ಪೌರತ್ವ ತಿದ್ದುಪಡಿ ಕಾಯ್ದೆ: ಮುಂಬೈ, ಗೋವಾ, ಬಂಗಾಳದಲ್ಲಿ ತಣ್ಣಗಾಗದ ಕಿಚ್ಚು, ಬಾಲಿವುಡ್ ಮೌನಕ್ಕೆ ಕಂಗನಾ ಕಿಡಿ
ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚಿಗೆ ನಾರ್ತ್ ಈಸ್ಟ್ನಲ್ಲಿ ನೆತ್ತರು ಹರಿದಿದೆ.. ಪಶ್ಚಿಮ ಬಂಗಾಳ ಬೆಂಕಿ ಉಂಡೆಯಂತಾಗಿದೆ.. ರಾಷ್ಟ್ರ ರಾಜಧಾನಿ ದೆಹಲಿ ಧಗಧಗಿಸುತ್ತಿದೆ.. ಮುಂಬೈ, ಗೋವಾ, ಅಸ್ಸಾಂ, ಬಂಗಾಳದಲ್ಲೂ ಪ್ರೊಟೆಸ್ಟ್: ಯೆಸ್, ಪೌರತ್ವ ಕಾಯ್ದೆ ವಿರೋಧಿಸಿ ದೇಶದ ನಾನಾ ಭಾಗಗಳಲ್ಲಿ ನಡೀತಿರೋ ಪ್ರತಿಭಟನೆ, ಹೋರಾಟ ಸದ್ಯಕ್ಕಂತೂ ನಿಲ್ಲೋ ಲಕ್ಷಣ ಕಾಣ್ತಿಲ್ಲ.. ಅದ್ರಲ್ಲೂ ರಾಷ್ಟ್ರ ರಾಜಧಾನಿ ದಿಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೊನ್ನೆ ಮೊನ್ನೆಯಷ್ಟೇ ಖಾಕಿ, ಕೇಂದ್ರ ಹಾಗೂ ಕಾಯ್ದೆ ವಿರುದ್ಧ ಸಿಡಿದೆದ್ದಿದ್ದ ವಿದ್ಯಾರ್ಥಿಗಳು ಸದ್ಯ ತಣ್ಣಗಾಗಿದ್ದಾರೆ. […]
ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚಿಗೆ ನಾರ್ತ್ ಈಸ್ಟ್ನಲ್ಲಿ ನೆತ್ತರು ಹರಿದಿದೆ.. ಪಶ್ಚಿಮ ಬಂಗಾಳ ಬೆಂಕಿ ಉಂಡೆಯಂತಾಗಿದೆ.. ರಾಷ್ಟ್ರ ರಾಜಧಾನಿ ದೆಹಲಿ ಧಗಧಗಿಸುತ್ತಿದೆ..
ಮುಂಬೈ, ಗೋವಾ, ಅಸ್ಸಾಂ, ಬಂಗಾಳದಲ್ಲೂ ಪ್ರೊಟೆಸ್ಟ್: ಯೆಸ್, ಪೌರತ್ವ ಕಾಯ್ದೆ ವಿರೋಧಿಸಿ ದೇಶದ ನಾನಾ ಭಾಗಗಳಲ್ಲಿ ನಡೀತಿರೋ ಪ್ರತಿಭಟನೆ, ಹೋರಾಟ ಸದ್ಯಕ್ಕಂತೂ ನಿಲ್ಲೋ ಲಕ್ಷಣ ಕಾಣ್ತಿಲ್ಲ.. ಅದ್ರಲ್ಲೂ ರಾಷ್ಟ್ರ ರಾಜಧಾನಿ ದಿಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೊನ್ನೆ ಮೊನ್ನೆಯಷ್ಟೇ ಖಾಕಿ, ಕೇಂದ್ರ ಹಾಗೂ ಕಾಯ್ದೆ ವಿರುದ್ಧ ಸಿಡಿದೆದ್ದಿದ್ದ ವಿದ್ಯಾರ್ಥಿಗಳು ಸದ್ಯ ತಣ್ಣಗಾಗಿದ್ದಾರೆ. ಆದ್ರೆ ಅವರ ಆಕ್ರೋಶದ ಕಿಚ್ಚು ಮಾತ್ರ ಇನ್ನೂ ಆರಿಲ್ಲ. ತಡರಾತ್ರಿ ರೋಡಿಗಿಳಿದ ಜೆಎನ್ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಆಜಾದಿ ಘೋಷಣೆಗಳನ್ನ ಕೂಗಿದ್ರು.
ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಗೋವಾದ ಪಣಜಿಯಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಪೌರತ್ವ ಕಾಯ್ದೆ ವಿರುದ್ಧ ಆಕ್ರೋಶ ಹೊರಹಾಕಿದ್ರು. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಪೌರತ್ವದ ಕಿಚ್ಚು ಕಡಿಮೆಯಾಗಿಲ್ಲ. ಪ್ರತಿದಿನ ಬೀದಿಗಿಳಿಯುತ್ತಿರೋ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರ ಹಾಗೂ ಕಾಯ್ದೆ ವಿರುದ್ಧದ ಸಿಟ್ಟನ್ನ ಹೊರಹಾಕುತ್ತಿವೆ.
ಹಿಂಸಾಚಾರದಲ್ಲಿ ಭಾಗಿಯಾದ ನಾಲ್ವರ ಗುರುತು ಪತ್ತೆ! ಹೌದು, ದೆಹಲಿಯ ಜಾಮಿಯಾ ನಗರದಲ್ಲಿ ಮೊನ್ನೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿ ಅರೆಸ್ಟ್ ಆಗಿರೋ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದೆ. ಆರೋಪಿಗಳನ್ನ ಅನಾಲ್, ಜುಮ್ಮಾನ್, ಯುನುಸ್ ಹಾಗೂ ಅನ್ವರ್ ಕಾಲಾ ಅಂತ ಗುರುತಿಸಲಾಗಿದೆ. ಶಾಕಿಂಗ್ ಅಂದ್ರೆ ಇವಱರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳಲ್ಲ. ಅಲ್ಲದೆ ನಾಲ್ವರು ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರನ್ನ ತಡೆದ ಟಿಎಂಸಿ ಕಾರ್ಯಕರ್ತರು! ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಕಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಣ್ಣ ಪಡೀತಿದೆ. ಹಿಂಸಾಚಾರದಿಂದ ನಲುಗಿದ್ದ ಮಾಲ್ದಾ ಹಾಗೂ ಮುರ್ಶಿದಾಬಾದ್ಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನ ಟಿಎಂಸಿ ಕಾರ್ಯಕರ್ತರು ತಡೆದಿದ್ದಾರೆ. ಇದೇ ವೇಳೆ ಬಿಜೆಪಿ ಸಂಸದರಿಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಮತಾ ಸರ್ಕಾರದ ನಡೆ ವಿರುದ್ಧ ಪಶ್ಚಿಮ ಬಂಗಾಳ ಗವರ್ನರ್ ಹಾಗೂ ಕಮಲ ನಾಯಕರು ಕಿಡಿಕಾರಿದ್ದಾರೆ.
‘ಪೌರತ್ವ’ ಕುರಿತು ಬಾಲಿವುಡ್ ಮೌನಕ್ಕೆ ಕಂಗನಾ ಕಿಡಿ: ಇನ್ನು ಹೈದರಾಬಾದ್ನಲ್ಲಿ ತಲೈವಿ ಚಿತ್ರದ ಶೂಟಿಂಗ್ನಲ್ಲಿರೋ ಬಾಲಿವುಡ್ ಕ್ವೀನ್ ಕಂಗನಾ ರನಾವತ್, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅದರ ವಿರುದ್ಧ ನಡೆಯುತ್ತಿರೋ ಹಿಂಸಾಚಾರ ಬಗ್ಗೆ ತುಟಿಕ್ ಪಿಟಿಕ್ ಅನ್ನದ ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ. ಬಾಲಿವುಡ್ ಹೇಡಿಗಳಿಂದ ತುಂಬಿದೆ ಅಂತ ಬೆಂಕಿ ಉಗುಳಿದ್ದಾರೆ.
‘ಮುಸ್ಲಿಮರಿಗೆ ಸಾಕಷ್ಟು ರಾಷ್ಟ್ರಗಳಿವೆ, ಹಿಂದೂಗಳಿಗೆ ಒಂದೂ ಇಲ್ಲ’ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿರೋ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಸ್ಲಿಮರಿಗೆ ಸಾಕಷ್ಟು ರಾಷ್ಟ್ರಗಳಿದ್ದು, ಅವರು ಅಲ್ಲಿನ ಪೌರತ್ವವನ್ನ ಪಡೀಬಹುದು. ಆದ್ರೆ ಹಿಂದೂಗಳಿಗೆ ಜಗತ್ತಿನಲ್ಲಿ ಯಾವುದೇ ಒಂದು ನಿರ್ದಿಷ್ಟ ದೇಶವಿಲ್ಲ. ಹೀಗಾಗಿ ಈ ಕಾಯ್ದೆ ಅವಶ್ಯಕ ಎಂದಿದ್ದಾರೆ.
ಇದೆಲ್ಲದರ ನಡುವೆ ಭಾರತ ಹಾಗೂ ಬಾಂಗ್ಲಾದೇಶ ನಡುವೆ ನದಿ ವಿಚಾರಕ್ಕೆ ಸಂಬಂಧಿಸಿದಂತೆ ನಡೀಬೇಕಿದ್ದ ಮಾತುಕತೆ ಕೂಡ ಮುರಿದುಬಿದ್ದಿದೆ. ಒಟ್ನಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು ದಿನಕಳೆದಂತೆ ಒಂದೊಂದೇ ರಾಜ್ಯಕ್ಕೆ ವ್ಯಾಪಿಸುತ್ತಿದ್ದು, ಹಲವೆಡೆ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.