Amit Shah in Ayodhya ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

'ರಾಮ್ ಲಲ್ಲಾ' ಇಷ್ಟು ವರ್ಷಗಳ ಕಾಲ ಟೆಂಟ್‌ನಲ್ಲಿ ಏಕೆ ಇರಬೇಕಾಯಿತು? 'ಕರ ಸೇವಕರಿಗೆ ' ಶೂಟ್ ಮಾಡಿದವರು ಯಾರು? ಅಯೋಧ್ಯೆಯಲ್ಲಿ ರಾಮ ನವಮಿ ಮತ್ತು ದೀಪೋತ್ಸವ ಆಚರಣೆಯನ್ನು ನಿಲ್ಲಿಸಿದವರು ಯಾರು? ಇದೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದ ಅಮಿತ್ ಶಾ.

Amit Shah in Ayodhya ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ
ಅಮಿತ್ ಶಾ
Updated By: ರಶ್ಮಿ ಕಲ್ಲಕಟ್ಟ

Updated on: Dec 31, 2021 | 2:44 PM

ಅಯೋಧ್ಯೆ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರು ಶುಕ್ರವಾರ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ದೇಗುಲಕ್ಕೆ ಭೇಟಿ ನೀಡುವ ಮೂಲಕ ಅಯೋಧ್ಯೆಗೆ ಭೇಟಿ ಆರಂಭಿಸಿದರು. ಮೊದಲಿಗೆ ನಿರ್ಮಾಣ ಹಂತದಲ್ಲಿರುವ ರಾಮಜನ್ಮಭೂಮಿ ದೇಗುಲದ (Ram Janmabhoomi Temple) ಆವರಣದಲ್ಲಿ ಸಸಿ ನೆಟ್ಟ ಗೃಹ ಸಚಿವರು, ಬಳಿಕ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು. ನಂತರ ರಾಮಜನ್ಮಭೂಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಶಾ, ಶ್ರೀ ಹನುಮಾನ್‌ಗರ್ಹಿ (Shri Hanumangarhi Temple)ದೇವಸ್ಥಾನಕ್ಕೆ ಭೇಟಿ ನೀಡಿದರು. ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಕಾರ, ಶಾ ಅವರು ಅಯೋಧ್ಯೆ (ಗ್ರಾಮೀಣ)ದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಗೃಹ ಸಚಿವರು ಗೋರಖ್‌ಪುರದ ಸಂತ ಕಬೀರ್ ನಗರದಲ್ಲಿ ಸಾರ್ವಜನಿಕ ಸಭೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಇದರ ನಂತರ, ಶಾ ಅವರು ಬರೇಲಿಯಲ್ಲಿ ರೋಡ್‌ಶೋ ನಡೆಸಲಿದ್ದಾರೆ ಮತ್ತು ಸಂಜೆ 7 ಗಂಟೆಗೆ ಬರೇಲಿಯಲ್ಲಿ ಸಾಂಸ್ಥಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.


ಸಾರ್ವಜನಿಕ ಸಭೆಯನ್ನುದ್ದೇಶಿಸಿ ಶಾ ಭಾಷಣ
‘ರಾಮ್ ಲಲ್ಲಾ’ ಇಷ್ಟು ವರ್ಷಗಳ ಕಾಲ ಟೆಂಟ್‌ನಲ್ಲಿ ಏಕೆ ಇರಬೇಕಾಯಿತು? ‘ಕರ ಸೇವಕರಿಗೆ ‘ ಶೂಟ್ ಮಾಡಿದವರು ಯಾರು? ಅಯೋಧ್ಯೆಯಲ್ಲಿ ರಾಮ ನವಮಿ ಮತ್ತು ದೀಪೋತ್ಸವ ಆಚರಣೆಯನ್ನು ನಿಲ್ಲಿಸಿದವರು ಯಾರು? ಇದೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು  ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ

ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರ ಮೋದಿಯವರು ಪ್ರಧಾನಿಯಾದರು. 75 ವರ್ಷಗಳ ಹಿಂದೆ-ಅಂದಿನ ಗೃಹ ಸಚಿವರು ಸೋಮನಾಥ ದೇವಾಲಯವನ್ನು ನಿರ್ಮಿಸಿದರು ಮತ್ತು ಈಗ 77 ವರ್ಷಗಳ ನಂತರ ಪ್ರಧಾನಿ ಮೋದಿಯವರು ರಾಮ ಜನ್ಮಭೂಮಿಯ ಭೂಮಿಪೂಜೆ ಮಾಡಿದರು. ಈ ಎಸ್‌ಪಿ, ಬಿಎಸ್‌ಪಿ ಸರ್ಕಾರ ಕರಸೇವಕರನ್ನು ಹೊಡೆದುರುಳಿಸಿತು. ಈ ಬುವಾ ಮತ್ತು ಬಾಬುವಾ ಆಳ್ವಿಕೆಯಲ್ಲಿ ನಮ್ಮ ನಂಬಿಕೆಯ ಸ್ಥಳಗಳಿಗೆ ಯಾವುದೇ ಗೌರವವಿರಲಿಲ್ಲ.

ನಿಮ್ಮ ಮಕ್ಕಳು ರಾಜಕೀಯಕ್ಕೆ ಬಂದರೂ ತ್ರಿವಳಿ ತಲಾಖ್, 370ನೇ ವಿಧಿ ವಾಪಸ್ ಬರುವುದಿಲ್ಲ: ಶಾ
ನಿಮ್ಮ ಮುಂದಿನ ಪೀಳಿಗೆ ಬಂದರೂ ಅಖಿಲೇಶ್ ಬಾಬು.. ಈ ಆರ್ಟಿಕಲ್ 370 ಮತ್ತು ತ್ರಿವಳಿ ತಲಾಖ್ ಎಂದಿಗೂ ವಾಪಸ್ ಬರುವುದೇ ಇಲ್ಲ ಎಂದು ಅಯೋಧ್ಯೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಶಾ ಹೇಳಿದ್ದಾರೆ.

ಇದನ್ನೂ ಓದಿ: PM Modi: ಜನವರಿ 2ಕ್ಕೆ 700 ಕೋಟಿ ರೂ ವೆಚ್ಚದ ಮೇಜರ್ ಧ್ಯಾನ್​ಚಂದ್ ಕ್ರೀಡಾ ವಿವಿಗೆ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ

Published On - 2:34 pm, Fri, 31 December 21