ಗೋರಖ್‌ಪುರ, (ಮಾರ್ಚ್ 14): ಸನಾತನ ಧರ್ಮದಂತಹ ಶ್ರೀಮಂತ ಹಬ್ಬಗಳ ಸಂಪ್ರದಾಯ ಯಾವುದೇ ದೇಶ ಮತ್ತು ಧರ್ಮದಲ್ಲಿ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಹೋಳಿ ಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ. ನಮ್ಮ ದೇಶವಾದ ಭಾರತ ಹಬ್ಬಗಳ ಮೂಲಕವೇ ಮುಂದುವರಿಯುತ್ತದೆ ಎಂದ ಯೋಗಿ ಆದಿತ್ಯನಾಥ್, ಗೋರಖ್‌ಪುರದಲ್ಲಿ ನಡೆದ ಹೋಳಿ ಹಬ್ಬದ ಮೆರವಣಿಗೆಯಲ್ಲಿ ಜನರ ಮೇಲೆ ಬಣ್ಣದ ಪುಡಿಯನ್ನು ಎರಚಿ ಸಂಭ್ರಮಿಸಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ಸಾಂಪ್ರದಾಯಿಕ “ನರಸಿಂಗ್ ಶೋಭಾಯಾತ್ರೆ”ಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಹೋಳಿ ಏಕತೆಯ ಮೂಲಕ “ಅಖಂಡ” ದೇಶವನ್ನು ಕಾಪಾಡಿಕೊಳ್ಳುವ ಸಂದೇಶವನ್ನು ನೀಡುತ್ತದೆ ಎಂದು ಒತ್ತಿ ಹೇಳಿದ್ದಾರೆ. ಸದ್ಯದಲ್ಲೇ ‘ಏಕ್ ಭಾರತ್, ಶ್ರೇಷ್ಠ ಭಾರತ್’ನ ಕನಸು ನನಸಾಗುತ್ತದೆ” ಎಂದು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಮಹಾಕುಂಭದ ಬಗ್ಗೆ ಸಮಾಜವಾದಿ ಪಕ್ಷ ಸುಳ್ಳು ಸುದ್ದಿ ಹರಡುತ್ತಿದೆ; ಸಿಎಂ ಯೋಗಿ ಆದಿತ್ಯನಾಥ್ ಆರೋಪ
ಜಗತ್ತಿನ ಯಾವುದೇ ದೇಶ, ಯಾವುದೇ ಜಾತಿ, ಯಾವುದೇ ಧರ್ಮದಲ್ಲಿ ಸನಾತನ ಧರ್ಮದಷ್ಟು ಶ್ರೀಮಂತ ಹಬ್ಬಗಳ ಸಂಪ್ರದಾಯವಿಲ್ಲ. ನಮಗೆ ಸನಾತನ ಧರ್ಮದಲ್ಲಿ ನಂಬಿಕೆ ಇದೆ ಮತ್ತು ನಂಬಿಕೆಯೇ ಹಬ್ಬಗಳ ಆತ್ಮ. ಭಾರತ ಹಬ್ಬಗಳ ಮೂಲಕ ಮುಂದುವರಿಯುತ್ತದೆ” ಎಂದು ಯೋಗಿ ಆದಿತ್ಯನಾಥ್ ಹೇಳಿದರು.
#WATCH | Uttar Pradesh CM Yogi Adityanath joins others at Gorakhnath Temple in Gorakhpur, as they sing phag songs and celebrate the festival of #Holi pic.twitter.com/jrM8pXVfka
— ANI (@ANI) March 14, 2025
“ಸನಾತನ ಧರ್ಮವನ್ನು ವಿರೋಧಿಸುವವರು ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ಮೂಲಕ ಭಾರತದಂತೆಯೇ ಸನಾತನ ಧರ್ಮದ ಸಾಮರ್ಥ್ಯವನ್ನು ನೋಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ನಡೆದ ಬೃಹತ್ ಸ್ನಾನದ ಆಚರಣೆಗಳಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಸೇರಿದ್ದರು. ಜಾತಿ ಅಥವಾ ಪ್ರದೇಶದ ಆಧಾರದ ಮೇಲೆ ಅಲ್ಲಿ ಯಾವುದೇ ತಾರತಮ್ಯವಿರಲಿಲ್ಲ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
#WATCH | Gorakhpur: UP CM Yogi Adityanath attends Holi celebration event organised by the RSS pic.twitter.com/U2pqt2djaV
— ANI (@ANI) March 14, 2025
ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ನಾಪತ್ತೆ: ದೂರು ಸ್ವೀಕರಿಸದ ಪೊಲೀಸರು
“ಭಗವಾನ್ ರಾಮನು ನಮಗೆ ‘ಮರ್ಯಾದೆ’ಯ ಹಾದಿಯಲ್ಲಿ ಸಾಗಲು ಕಲಿಸಿದ್ದಾನೆ. ನಾವು ಘನತೆಯಿಂದ ಮುಂದುವರಿಯುವಾಗ ನಾವು ಭಕ್ತಿಯೊಂದಿಗೆ ಮುಂದುವರಿಯುತ್ತೇವೆ. ನಾವು ‘ಲಕ್ಷ್ಮಣ ರೇಖೆ’ಯನ್ನು ಉಲ್ಲಂಘಿಸುವುದಿಲ್ಲ” ಎಂದು ಸಿಎಂ ಹೇಳಿದ್ದಾರೆ.
#WATCH | UP CM Yogi Adityanath celebrates Holi in Gorakhpur pic.twitter.com/jDD0jPaC5D
— ANI (@ANI) March 14, 2025
“ಸನಾತನ ಧರ್ಮದ ಘೋಷಣೆಯೆಂದರೆ ಧರ್ಮವಿರುವಲ್ಲಿ ವಿಜಯವಿರುತ್ತದೆ, ಸತ್ಯವಿರುತ್ತದೆ. ಧ್ಯಾನ ಕಠಿಣವಾಗಿದ್ದಷ್ಟೂ ಜ್ಞಾನೋದಯ ಹೆಚ್ಚಾಗುತ್ತದೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ