ಪ್ರಧಾನಿ ಮೋದಿ ನೂತನ ಕ್ಯಾಬಿನೆಟ್ನ ಅತ್ಯಂತ ಕಿರಿಯ ಸಚಿವ ಇವರು; ಬರೀ 35ವರ್ಷಕ್ಕೆ ಕೇಂದ್ರ ಮಂತ್ರಿ ಪಟ್ಟ
Union Cabinet Expansion: ಕೂಚ್ ಬೆಹಾರ್ನಿಂದ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುತ್ತಿರುವ ಮೊದಲ ಸಂಸದ ಎಂಬ ಹೆಗ್ಗಳಿಕೆಗೂ ಈ ಕಿರಿಯ ಸಚಿವ ನಿಶಿತ್ ಪ್ರಮಾಣಿಕ್ ಪಾತ್ರರಾಗಿದ್ದಾರೆ.
ರಾಜಕಾರಣಿಗಳಿಗೆ ವಯಸ್ಸಾಗಿರಬೇಕು..ಅದರಲ್ಲೂ ಸಚಿವ ಸ್ಥಾನ ಸಿಗಬೇಕೆಂದರೆ ಅವರಿಗೆ 50ವರ್ಷ ದಾಟಿರಲೇಬೇಕು ಎಂಬ ಅಲಿಖಿತ ನಿಯಮವನ್ನು ಬದಿಗೊತ್ತಿ, ಸಾಧ್ಯವಾದಷ್ಟೂ ಯುವಜನರಿಗೆ ಅವಕಾಶ ನೀಡುತ್ತಿದೆ ಪ್ರಧಾನಿ ಮೋದಿ ಸರ್ಕಾರ. ಹಾಗೇ ಈ ಬಾರಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಸಹ ಅನೇಕ ಯುವ ನಾಯಕರಿಗೆ ಅವಕಾಶ ನೀಡಲಾಗಿದೆ. ಹಾಗೇ ಈ ಬಾರಿ ಸಂಪುಟ ವಿಸ್ತರಣೆ ವೇಳೆ ಸ್ಥಾನ ಪಡೆದ ಅತ್ಯಂತ ಕಿರಿಯ ಸಂಸದನೆಂದರೆ ಕೋಲ್ಕತ್ತ ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದ ನಿಶಿತ್ ಪ್ರಮಾಣಿಕ್.
ಪಶ್ಚಿಮ ಬಂಗಾಳದಿಂದ ಈ ಬಾರಿ ಒಟ್ಟು ನಾಲ್ವರು ಸಂಸದರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುತ್ತಿದ್ದು, ಅದರಲ್ಲಿ 35 ವರ್ಷದ ನಿಶಿತ್ ಪ್ರಮಾಣಿಕ್ ಕೂಡ ಒಬ್ಬರು. ಹಾಗೇ, ಕೂಚ್ ಬೆಹಾರ್ನಿಂದ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುತ್ತಿರುವ ಮೊದಲ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಇವರು ರಾಜ್ಭೋಂಗ್ಶಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಜನಾಂಗದವರೊಬ್ಬ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದು ನಿಜಕ್ಕೂ ಸಾಧನೆ ಎಂದೇ ಹೇಳಲಾಗುತ್ತಿದೆ.
ನಿಶಿತ್ ಪ್ರಮಾಣಿಕ್ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಮೊದಲು ತೃಣಮೂಲ ಕಾಂಗ್ರೆಸ್ನಲ್ಲಿಯೇ ಇದ್ದವರು. ನಂತರ ಬಿಜೆಪಿ ಸೇರಿ 2019ರ ಲೋಕಸಭಾ ಚುನಾವಣೆಯಲ್ಲಿ ಕೂಚ್ ಬೆಹಾರ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರೀಗ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇವರು ಬಿಸಿಎ ಪದವೀಧರರಾಗಿದ್ದು, ರಾಜಕೀಯಕ್ಕೆ ಇಳಿಯುವ ಮೊದಲು ಶಿಕ್ಷಕ ವೃತ್ತಿ ನಡೆಸುತ್ತಿದ್ದರು.
ಇದನ್ನೂ ಓದಿ: A Narayanaswamy Profile: ದಲಿತ ನಾಯಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ, ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸಂಪುಟ ಗೌರವ
Published On - 7:18 pm, Wed, 7 July 21