AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತ್ರೆಗೆ ಹೋಗೋದಾಗಿ ಹೇಳಿದ್ದ ಮಹಿಳೆ ಶವವಾಗಿ ಪತ್ತೆ: ಕುಟುಂಬಸ್ಥರಿಂದ ಅತ್ಯಾಚಾರ, ಕೊಲೆ ಆರೋಪ

ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅನುಮಾಸ್ಪದಾಗಿ ಸಾವನ್ನಪ್ಪಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಜಾತ್ರೆಗೆ ಹೋಗಿದ್ದ ಮಹಿಳೆ ಅರೆಬೆತ್ತಲಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು ಅತ್ಯಾಚಾರ ಮತ್ತು ಹತ್ಯೆಯ ಆರೋಪ ಮಾಡಿದ್ದಾರೆ. ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಸಾವಿನ ಹಿಂದಿನ ಸತ್ಯಾಸತ್ಯತೆ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

ಜಾತ್ರೆಗೆ ಹೋಗೋದಾಗಿ ಹೇಳಿದ್ದ ಮಹಿಳೆ ಶವವಾಗಿ ಪತ್ತೆ: ಕುಟುಂಬಸ್ಥರಿಂದ ಅತ್ಯಾಚಾರ, ಕೊಲೆ ಆರೋಪ
ಜಾತ್ರೆಗೆ ಹೋಗೋದಾಗಿ ಹೇಳಿದ್ದ ಮಹಿಳೆ ಶವವಾಗಿ ಪತ್ತೆ: ಕುಟುಂಬಸ್ಥರಿಂದ ಅತ್ಯಾಚಾರ, ಕೊಲೆ ಆರೋಪ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 23, 2025 | 7:19 PM

Share

ಹಾವೇರಿ, ಫೆಬ್ರವರಿ 23: ಜಾತ್ರೆಗೆ ಎಂದು ಮನೆಯಿಂದ ಹೋಗಿದ್ದ ಮಹಿಳೆ (woman) ದಾರಿ ಮಧ್ಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅರೆ ಬೆತ್ತಲಾಗಿ ಬಿದ್ದಿದ್ದಳು. ಅದನ್ನು ಕಂಡ ದೇವಸ್ಥಾನದ ಪೂಜಾರಿ ಅಲ್ಲೆ ಇದ್ದ ಭಿಕ್ಷುಕರಿಗೆ ಹೇಳಿ ಬಟ್ಟೆ ಉಡಿಸಿ ಸ್ಥಳಿಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ತೀವ್ರ ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಎಂಟು ದಿನದ ನಂತರ ಸಾವನಪ್ಪಿದ್ದಾರೆ. ಇದು ರೇಪ್ ಆ್ಯಂಡ್​ ಮರ್ಡರ್ ಅಂತ ಸಂಬಂಧಿಕರು ಆರೋಪಿಸುತ್ತಿದ್ದಾರೆ.

ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಮಹಿಳೆಯ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಇದು ಸಹಜ ಸಾವಾ ಅಥವಾ ರೇಪ್ ಆ್ಯಂಡ್​ ಮರ್ಡರ್ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಮೃತ ಮಹಿಳೆ ಹೆಸರು ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ. ಕೋಡ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳು ಮರಿ ಯಾರು ಇಲ್ಲಾ, ಗಂಡ ಸಾವನ್ನಪ್ಪಿದ ನಂತರ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ಬ್ರೇಕಪ್​ ಆಗಿ ಮತ್ತೆ ಚಿಗುರೊಡೆದ ಪ್ರೀತಿ: ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಕಿರಾತಕ ಪ್ರೇಮಿ

ಫೆಬ್ರುವರಿ 15 ರಂದು ಕೋಡ್ ಗ್ರಾಮದಿಂದ ಜಾತ್ರೆಗೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರೋ ದುರ್ಗಾದೇವಿ ದೇವಾಲಯದ ಬಳಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಈ ನಡುವೆ ಅಂಗನವಾಡಿ ಶಿಕ್ಷಕಿ ಪಕ್ಕಿರವ್ವ ಶಾಲೆಗೆ ಬಂದಿಲ್ಲ ಎಂಟು ದಿನ ರಜೆ ಹಾಕಿ ಎಲ್ಲಿ ಹೋಗಿದ್ದಾರೆ ಎಂದು ಮೃತಳ ಮಾವನನ್ನು ಕೇಳಿದಾಗ ಗೋತ್ತಿಲ್ಲ ಎಂದು ಹೇಳಿ, ಸಂಬಂಧಿಕರ ಮನೆಗೆಲ್ಲಾ ಕರೆ ಮಾಡಿ ಕೇಳಿ ನಂತರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಹಾಗಾದರೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅನಾಥ ಶವ ಒಂದು ಇದೆ ನೋಡಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸಂಬಂಧಿಕರು ಮಹಿಳೆ ನಿತ್ರಾಣವಾಗಿ ಬಿದ್ದಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಕಂಡಿರುವ ರಕ್ತದ ಕಲೆ ಮತ್ತು ಪಕ್ಕಿರವ್ವ ದರೆಸಿದ್ದ ಕಿವಿ ಓಲೆ ನೋಡಿ ಇದು ಸಹಜ ಸಾವು ಅಲ್ಲಾ ರೇಪ್ ಆ್ಯಂಡ್​ ಮರ್ಡರ್, ನಮಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಾರೆ.

ದೂರಿನ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಕೋಡ ಗ್ರಾಮದ ಗದಿಗೆಪ್ಪ ಪಾಟೀಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನನ್ನೇ ವಿಚಾರಣೆ ಮಾಡಲು ಕಾರಣ ಮೃತ ಮಹಿಳೆ ಕೊನೆ ಕರೆ ಅವನಿಗೆ ಮಾಡಿದ್ದು ಜೊತೆಗೆ ಇವರಿಬ್ಬರು ಸಲಿಗೆಯಿಂದ ಇದ್ದರು ಎನ್ನುವ ಕಾರಣಕ್ಕಾಗಿ.

ಇದನ್ನೂ ಓದಿ: ರಾತ್ರಿ ಹೊತ್ತಲ್ಲಿ ಕಳ್ಳರ ಕರಾಮತ್ತು: 8 ಲಾರಿಗಳ 16 ಬ್ಯಾಟರಿ, 150 ಲೀ ಡೀಸೆಲ್ ಕಳವು

ಒಟ್ಟಾರೆ ಗಂಡ ಸತ್ತ ನಂತರ ಸ್ವತಂತ್ರವಾಗಿ ಇದ್ದ ಮಹಿಳೆ ನಿಗೂಢವಾಗಿ ಸಾವನಪ್ಪಿದ್ದಾರೆ. ದುಷ್ಟರ ಸಹವಾಸ ಬೇಡ ಎಂದು ಸಂಬಂಧಿಕರು ಹತ್ತಾರು ಬಾರಿ ಬುದ್ದಿ ಹೇಳಿದರೂ ಕೇಳಿಲ್ಲ. ನಮ್ಮ ಮನೆ ಮಗಳಿಗಾದ ಅನ್ಯಾಯ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು ಎಂದು ಸಂಬಂಧಿಕರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಪೋಲಿಸರ ತನಿಖೆಯಿಂದ ಸತ್ಯಸತ್ಯತೆ ಹೊರ ಬರಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ