ಚೆನ್ನೈ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನ ಕುತಂತ್ರದ ಯುದ್ಧವನ್ನು ಮತ್ತೆ ಶುರು ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಭಾರತದ ಭದ್ರತೆ ವಿಚಾರದಲ್ಲಿ ನಮ್ಮ ರಕ್ಷಣಾ ಪಡೆಗಳು ಯಾವುದೇ ಜಾಗದಲ್ಲಿ, ಯಾವುದೇ ಶತ್ರುಗಳೊಂದಿಗೆ ಹೋರಾಡಲು ಸದಾ ಸಿದ್ಧವಾಗಿವೆ ಎಂದೂ ಪುನರುಚ್ಚರಿಸಿದ್ದಾರೆ.
ತಮಿಳುನಾಡಿನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ (DSSC) ಮಾತನಾಡಿದ ಅವರು, ಎರಡು ಯುದ್ಧಗಳನ್ನು ಸೋತ ನಂತರ ನಮ್ಮ ನೆರೆ ರಾಷ್ಟ್ರ (ಪಾಕಿಸ್ತಾನ) ಇದೀಗ ಕುತಂತ್ರದ ಮೂಲಕ ಯುದ್ಧಕ್ಕೆ ಮುಂದಾಗಿದೆ. ಅದರಲ್ಲೂ ಭಯೋತ್ಪಾದನೆ ಎಂಬುದು ಅದರ ರಾಜ್ಯನೀತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ನಮ್ಮ ನೆರೆರಾಷ್ಟ್ರ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಮೂಲಕ ಭಾರತವನ್ನು ಗುರಿಯಾಗಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಯಶಸ್ವಿಯಾಗಲು ಕಾರಣ ಭಾರತದ ಶಕ್ತಿ. 2016ರಲ್ಲಿ ಗಡಿಯಾಚೆ ನಡೆಸಲಾದ ದಾಳಿ, 2019ರ ಬಾಲಾಕೋಟ್ ದಾಳಿಗಳು ಭಾರತದ ಮಿಲಿಟರಿ ಸಾಮರ್ಥ್ಯವನ್ನು ತೋರಿಸುತ್ತವೆ ಎಂದು ಹೇಳಿದರು.
ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಅಫ್ಘಾನಿಸ್ತಾನದ ಬದಲಾದ ಪರಿಸ್ಥಿತಿ ಭಾರತಕ್ಕೂ ಸವಾಲು ಹೌದು. ನಾವು ನಮ್ಮ ಕಾರ್ಯತಂತ್ರದ ಬಗ್ಗೆ ಮರುಯೋಚನೆ ಮಾಡಬೇಕಾಗುತ್ತದೆ. ಈ ಹೊತ್ತಲ್ಲಿ ಸಮಗ್ರ ಯುದ್ಧ ಗುಂಪುಗಳ ರಚನೆ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಶತ್ರುಗಳ ವಿರುದ್ಧ ಹೋರಾಡುವ ಹೊಸ ಗುಂಪು ಇದು ಎಂದು ಹೇಳಿದರು.
If a ceasefire (between India & Pakistan) is successful today, it is because of our strength. In 2016, cross-border strikes changed our reactionary mindset into a proactive mindset, which was further strengthened by the Balakot airstrike in 2019: Defence Minister Rajnath Singh pic.twitter.com/kYjRyV6Alx
— ANI (@ANI) August 29, 2021
ಇದನ್ನೂ ಓದಿ: ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ