ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ನಾಪತ್ತೆ: ದೂರು ಸ್ವೀಕರಿಸದ ಪೊಲೀಸರು
ಮದ್ದೂರಿನ ವೆಂಕಟೇಶ್ ಎಂಬುವವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ಮದ್ದೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ವೆಂಕಟೇಶ್ ಪತ್ನಿ 9 ವರ್ಷಗಳ ಹಿಂದೆ ಮುಸ್ಲಿಂ ಯುವತಿಯಾಗಿದ್ದು, ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.

ಮಂಡ್ಯ, ಮಾರ್ಚ್ 07: ಪತ್ನಿ ಹಾಗೂ ಮಗ ನಾಪತ್ತೆಯಾದ (Missing) ಬಗ್ಗೆ ದೂರು ಸ್ವೀಕರಿಸದ ಹಿನ್ನೆಲೆ ಪೊಲೀಸರ ನಡೆ ಖಂಡಿಸಿ ಪತಿ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ (protest) ಮಾಡಿರುವಂತಹ ಘಟನೆ ನಡೆದಿದೆ. ಮದ್ದೂರಿನ ಸಿದ್ದಾರ್ಥನಗರದ ವೆಂಕಟೇಶ್‌ನಿಂದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
9 ವರ್ಷಗಳ ಹಿಂದೆ ವೆಂಕಟೇಶ್ ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದರು. ಆನಂತರ ಹಿಂದೂ ಧರ್ಮಕ್ಕೆ ವೆಂಕಟೇಶ್ ಪತ್ನಿ ಮತಾಂತರವಾಗಿದ್ದರು. ಜ.23ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯ ತವರು ಮನೆಗೆ ಹೋಗಿದ್ದರು. ಆನಂತರ ಪತ್ನಿ ಹಾಗೂ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಸದ್ಯ ಪತ್ನಿ ಖುಷಿ ತಾಯಿಯ ವಿರುದ್ಧ ದೂರು ನೀಡಲು ವೆಂಕಟೇಶ್ ಮುಂದಾಗಿದ್ದು, ಆದರೆ ದೂರು ಸ್ವೀಕರಿಸದ ಹಿನ್ನೆಲೆ ಪ್ರತಿಭಟನೆ ಮಾಡಲಾಗಿದೆ.
ಕೆಇಬಿ ನಿರ್ಲಕ್ಷ್ಯಕ್ಕೆ ಲೈನ್ ಮನ್ ಬಲಿ
ಕೆಇಬಿ ನಿರ್ಲಕ್ಷ್ಯಕ್ಕೆ ಕೆಲಸ ಮಾಡುತ್ತಿದ್ದಾಗಲೇ ವಿದ್ಯುತ್ ಪ್ರವಹಿಸಿ ಲೈನ್ ಮನ್ ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ರೊಟ್ಟಿಕಟ್ಟೆ ಗ್ರಾಮದ ಮಳವಳ್ಳಿ -ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಮಹಮ್ಮದ್ ಹರ್ಷದ್ ಅಲಿ (28) ಸಾವನ್ನಪ್ಪಿರುವ ಲೈನ್ ಮನ್.
ಇದನ್ನೂ ಓದಿ: 33 ಸೆಕೆಂಡ್ನಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರುಳ ಬೆಚ್ಚಿಬಿದ್ದ ಹಾವೇರಿ ಜನ
ಕಂಬ ಹತ್ತಿ ಕೆಲಸ ಮಾಡುವಾಗಲೇ ವಿದ್ಯುತ್ ಶಾಕ್ನಿಂದ ಕೆಳಗೆ ಬಿದಿದ್ದ ಮಹಮ್ಮದ್ ಹರ್ಷಿದ್ ಅಲಿ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಚಿಂತಾಮಣಿ: ಕೃಷಿ ಹೊಂಡದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ದುರ್ಮರಣ
ಅಧಿಕಾರಿಗಳ ಸೂಚನೆಯಂತೆ ಮೂವರು ಲೈನ್ ಮನ್ಗಳು ಕೆಲಸ ಮಾಡುತ್ತಿದ್ದರು. 11KV ಲೈನ್ನಲ್ಲಿ ಓವರ್ ಲೋಡ್ ಆಗಿ ಪದೇ ಪದೇ ವಿದ್ಯುತ್ ಕಡಿತ ಹಿನ್ನೆಲೆ ಮಹಮ್ಮದ್ ಅರ್ಷಿದ್ ಅಲಿ, ಸುರೇಶ್, ಜಗದೀಶ್ ಎಲ್ಸಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಕೆಲಸ ಮುಗಿಸಿ ಮಾಹಿತಿ ನೀಡುವ ಮೊದಲೇ ವಿದ್ಯುತ್ ಬಂದಿದ್ದರಿಂದ ದುರಂತ ಸಂಭವಿಸಿದೆ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಹರ್ಷಿದ್‌ಗೆ ಶಾಕ್ ಹೊಡೆದಿದೆ. ಕೆಇಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Fri, 7 March 25