ಆರ್‌ಎಸ್‌ಎಸ್ ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ? ರತನ್ ಟಾಟಾ ಕೇಳಿದ ಪ್ರಶ್ನೆಗೆ ನಿತಿನ್ ಗಡ್ಕರಿ ಉತ್ತರ ಹೀಗಿತ್ತು
ಆಸ್ಪತ್ರೆ ಎಲ್ಲಾ ಸಮುದಾಯಗಳಿಗೆ ಮತ್ತು ಆರ್‌ಎಸ್‌ಎಸ್‌ನಲ್ಲಿ ಅಂತಹ ಯಾವುದೇ (ಧರ್ಮದ ಆಧಾರದ ಮೇಲೆ ತಾರತಮ್ಯ) ನಡೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಕೇಂದ್ರ ಸಚಿವರು ಹೇಳಿದರು
ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಕೈಗಾರಿಕೋದ್ಯಮಿ ರತನ್ ಟಾಟಾಗೆ (Ratan Tata) ಒಮ್ಮೆ ಹೇಳಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಹೇಳಿದ್ದಾರೆ. ಪುಣೆಯ ಸಿನ್ಹಗಡ ಪ್ರದೇಶದಲ್ಲಿ ಚಾರಿಟಬಲ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಗಡ್ಕರಿ, ತಾವು ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದ ಘಟನೆಯನ್ನು ವಿವರಿಸಿದರು. ಔರಂಗಾಬಾದ್‌ನಲ್ಲಿ ದಿವಂಗತ ಆರ್‌ಎಸ್‌ಎಸ್ ಮುಖ್ಯಸ್ಥ ಕೆಬಿ ಹೆಡ್ಗೆವಾರ್ ಅವರ ಹೆಸರಿನ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು. ಆಗ ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೆ. ಆರೆಸ್ಸೆಸ್ ಹಿರಿಯ ಕಾರ್ಯಕರ್ತರೊಬ್ಬರು ಆಸ್ಪತ್ರೆಯನ್ನು ರತನ್ ಟಾಟಾ ಅವರು ಉದ್ಘಾಟಿಸಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದು ನನ್ನಲ್ಲಿ ಸಹಾಯ ಮಾಡುವಂತೆ ಕೇಳಿಕೊಂಡರು. ನಾನು ಟಾಟಾ ಅವರನ್ನು ಸಂಪರ್ಕಿಸಿ ದೇಶದ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಕೊಡುಗೆಯನ್ನು ಉಲ್ಲೇಖಿಸಿ ಆಸ್ಪತ್ರೆಯನ್ನು ಉದ್ಘಾಟಿಸಲು ಮನವೊಲಿಸಿದೆ ಎಂದು ಅವರು ಹೇಳಿದರು. ಆಸ್ಪತ್ರೆ ತಲುಪಿದ ಟಾಟಾ ಅವರು ಆಸ್ಪತ್ರೆ ಹಿಂದೂ ಸಮುದಾಯದವರಿಗೆ ಮಾತ್ರವೇ ಎಂದು ಕೇಳಿದರು. ನಾನು ಅವರಲ್ಲಿ ನೀವು ಯಾಕೆ ಹಾಗೆ ಯೋಚಿಸುತ್ತೀರಿ? ಎಂದು ಕೇಳಿದೆ. ಅವರು ತಕ್ಷಣವೇ ಇದು ಆರ್‌ಎಸ್‌ಎಸ್‌ಗೆ ಸೇರಿದೆ ಎಂದರು.
When I was a min in Maharashtra govt,one of the RSS functionaries requested me to bring Ratan Tata to inaugurate a hospital. During inauguration,Ratan Tata asked me if this hospital is only for Hindu community,to which I asked him why he feels that?: Union Min Nitin Gadkari (1/2) pic.twitter.com/BevZBI1zJU
— ANI (@ANI) April 14, 2022
ಆಸ್ಪತ್ರೆ ಎಲ್ಲಾ ಸಮುದಾಯಗಳಿಗೆ ಮತ್ತು ಆರ್‌ಎಸ್‌ಎಸ್‌ನಲ್ಲಿ ಅಂತಹ ಯಾವುದೇ (ಧರ್ಮದ ಆಧಾರದ ಮೇಲೆ ತಾರತಮ್ಯ) ನಡೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಕೇಂದ್ರ ಸಚಿವರು ಹೇಳಿದರು. ನಂತರ ನಾನು ಟಾಟಾ ಅವರಿಗೆ ಹಲವಾರು ವಿಷಯಗಳನ್ನು ವಿವರಿಸಿದೆ ಅವರು “ತುಂಬಾ ಸಂತೋಷಪಟ್ಟರು” ಎಂದು ಗಡ್ಕರಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ಬಗ್ಗೆ ರಾಜ್ ಠಾಕ್ರೆ ಏಕೆ ಮೌನವಾಗಿದ್ದಾರೆ ಎಂಬುದು ಜನರಿಗೆ ಗೊತ್ತು: ಶರದ್ ಪವಾರ್