‘‘ದೇಶದ ಪ್ರಧಾನಿಯಾಗುವುದು ನನ್ನ ಗುರಿಯಲ್ಲ’’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡ ಗಡ್ಕರಿ, ‘‘ಹಿಂದೊಮ್ಮೆ ವ್ಯಕ್ತಿಯೊಬ್ಬರು ನೀವು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿ ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದರು, ಆದರೆ ಆ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೆ, ಪ್ರಧಾನಿಯಾಗುವ ಗುರಿ ನನ್ನದಲ್ಲ’’ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿಯಾಗುವುದು ನನ್ನ ಗುರಿಯಲ್ಲ, ನಾನು ನನ್ನ ಮೌಲ್ಯಗಳಿಗೆ ಹಾಗೂ ನನ್ನ ಸಂಸ್ಥೆಗೆ ನಿಷ್ಠನಾಗಿದ್ದೇನೆ, ಯಾವುದೇ ಸ್ಥಾನಕ್ಕೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ, ಈ ಮೌಲ್ಯವು ಭಾರತದ ಪ್ರಜಾಪ್ರಭುತ್ವದ ಆಧಾರವಾಗಿದೆ ಎಂದರು.
2024 ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ನಿತಿನ್ ಗಡ್ಕರಿ ಅವರ ಹೆಸರು ಪ್ರಧಾನಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಎಂದು ಚರ್ಚೆಗೆ ಬಂದಿತ್ತು. ಈ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಂತರ ನರೇಂದ್ರ ಮೋದಿಯ ನಂತರ ಪ್ರಧಾನಿಯಾಗಲು ಮೂರನೇ ಅತ್ಯಂತ ಸೂಕ್ತ ನಾಯಕ ಎಂದು ಶ್ರೇಯಾಂಕ ನೀಡಿತ್ತು.
2019ರಲ್ಲಿಯೂ ಪ್ರಧಾನಿ ಹುದ್ದೆಗೆ ಹೆಸರು ಕೇಳಿಬಂದಿತ್ತು
2019ರಲ್ಲಿ ಕೂಡ ಇದೇ ರೀತಿಯ ಚರ್ಚೆಗಳು ನಡೆದಾಗ ಗಡ್ಕರಿ ತಿರಸ್ಕರಿಸಿದ್ದರು. 2019 ರಲ್ಲಿ, ಗಡ್ಕರಿ ಅವರು ಭಾರತದ ಪ್ರಧಾನಿ ಹುದ್ದೆಯು ನರೇಂದ್ರ ಮೋದಿ ಎಂಬ ಸಮರ್ಥರ ಕೈಯಲ್ಲಿದೆ. ನಾವೆಲ್ಲರೂ ಅವರಿಗೆ ಬೆಂಬಲ ನೀಡಲು ಅವರ ಹಿಂದೆ ಇದ್ದೇವೆ ಎಂದಿದ್ದರು.
ಮತ್ತಷ್ಟು ಓದಿ: ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?
ನಾಗ್ಪುರ ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಗೆದ್ದಿರುವ ಗಡ್ಕರಿ ಅವರು ಬಿಜೆಪಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ ಮತ್ತು ಆರ್‌ಎಸ್‌ಎಸ್‌ನಿಂದ ಬಲವಾದ ಬೆಂಬಲವನ್ನು ಹೊಂದಿದ್ದಾರೆ. ಪ್ರಸ್ತುತ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
Nagpur, Maharashtra | Union Minister Nitin Gadkari says, “I do not want to name anyone but a person said to me, if you are going to become a Prime Minister, we will support you pic.twitter.com/puFlUMoXIE
— Match Point (@MatchPoiint) September 15, 2024
ಹತ್ತು ವರ್ಷಗಳಿಗೂ ಹೆಚ್ಚು ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. 2009ರಿಂದ 2013ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗಡ್ಕರಿ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ತಮ್ಮ ಹತ್ತಿರದ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು 1,37,603 ಅಂತರದಿಂದ ಸೋಲಿಸಿದರು.
ಈ ಚುನಾವಣೆಯಲ್ಲಿ ಗಡ್ಕರಿ ಅವರ ಗೆಲುವಿನ ಅಂತರ 78,397ಕ್ಕೆ ಕುಸಿದಿದೆ. 2019ರಲ್ಲಿ ಅವರು ಕಾಂಗ್ರೆಸ್‌ನ ನಾನಾ ಪಟೋಲೆ ಅವರನ್ನು 2,16,000 ಮತಗಳಿಂದ ಸೋಲಿಸಿದ್ದರು. ಬಿಜೆಪಿ ನಾಯಕ 2014 ರಲ್ಲಿ ಮೊದಲು ಕ್ಷೇತ್ರದಿಂದ ಸ್ಪರ್ಧಿಸಿ 2,84,828 ಮತಗಳಿಂದ ಗೆದ್ದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Sun, 15 September 24