ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ: ಅಮಾನತು ಮಾಡುವಂತೆ ಧರಣಿ
ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯನ ಮೇಲೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಫೆಬ್ರವರಿ 13 ರಂದು ಘಟನೆ ನಡೆದಿದ್ದು, ಸೊಂಟಕ್ಕೆ ಕೈ ಹಾಕಿ, ಸೀರೆ ಎಳೆದಾಡಿ, ಜಾತಿ ನಿಂದನೆ ಮಾಡಿದ ಆರೋಪ ಮಾಡಲಾಗಿದೆ. ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ, ಮಾರ್ಚ್ 06: ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಜೊತೆ ಸರ್ಕಾರಿ ವೈದ್ಯ (Doctor) ಅಸಭ್ಯವಾಗಿ ವರ್ತಿಸಿರುವಂತಹ (Misconduct) ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆ ವೈದ್ಯ ಪರಸಪ್ಪ ಚುರ್ಚಿಹಾಳ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಫೆಬ್ರವರಿ 13ರಂದು ವೈದ್ಯ ಪರಸಪ್ಪ ಚುರ್ಚಿಹಾಳನಿಂದ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಹಾವೇರಿ ಮಹಿಳಾ ಠಾಣೆಯಲ್ಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆ ದೂರು ದಾಖಲಿಸಿದ ಬಳಿಕ ವೈದ್ಯನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ವೈದ್ಯರ ಮನೆಗಳಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಅದರಂತೆ ವೈದ್ಯ ಪರಸಪ್ಪ ಚುರ್ಚಿಹಾಳ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಸೊಂಟಕ್ಕೆ ಕೈ ಹಾಕಿ, ಎಳೆದಾಡಿ, ಸೀರೆ ಬಿಚ್ಚಲು ಯತ್ನಿಸಿದ್ದು, ತಪ್ಪಿಸಿಕೊಂಡು ಬಂದ ಮಹಿಳೆಗೆ ವೈದ್ಯನಿಂದ ಜಾತಿ ನಿಂದನೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವೈಟ್ ಆ್ಯಂಡ್ ಬ್ಲಾಕ್ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
ಬಳಿಕ ವೈದ್ಯನ ವರ್ತನೆಗೆ ಬೇಸತ್ತು ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಸದ್ಯ ವೈದ್ಯನ ಅಮಾನತು ಮಾಡುವಂತೆ ಹಾವೇರಿ ಜಿಲ್ಲಾಸ್ಪತ್ರೆ ಮುಂದೆ ಧರಣಿ ಮಾಡಿದ್ದಾರೆ.
ಹಾಡಹಗಲೇ ಕಳ್ಳತನಕ್ಕೆ ಇಳಿದ ಖದೀಮರು: ಮಾಂಗಲ್ಯ ಸರ ಕಳ್ಳತನ ವಿಫಲಯತ್ನ
ಹಾವೇರಿ ಜಿಲ್ಲೆಯಲ್ಲಿ ಕಳ್ಳರ ಹಾವಳಿ ನಿಲ್ಲುತ್ತಿಲ್ಲ. ಹಾಡಹಗಲೇ ಖದೀಮರು ಕಳ್ಳತನಕ್ಕೆ ಇಳಿದಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಮಹಿಳೆಯ ಮಾಂಗಲ್ಯ ಸರ ಕೀಳಲು ಖದೀಮರು ಯತ್ನಿಸಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಮಾನವೀಯ ಘಟನೆ: ತಾಯಿ ಅಂತ್ಯಕ್ರಿಯೆಗೆ ಹಣಕ್ಕೆ ಬೇಡಿಕೆ ಇಟ್ಟ ಮಕ್ಕಳು
ಜಗದೀಶ್ ಕಲಕಟ್ಟಿ ಎಂಬುವರ ಮನೆಗೆ ನೀರು ಕೇಳುವ ನೆಪದಲ್ಲಿ ನುಗ್ಗಿದ ಖದೀಮರು, ಮನೆಯಲ್ಲಿದ್ದ ವಿದ್ಯಾ ಎಂಬ ಗೃಹಿಣಿ ನೀರು ತೆಗೆದುಕೊಂಡು ಹೊರಗೆ ಬಂದಾಗ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕುತ್ತಿಗೆಯಲ್ಲಿದ್ದ ಸರ ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ. ಗೃಹಿಣಿ ತಪ್ಪಿಸಿಕೊಂಡು ಮಾಂಗಲ್ಯ ಚೈನ್ ಕಾಪಾಡಿಕೊಂಡಿದ್ದಾರೆ. ಮತ್ತೆ ಖದೀಮರು ಪ್ರಯತ್ನ ಮಾಡಿದಾಗ ಕಲ್ಲಿನಿಂದ ಹೊಡೆದು ಹೆದರಿಸಿ ಓಡಿಸಿದ್ದಾಳೆ. ಕಲ್ಲೇಟು ತಿಂದ ಒಬ್ಬ ಕಳ್ಳ ಕುಂಟುತ್ತಾ ಪರಾರಿ ಆಗಿದ್ದಾನೆ. ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಮೈಸೂರು ಜಿಲ್ಲೆಯ ಹುಣಸೂರು ಹೆದ್ದಾರಿಯ ಬೈಪಾಸ್ನಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಲ್ಲೇಶ್(49) ಮೃತ ಬೈಕ್ ಸವಾರ. ಪರಿವರ್ತನ ಸಂಸ್ಥೆಯ ಸ್ವಸಹಾಯ ಸಂಘಗಳ ಲೆಕ್ಕ ಪರಿಶೋಧಕರಾಗಿದ್ದ ಮಲ್ಲೇಶ್, ಅಪಘಾತದ ಬಳಿಕ ಲಾರಿ ಚಾಲಕ ಪರಾರಿ ಆಗಿದ್ದಾನೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.