ಆಸ್ಪತ್ರೆ ಇಲ್ಲ, ರಸ್ತೆಯೂ ಇಲ್ಲ: 17 ಕಿ.ಮೀ ಹೊತ್ತು ಸಾಗಿದ್ರೂ ಜೀವ ಉಳಿಯಲಿಲ್ಲ!
ಹೈದರಾಬಾದ್: ಆಂಧ್ರದ ವಿಜಯನಗರಂ ಜಿಲ್ಲೆಯ ಪಲ್ಲಪುದುಂಗಾಡ ಗ್ರಾಮದ ನಾಗರಾಜ್ಗೆ ಕೆಲ ದಿನಗಳ ಹಿಂದೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗೋಣ ಅಂದ್ರೆ ಹತ್ತಿರದಲ್ಲಿ ಆಸ್ಪತ್ರೆ ಇಲ್ಲ. ಬೇರೆ ಆಸ್ಪತ್ರೆಗೆ ಸೇರಿಸೋಣ ಅಂದ್ರೆ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಹೀಗಾಗಿ ಮನೆಯಲ್ಲೇ ಮದ್ದು ನೀಡಿದ್ರೂ ಯುವಕನ ಸ್ಥಿತಿ ಬಿಗಡಾಯಿಸತೊಡಗಿದೆ. ತಕ್ಷಣ ಎಚ್ಚೆತ್ತುಕೊಂಡ ಕುಟುಂಬಸ್ಥರು ಡೋಲಿ ರೆಡಿ ಮಾಡಿದ್ದಾರೆ. ಅದ್ರಲ್ಲಿ ರೋಗಿಯನ್ನ ಕೂರಿಸಿಕೊಂಡು ಬರೋಬ್ಬರಿ 17 ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗಿದ್ದಾರೆ. ಅಲ್ಲಿಂದ ಌಂಬುಲೆನ್ಸ್ನಲ್ಲಿ ತೆರಳಿ ಆಸ್ಪತ್ರೆಗೆ ಅಡ್ಮಿಟ್ […]

ಹೈದರಾಬಾದ್: ಆಂಧ್ರದ ವಿಜಯನಗರಂ ಜಿಲ್ಲೆಯ ಪಲ್ಲಪುದುಂಗಾಡ ಗ್ರಾಮದ ನಾಗರಾಜ್ಗೆ ಕೆಲ ದಿನಗಳ ಹಿಂದೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗೋಣ ಅಂದ್ರೆ ಹತ್ತಿರದಲ್ಲಿ ಆಸ್ಪತ್ರೆ ಇಲ್ಲ. ಬೇರೆ ಆಸ್ಪತ್ರೆಗೆ ಸೇರಿಸೋಣ ಅಂದ್ರೆ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಹೀಗಾಗಿ ಮನೆಯಲ್ಲೇ ಮದ್ದು ನೀಡಿದ್ರೂ ಯುವಕನ ಸ್ಥಿತಿ ಬಿಗಡಾಯಿಸತೊಡಗಿದೆ.
ತಕ್ಷಣ ಎಚ್ಚೆತ್ತುಕೊಂಡ ಕುಟುಂಬಸ್ಥರು ಡೋಲಿ ರೆಡಿ ಮಾಡಿದ್ದಾರೆ. ಅದ್ರಲ್ಲಿ ರೋಗಿಯನ್ನ ಕೂರಿಸಿಕೊಂಡು ಬರೋಬ್ಬರಿ 17 ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗಿದ್ದಾರೆ. ಅಲ್ಲಿಂದ ಌಂಬುಲೆನ್ಸ್ನಲ್ಲಿ ತೆರಳಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಆದ್ರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರಿಂದ ಬಾಳಿ ಬದುಕಬೇಕಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಯುವಕನ್ನ ಉಳಿಸಿಕೊಳ್ಳಲು ಇಷ್ಟೆಲ್ಲಾ ಹರಸಾಹಸ ಪಟ್ಟಿದ್ದ ಕುಟುಂಬಸ್ಥರು ಬಳಿಕ ಅದೇ ಡೋಲಿಯಲ್ಲಿ ಯುವಕ ಮೃತದೇಹ ಹೊತ್ತುಕೊಂಡು ಊರಿಗೆ ಬಂದಿದ್ದಾರೆ. ಇದು ಕೇವಲ ವಿಜಯನಗರಂ ಜಿಲ್ಲೆಯ ಸಮಸ್ಯೆಯಲ್ಲ. ವಿಶಾಖಪಟ್ಟಣ ಭಾಗದ ವಿವಿಧ ಗ್ರಾಮಗಳಿಗೆ ರಸ್ತೆ, ಆಸ್ಪತ್ರೆಗಳಿಲ್ಲದೆ ಜನ ಪರದಾಡುತ್ತಿದ್ದಾರೆ.

Published On - 7:58 am, Thu, 30 January 20




