AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನನ್ನು ವಿದ್ಯುತ್​ ಕಂಬ ಹತ್ತಿಸಿ ಜೀವ ತೆಗೆದ ಹೆಸ್ಕಾಂ ಲೈನ್​ಮ್ಯಾನ್: ಭುಗಿಲೆದ್ದ ಆಕ್ರೋಶ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಲೈನ್‌ಮ್ಯಾನ್ ನಿರ್ಲಕ್ಷ್ಯದಿಂದ ರೈತನೊಬ್ಬ ಮೃತಪಟ್ಟಿದ್ದಾನೆ. ರೈತನನ್ನೇ ಕಂಬ ಏರಿಸಿದಾಗ ರೈತನಿಗೆ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ್ದಾನೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಲೈನ್‌ಮ್ಯಾನ್‌ಗೆ ಶಿಕ್ಷೆಗೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.

ರೈತನನ್ನು ವಿದ್ಯುತ್​ ಕಂಬ ಹತ್ತಿಸಿ ಜೀವ ತೆಗೆದ ಹೆಸ್ಕಾಂ ಲೈನ್​ಮ್ಯಾನ್: ಭುಗಿಲೆದ್ದ ಆಕ್ರೋಶ
ರೈತನನ್ನು ವಿದ್ಯುತ್​ ಕಂಬ ಹತ್ತಿಸಿ ಜೀವ ತೆಗೆದ ಹೆಸ್ಕಾಂ ಲೈನ್​ಮ್ಯಾನ್: ಭುಗಿಲೆದ್ದ ಆಕ್ರೋಶ
TV9 Web
| Edited By: |

Updated on: Feb 24, 2025 | 8:56 PM

Share

ಹಾವೇರಿ, ಫೆಬ್ರವರಿ 24: ಲೈನ್​ಮ್ಯಾನ್ ನಿರ್ಲಕ್ಷ್ಯಕ್ಕೆ ಅಮಾಯಕ ರೈತನೊಬ್ಬ ಬಲಿಯಾಗಿರುವಂತಹ (death) ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ತುಮರಿಕೊಪ್ಪ ಬಳಿ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಯುವ ರೈತನನ್ನು ಕಳೆದುಕೊಂಡು‌ ಕುಟುಂಬ ಇದೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಮಾಯಕರ ಜೀವ ತೆಗೆಯುತ್ತಿರುವ ಲೈನ್​ಮ್ಯಾನ್ ವಜಾಗೊಳಿಸುವಂತೆ ರೈತರು ಬೀದಿಗಿಳಿದು ಹೋರಾಟ ಮಾಡಿದ್ದಾರೆ.

ಪ್ರಾಣದ ಹಂಗು ತೊರೆದು ಮಳೆ, ಚಳಿ ಲೆಕ್ಕಿಸದೇ ವಿದ್ಯುತ್ ಪೂರೈಸುವ ಲೈನ್​ಮ್ಯಾನ್​ಗಳು ಜನರ ಪಾಲಿಗೆ ದೈವ ಸ್ವರೂಪಿಗಳೇ ಆಗಿದ್ದಾರೆ. ಮಳೆಗಾಲದಲ್ಲಿ ಮರ ಬಿದ್ದು, ತಂತಿ ಹರಿದು ಅನಾಹುತಗಳಾಗುವ ಮೊದಲೇ ಬಂದು ಕಂಬ ಏರಿ ದುರಸ್ತಿ ಮಾಡುವ ಲೈನ್​ಮ್ಯಾನ್​​ಗಳನ್ನು ಸರ್ಕಾರವೇ ಪವರ್ ಮ್ಯಾನ್​​ ಅಂತ ಗೌರವದಿಂದ‌ ಬಿರುದು ನೀಡಿದೆ. ಆದರೆ ಇಲ್ಲೊಬ್ಬ ಐನಾತಿ ಲೈನ್​ಮ್ಯಾನ್ ಮಾಡಿದ ನಿರ್ಲಕ್ಷ್ಯಕ್ಕೆ ಮುಗ್ದ ರೈತನೊಬ್ಬ ಜೀವ ಬಿಟ್ಟಿದ್ದಾನೆ.

ಇದನ್ನೂ ಓದಿ: ವಿಷ ಸೇವಿಸಿ ಬಳಿಕ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವು: ಕಾರಣವೇನು?

ವಿದ್ಯುತ್ ಕಂಬ ಏರಲಾರದೇ ರೈತನನ್ನೇ ಕಂಬ ಹತ್ತಿಸಿದ‌ ಪರಿಣಾಮ ರೈತ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾ‌ನೆ. ಕಾಶಿನಾಥ ಕಮ್ಮಾರ್​ ಮೃತ ಯುವ ರೈತ. ತಿರುಪತಿ ಎಂಬ ಲೈನ್​ಮ್ಯಾನ್ ತಾನು ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡುವುದನ್ನು ಬಿಟ್ಟು ರೈತ ಕಾಶಿನಾಥ​​ಗೆ ಕಂಬ ಹತ್ತಿಸಿ ವಿದ್ಯುತ್​ ಕೆಲಸ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಂಟ್ ಶಾಕ್ ತಗುಲಿ ಆಯ ತಪ್ಪಿ ಕಾಶಿನಾಥ ಕೆಳಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ನಡುರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ

ಘಟನೆ ನಡೆಯುತ್ತಿದ್ದಂತೆ ಹೇಳದೇ ಕೇಳದೇ ಲೈನ್​ಮ್ಯಾನ್ ತಿರುಪತಿ ಪರಾರಿ ಆಗಿದ್ದಾರೆ. ಮೃತ ಕಾಶಿನಾಥ ಹೆತ್ತವರ ರೋಧನವಂತೂ ಮುಗಿಲು ಮುಟ್ಟಿದೆ. ಲೈನ್​ಮ್ಯಾನ್ ಕಾಶಿನಾಥ ಕೆಲ ವರ್ಷಗಳ ಹಿಂದೆಯೂ ಇದೇ ರೀತಿ ಅಮಾಯಕನೊಬ್ಬನನ್ನು ವಿದ್ಯುತ್ ಕಂಬ ಹತ್ತಿಸಿ ಬಲಿ ಪಡೆದಿದ್ದ ಎನ್ನಲಾಗಿದೆ. ಈ ಹಿಂದೆ ರಾಜೀ‌ ಪಂಚಾಯಿತಿ ಮೂಲಕ ಬಚಾವ್ ಆಗಿದ್ದ ತಿರುಪತಿ ಪುನಃ ಅದೇ ತಪ್ಪು ಮಾಡಿದ್ದಾನೆ. ಯುವ ರೈತ ಕಾಶಿನಾಥ ಸಾವಿನಿಂದ ರೊಚ್ಚಿಗೆದ್ದ ಸ್ಥಳೀಯರು ನಡುರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ರಸ್ತೆ ಮದ್ಯ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರ ಬೇಕು, ಹೆಸ್ಕಾಂ ಸಿಬ್ಬಂದಿಗೆ ಶಿಕ್ಷೆಯಾಗಬೇಕು. ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಕೆಇಬಿಯಲ್ಲಿ ಕೆಲಸ ಕೊಡಬೇಕು. ಹೆಸ್ಕಾಂ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.

ಈ ಹಿಂದೆಯೂ ಕೂಡ ಹೆಸ್ಕಾಂ ಸಿಬ್ಬಂದಿ ತಿರುಪತಿ ಮೇಲೆ ಇಂತಹ ಎರಡ್ಮೂರು ಪ್ರಕರಣಗಳು ಕೇಳಿಬಂದಿವೆ. ಅಷ್ಟಾದರೂ ಅವನ ಮೇಲೆ ಯಾವುದೇ ಕ್ರಮ ಜರುಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಟು ಹಾನಗಲ್ ರಸ್ತೆ ಬಂದ್ ಮಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ

ಒಟ್ಟಾರೆ ಲೈನ್​ಮ್ಯಾನ್ ಒಬ್ಬ ಮಾಡಿದ ತಪ್ಪಿಗೆ ರೈತ ಕುಟುಂಬದ ಸದಸ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಲೈನ್​ಮ್ಯಾನ್ ತಿರುಪತಿಯನ್ನು ಅಮಾನತ್ತು ಮಾಡಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್