ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣ: ಕೊನೆಗೂ 4ಕ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಗ್ಯಾರಂಟಿ ಆಯ್ತು

ದೆಹಲಿ: ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ಪ್ರಮುಖ ಅಪರಾಧಿ ಅಕ್ಷಯ್ ಕುಮಾರ್​ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಪರಾಧಿ ಅಕ್ಷಯ್ ಸೇರಿದಂತೆ ನಾಲ್ವರಿಗೆ ಗಲ್ಲು ಶಿಕ್ಷೆ​ ಫಿಕ್ಸ್​ ಆಗಿದೆ. ಗಲ್ಲು ಶಿಕ್ಷೆ ಖಾಯಂಗೊಳಿಸಿ ಸುಪ್ರೀಂಕೋರ್ಟ್​ನ ನ್ಯಾ.ಬೋಪಣ್ಣ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ತೀರ್ಪು ನೀಡಿದೆ. ತೀರ್ಪು ಮರುಪರಿಶೀಲನೆ ಕೋರಿ ಅಪರಾಧಿ ಅಕ್ಷಯ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಅಕ್ಷಯ್‌ ಕುಮಾರ್ ವಾದಕ್ಕೆ ಮನ್ನಣೆ ಕೊಡಲು ಸಾಧ್ಯವಿಲ್ಲ. ತೀರ್ಪು ಮರುಪರಿಶೀಲನೆಗೆ ಯಾವುದೇ […]

ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣ: ಕೊನೆಗೂ 4ಕ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಗ್ಯಾರಂಟಿ ಆಯ್ತು
Follow us
ಸಾಧು ಶ್ರೀನಾಥ್​
|

Updated on:Dec 19, 2019 | 8:29 AM

ದೆಹಲಿ: ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ಪ್ರಮುಖ ಅಪರಾಧಿ ಅಕ್ಷಯ್ ಕುಮಾರ್​ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಪರಾಧಿ ಅಕ್ಷಯ್ ಸೇರಿದಂತೆ ನಾಲ್ವರಿಗೆ ಗಲ್ಲು ಶಿಕ್ಷೆ​ ಫಿಕ್ಸ್​ ಆಗಿದೆ. ಗಲ್ಲು ಶಿಕ್ಷೆ ಖಾಯಂಗೊಳಿಸಿ ಸುಪ್ರೀಂಕೋರ್ಟ್​ನ ನ್ಯಾ.ಬೋಪಣ್ಣ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ತೀರ್ಪು ನೀಡಿದೆ.

ತೀರ್ಪು ಮರುಪರಿಶೀಲನೆ ಕೋರಿ ಅಪರಾಧಿ ಅಕ್ಷಯ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಅಕ್ಷಯ್‌ ಕುಮಾರ್ ವಾದಕ್ಕೆ ಮನ್ನಣೆ ಕೊಡಲು ಸಾಧ್ಯವಿಲ್ಲ. ತೀರ್ಪು ಮರುಪರಿಶೀಲನೆಗೆ ಯಾವುದೇ ಕಾರಣಗಳಿಲ್ಲ. ಕೇಸ್‌ನ ತನಿಖೆ, ವಿಚಾರಣೆಯಲ್ಲಿ ಯಾವುದೇ ಲೋಪವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಕೇಸ್‌ನ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ R.ಭಾನುಮತಿ, ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ.ಬೋಪಣ್ಣ ಅವರ ತ್ರಿಸದಸ್ಯ ಪೀಠ ಹೇಳಿದೆ.

ಅಪರಾಧಿ ಪರ ವಕೀಲರ ವಾದ: ಅಪರಾಧಿ ಅಕ್ಷಯ್ ಕುಮಾರ್ ಪರ ವಕೀಲ ಎ.ಪಿ.ಸಿಂಗ್ ವಾದ ಮಂಡಿಸಿದ್ದರು. ಕಾನೂನು, ಮನುಷ್ಯತ್ವ ಎಂಬ ಎರಡು ರೀತಿಯ ವಾದಗಳಿವೆ. ಕಾನೂನಿನ ಮೂಲಕ ಅಪರಾಧಿಯನ್ನು ಶಿಕ್ಷಿಸಬಹುದು. ನೈತಿಕ ದಾರಿ ಮೂಲಕ ಅಪರಾಧವನ್ನು ತಡೆಯಬಹದು. ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರು ಸೇರಿಸಲಾಗಿದೆ. ಈ ಹಿಂದೆ ಮನುಷ್ಯರು 100 ವರ್ಷ ಬದುಕುತ್ತಿದ್ದರು. ಈಗ 50ರಿಂದ 60 ವರ್ಷ ಬದುಕುವುದೇ ಹೆಚ್ಚು. ಇಂತಹ ಪರಿಸ್ಥಿತಿ ಇದ್ದಾಗ ಗಲ್ಲು ಶಿಕ್ಷೆ ವಿಧಿಸಬಾರದು.

ಗಲ್ಲು ಶಿಕ್ಷೆಯೇ ಎಲ್ಲದಕ್ಕೂ ಪರಿಹಾರವಲ್ಲ. ಗಲ್ಲು ಶಿಕ್ಷೆಯಿಂದ ಏನು ಸಾಧಿಸಬಹುದು. ಅಕ್ಷಯ್ ಕುಮಾರ್ ಕುಟುಂಬಕ್ಕೆ‌ ಯಾರು ಜವಾಬ್ದಾರಿ. ಪೋರ್ನ್ ಸೈಟ್‌ಗಳನ್ನು ಬ್ಯಾನ್ ಮಾಡಬೇಕು. ರಾಜೀವ್ ಗಾಂಧಿ ಹಂತಕರಿಗೆ ವಿನಾಯಿತಿ ನೀಡಲಾಗಿದೆ. ಹಂತಕರಿಗೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ರಕ್ತಕ್ಕೆ ರಕ್ತ ಎನ್ನುವ ನೀತಿಯನ್ನು ಒಪ್ಪಬಾರದು ಎಂದು ಅಪರಾಧಿ ಪರ ವಕೀಲ ಎ.ಪಿ.ಸಿಂಗ್ ವಾದ ಮಂಡಿಸಿದ್ದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ:  ಅಪರಾಧಿಯ ತೀರ್ಪು ಮರುಪರಿಶೀಲನೆ ಮಾಡುವುದಕ್ಕೆ ಏನೂ ಉಳಿದಿಲ್ಲ. ಡಿಎನ್‌ಎ, ಎಫ್‌ಎಸ್‌ಎಲ್ ವರದಿ ಪರಿಶೀಲಿಸಲಾಗಿದೆ. DNA ವರದಿಯಲ್ಲಿ ಅಪರಾಧದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಎಲ್ಲವನ್ನೂ ಪರಿಗಣಿಸಿ ಕೆಳನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಉಳಿದ ಮೂವರ ಮರುಪರಿಶೀಲನಾ ಅರ್ಜಿ ತಿರಸ್ಕೃತವಾಗಿದೆ. ಅಕ್ಷಯ್‌ ಕುಮಾರ್ ಅರ್ಜಿ ಕೂಡ ಅದೇ ಮಾದರಿಯಾಗಿದೆ. ಈಗ ಮರುಪರಿಶೀಲನೆ ಮಾಡುವ ಅಗತ್ಯವಿಲ್ಲ.

ಉಳಿದ ಅಪರಾಧಿಗಳ ಅರ್ಜಿಗಳನ್ನು ಕಟ್ ಪೇಸ್ಟ್ ಮಾಡಲಾಗಿದೆ. ಉಳಿದವರ ಅರ್ಜಿಗಳನ್ನು ತಿರಸ್ಕಾರ ಮಾಡಿದಂತೆಯೇ ಅಕ್ಷಯ್ ಕುಮಾರ್ ಅರ್ಜಿಯನ್ನೂ ತಿರಸ್ಕರಿಸಬೇಕು. ಈ ಪ್ರಕರಣ ಗಲ್ಲುಶಿಕ್ಷೆಗೆ ಸಮರ್ಥವಾಗಿದೆ. ಗಲ್ಲು ಶಿಕ್ಷೆಯನ್ನೇ ನೀಡಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.

Published On - 1:43 pm, Wed, 18 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್