸಗಳಿವೆ. ನೈಜೀರಿಯಾದಲ್ಲಿ ಕಾಣಿಸಿಕೊಂಡ ಕೊರೊನಾ 501 ಬಾರಿ ರೂಪಾಂತರಗೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸದ್ಯಕ್ಕೆ ಇದು ಅತಿ ಸಣ್ಣ ಪ್ರಮಾಣದ ಜನರಿಗೆ ಹಬ್ಬಿದೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೂ ಕಾಲಿಟ್ಟಿತಾ ರೂಪಾಂತರಗೊಂಡ ಕೊರೊನಾ
ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ ಜನರಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಪತ್ತೆಯಾಗಲಿದೆಯಾ ಎಂಬ ಸಂಶಯಕ್ಕೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಇದುವರೆಗೆ ಬ್ರಿಟನ್​ನಿಂದ ಆಗಮಿಸಿದ 45ಕ್ಕೂ ಹೆಚ್ಚು ಮಂದಿಯಲ್ಲಿ ಕೊವಿಡ್ ಪಾಸಿಟಿವ್ ಕಂಡುಬಂದಿದ್ದು, ಅವರ ದೇಹದಲ್ಲಿ ಕೊರೊನಾ ವೈರಾಣು ರೂಪಾಂತರ ಆಗಿದೆಯಾ ಎಂದು ತಿಳಿಯಲು ಸ್ಪೈಕ್​ ಜೀನ್​ ಆರ್​ಟಿಪಿಸಿಆರ್​ ಪರೀಕ್ಷೆ ನಡೆಸಲಾಗಿದೆ. ಅದರ ಫಲಿತಾಂಶ ಇಂದು ಸಿಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬ್ರಿಟನ್​ನಿಂದ ಬೀದರ್​ಗೆ ಆಗಮಿಸಿದ ವ್ಯಕ್ತಿಯ ಸಂಪರ್ಕಿತರ ಆರೋಗ್ಯದ ಮೇಲೆ ತೀವ್ರ ನಿಗಾ..

 

ರಾಜಧಾನಿ ಬೆಂಗಳೂರಿನಲ್ಲಿ ಬ್ರಿಟನ್ ಭೂತ, ಆ ಒಂದು ಸಾವಿರ ಜನರಿಂದಲೇ ರಾಜ್ಯಕ್ಕೆ ಕಾದಿದೆ ಕಂಟಕ!

 

Published On - 2:01 pm, Fri, 25 December 20