Sign In

By signing in or creating an account, you agree with Associated Broadcasting Company's Terms & Conditions and Privacy Policy.

33 ಸೆಕೆಂಡ್​ನಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರುಳ ಬೆಚ್ಚಿಬಿದ್ದ ಹಾವೇರಿ ಜನ

ಹಾವೇರಿ ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಇಂದು ನಗರದಲ್ಲಿ 33 ಸೆಕೆಂಡ್‌ಗಳಲ್ಲಿ 33 ಲಕ್ಷ ರೂ ಕಳ್ಳರು ದೋಚಿದ ಘಟನೆ ನಡೆದಿದೆ. ಕಾರಿನ ಗಾಜು ಒಡೆದು ಹಣವನ್ನು ಕದ್ದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡಗಳನ್ನು ರಚಿಸಿ ಕಳ್ಳರನ್ನು ಹಿಡಿಲು ಜಾಲ ಬೀಸಿದ್ದಾರೆ.

33 ಸೆಕೆಂಡ್​ನಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರುಳ ಬೆಚ್ಚಿಬಿದ್ದ ಹಾವೇರಿ ಜನ
33 ಸೆಕೆಂಡ್​ನಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರುಳ ಬೆಚ್ಚಿಬಿದ್ದ ಹಾವೇರಿ ಜನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 07, 2025 | 9:18 PM

ಹಾವೇರಿ, ಮಾರ್ಚ್​ 07: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ (robbery) ಪ್ರಕರಣಗಳು ಹೆಚ್ಚಾಗುತ್ತಿವೆ. ಬೈಕ್, ಮಾಂಗಲ್ಯ ಸರ ಸೇರಿದಂತೆ ಮನೆಗಳ್ಳತನಕ್ಕೆ ಸಾಕಷ್ಟು ಯತ್ನಗಳು ನಡೆದಿದೆ. ಆದರೆ ಹಾಡಹಗಲೇ 33 ಸೆಕೆಂಡ್​ನಲ್ಲಿ 33 ಲಕ್ಷ ರೂ. ಹಣವನ್ನು ಖತರ್ನಾಕ್ ಕಳ್ಳರು ಎಗರಿಸಿರುವಂತಹ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಸದ್ಯ ಕಳ್ಳರ ಕೃತ್ಯಕ್ಕೆ ಹಾವೇರಿಯ (Havari) ಜನರು ಅಕ್ಷರಶಃ ಬೆಚ್ಚಿಬಿದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಗಾಜು ಒಡೆದು ಕಳ್ಳತನ

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಸೆಕೆಂಡ್​​ನಲ್ಲಿ ಕಾರಿನಲ್ಲಿದ್ದ 33 ಲಕ್ಷ ರೂ ಹಣವನ್ನು ಖದೀಮರು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ನಗರದ ಬಸವೇಶ್ವರ ನಗರದ ಹತ್ತನೇ ಕ್ರಾಸಿನಲ್ಲಿರುವ ಸಂತೋಷ ಹಿರೇಮಠ ಎಂಬುವರಿಗೆ ಸೇರಿದ ಹಣ ಕಳ್ಳತನವಾಗಿದೆ. ಸಿವಿಲ್ ಕಾಂಟ್ರ್ಯಾಕ್ಟರ್ ಆಗಿರುವ ಸಂತೋಷ, ಹಾವೇರಿಯ ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ ಹಣವನ್ನು ಸಂಬಂಧಿಕರ ಖಾತೆಗಳಿಂದ ಚೆಕ್ ಮುಖಾಂತರ ಹಣ ಡ್ರಾ ಮಾಡಿಕೊಂಡು ಕಾರಿನ ಹಿಂಭಾಗದ ಸೀಟಿನಲ್ಲಿ ಹಣ ಇಟ್ಟುಕೊಂಡು ಬಂದಿದ್ದರು.

ಇದನ್ನೂ ಓದಿ: ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ: ಪ್ರಾಣಕಳೆದುಕೊಂಡ ಪ್ರಿಯಕರ

ಇದನ್ನೂ ಓದಿ
Image
ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ
Image
ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ:ಪ್ರಾಣಕಳೆದುಕೊಂಡ ಪ್ರಿಯಕರ
Image
ಡಬ್ಬಲ್ ಮರ್ಡರ್ ಮಾಡಿ ಜೈಲುಪಾಲಾಗಿದ್ದ ವಿಚಾರಣಾಧೀನ ಖೈದಿ ನೇಣಿಗೆ ಶರಣು
Image
ರೈತನನ್ನು ವಿದ್ಯುತ್​ ಕಂಬ ಹತ್ತಿಸಿ ಜೀವ ತೆಗೆದ ಹೆಸ್ಕಾಂ ಲೈನ್​ಮ್ಯಾನ್

ನಾಲ್ಕು ಗಂಟೆ ಐದು ನಿಮಿಷಕ್ಕೆ ಮನೆ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿದ್ದರು. ಮನೆಯಲ್ಲಿ ಊಟ‌ ಮಾಡಿ ವಿಶ್ರಾಂತಿ ಮುಗಿಸಿ ವಾಪಸ್ ಸಂಜೆ 5:20 ನಿಮಿಷಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ‌ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಇನ್ನು ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಬೈಕ್​​ಗಳಲ್ಲಿ ಬಂದಿದ್ದ ನಾಲ್ವರ ಗ್ಯಾಂಗ್​​​ನಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು, ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್​​ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿ ಆಗಿದ್ದಾನೆ. ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್​​ಪಿ, ಹೆಚ್ಚುವರಿ ಎಸ್​​ಪಿ ಹಾಗೂ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪ್ರಕರಣದ‌ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್​​ಪಿ ಅಂಶುಕುಮಾರ ಹೇಳಿದ್ದಾರೆ.

ಇದನ್ನೂ ಓದಿ: ಡಬ್ಬಲ್ ಮರ್ಡರ್ ಮಾಡಿ ಜೈಲುಪಾಲಾಗಿದ್ದ ವಿಚಾರಣಾಧೀನ ಖೈದಿ ಜೈಲಿನಲ್ಲಿ ನೇಣಿಗೆ ಶರಣು

ಹಾಡಹಗಲೇ ಕಳ್ಳರ ಗ್ಯಾಂಗ್ ಬರೋಬ್ಬರಿ 33 ಲಕ್ಷ ರೂ ದೋಚಿಕೊಂಡು ಪರಾರಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೂರು ತಂಡ ರಚನೆ ಮಾಡಿದ್ದು ಖರ್ತನಾಕ ಕಳ್ಳರನ್ನ ಹಿಡಿಲು ಜಾಲ ಬೀಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:13 pm, Fri, 7 March 25

ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!