AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕಪ್​ ಆಗಿ ಮತ್ತೆ ಚಿಗುರೊಡೆದ ಪ್ರೀತಿ: ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಕಿರಾತಕ ಪ್ರೇಮಿ

ಪ್ರೀತಿ ಮಾಡಿ ಆ ಪ್ರೀತಿ ಮುರಿದು ಬಿದ್ರೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಹುಚ್ಚರಾಗುತ್ತಾರೆ. ಇನ್ನು ಕೆಲವರು ಹೋದ್ರೆ ಹೋಗಲಿ ಬಿಡು ಎಂದು ಸುಮ್ನೆ ಆಗಿಬಿಡುತ್ತಾರೆ. ಆದ್ರೆ, ಇಲ್ಲೋರ್ವ ತನ್ನ ಪ್ರೇಯಸಿ ಗಂಡನನ್ನೇ ಭೀಕರ ಕೊಲೆಗೈದಿದ್ದಾನೆ. ಅವರಿಬ್ಬರ ನಡುವೆ ಹತ್ತು ವರ್ಷದಿಂದ ಪ್ರೀತಿ ಇತ್ತು. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಕೋಪದಲ್ಲಿದ್ದ ಪ್ರಿಯತಮೆ ಬೇರೆ ಹುಡುಗನನ್ನು ಮದುವೆ ಆಗಿದ್ದಾಳೆ. ಮದುವೆಯಾದ ಆರೇ ತಿಂಗಳಲ್ಲಿ ಹಳೆ ಲವರ್, ಮದುವೆ ಮಾಡಿಕೊಂಡಿದ್ದ ಹುಡುಗನಿಗೆ ಚಾಕುವಿನಿಂದ ಇರಿದು ಕೊಂದೆ ಬಿಟ್ಟಿದ್ದಾನೆ.

ಬ್ರೇಕಪ್​ ಆಗಿ ಮತ್ತೆ ಚಿಗುರೊಡೆದ ಪ್ರೀತಿ: ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಕಿರಾತಕ ಪ್ರೇಮಿ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Feb 23, 2025 | 5:24 PM

Share

ಕಾರವಾರ, (ಫೆಬ್ರವರಿ 23): ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ಭಗ್ಮ ಪ್ರೇಮಿಯೊಬ್ಬ ಅವಳ ಗಂಡನನ್ನೇ ಕೊಲೆ ಮಾಡಿದ ಘಟನೆ . ಶಿರಸಿಯಲ್ಲಿ ನಡೆದಿದೆ. ಭಗ್ನಪ್ರೇಮಿ ಪ್ರೀತಮ್ ಡಿಸೋಜನೇ ತನ್ನ ಪ್ರೇಯಸಿಯ ಗಂಡನನ್ನೇ ಕೊಲೆ ಮಾಡಿದ್ದಾನೆ. ಈ ಪ್ರೀತಮ್‌ ಶಿರಸಿ ಮೂಲದ ಪೂಜಾ ಎಂಬಾಕೆಯನ್ನ ಕಳೆದ ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ಪ್ರೀತಿಸುತಿದ್ದಳು. ಆದ್ರೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋದಾಗ ಪರಿಚಯವಾದ ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಎನ್ನುವಾತನನ್ನು ಮದುವೆಯಾಲು ನಿರ್ಧರಿಸಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮದುವೆ ಕೂಡ ಆಗುತ್ತೆ. ಸಂತೋಷವಾಗಿ ಜೀವನ ಕೂಡ ನಡೆಸುತ್ತಿದ್ದರು. ಆದ್ರೆ, ಇತ್ತ ಆಕ್ರೋಶಗೊಂಡಿದ್ದ ಪ್ರೀತಮ್, ಪೂಜಾಳ ಗಂಡನನ್ನೇ ಕೊಲೆ ಮಾಡಿದ್ದಾನೆ.

ಹೌದು.. ನಿನ್ನೆ(ಫೆಬ್ರವರಿ22) ಸಂಜೆ ಶಿರಸಿಯಿಂದ ಬೆಂಗಳೂರಿಗೆ ಬಸ್ ಹೊರಟಿತ್ತು. ಬಸ್ ನಿಲ್ಧಾಣದಿಂದ ಕೆಲವೆ ದೂರದಲ್ಲಿ ಬಂದ್ ಬಸ್ ನಲ್ಲಿ ಒಮ್ಮಿಂದ ಒಮ್ಮೆಲೆ ಜಗಳ ಆರಂಭ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿರಬಹುದು ಎಂದು ಯಾರೂ ತಲೆ ಕೆಡಿಸಿಕೊಂಡಿಲ್ಲ.. ಜಗಳ ತಾರಕಕ್ಕೇರಿದಾಗ, ಶಿರಸಿ ಮೂಲದ ಪ್ರೀತಂ ಜೇಬಿನಲ್ಲಿದ್ದ ಚಾಕುವಿನಿಂದ ಪೂಜಾಳ ಪತಿ ಗಂಗಾಧರ್ ನಿಗೆ ಚುಚ್ಚಿ ಕೊಲೆ ಮಾಡಿ ಬಸ್ ನಿಂದ ಇಳಿದು ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ. ಕೊಲೆ ಆದವನ ಪತ್ನಿ ಪೂಜಾಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಕೊಲೆ ಮಾಡಿದವನ ಹೆಸರು ಊರು ಎಲ್ಲ ಮಾಹಿತಿ ತಾನಾಗಿಯೇ ಹೇಳಿದ್ದಾಳೆ‌.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಪೊಲೀಸರಿಗೆ ಇನ್ನಷ್ಟು ಅನುಮಾನ ಬಂದು ಠಾಣೆಗೆ ಕರೆಸಿ ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ. ಆಗ ಭಯಾನಕ ಸತ್ಯವೊಂದು ಬಿಚ್ಚಿಟ್ಟಿರುವ ಪೂಜಾ, ಧಾರವಾಡ ಮೂಲದ ಪ್ರಿತಮ ಜೊತೆ ಹತ್ತು ವರ್ಷಗಳಿಂದ ಪ್ರೀತಿ ಇರುವುದನ್ನ ಒಪ್ಪಿಕೊಂಡಿದ್ದಾಳೆ. ಇನ್ನೂ ಕೊಲೆ ಆದ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಉತ್ತರ ಕನ್ನಡ ಎಸ್ ಪಿ ಎಂ ನಾರಾಯಣ್ ಕೂಡಲೇ ಜಿಲ್ಲೆಯಾದ್ಯಂತ ನಾಕಾಬಂಧಿ ಮಾಡಿಸಿದ್ದಾರೆ. ಯಲ್ಲಾಪುರದಿಂದ ಇನ್ನೇನು ಜಿಲ್ಲೆಯ ಗಡಿ ದಾಟಬೇಕು ಎನ್ನಷಷ್ಟರಲ್ಲಿ ಪಿಎಸ್ಐ ನಾಗಪ್ಪಾ ಭೋವಿ ಎಂಬುವವರ ಕೈಗೆ ಕೊಲೆ ಆರೋಪಿ ಪ್ರೀತಂ ಸಿಕ್ಕಿ ಬಿದ್ದಿದ್ದಾನೆ. ರಾತ್ರಿ 11 ಗಂಟೆಗೆ ಆತನನ್ನ ಠಾಣೆಗೆ ಕರೆ ತಂದು ಪೂಜಾ ಹಾಗೂ ಪ್ರೀತಂ ಇಬ್ಬರನ್ನ ವಿಚಾರಣೆ ಮಾಡಿದ್ದಾರೆ

ಶಿರಸಿ ಮೂಲದ ಪೂಜಾ ಹಾಗೂ ಧಾರವಾಡ ಮೂಲದ ಪ್ರಿತಂ ಡಿಸೋಜಾ ಮಧ್ಯ ಹತ್ತು ವರ್ಷಗಳಿಂದ ಪ್ರೀತಿ ಇತ್ತು ಎನ್ನಲಾಗಿದೆ. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಬೇಕೆಂದು ಪ್ಲಾನ್ ಕೂಡ ಮಾಡಿದ್ದರು. ಅಷ್ಟೊತ್ತಿಗಾಗಲೇ ಪ್ರಿತಮ್ ಡಿಸೌಜಾ ಗೆ ಒಂದು ಲವ್ ಅಫೆರ್ ಇರುವುದು ಪೂಜಾಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡಿದ್ದ ಪೂಜಾ ಶಿರಸಿ ಬಿಟ್ಟು ಬೆಂಗಳೂರಿಗೆ ಹೋಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ತನ್ನ ಹುಡುಗ ಬೇರೆಯವಳ ಜೊತೆ ಇರುವುದನ್ನ ಸಹಿಸಿಕೊಳ್ಳುವುದಕ್ಕೆ ಆಗಿಲ್ಲ. ಬಳಿಕ ಪೂಜಾ ಕೂಡ ಸಾಗರ ಮೂಲದ ಗಂಗಾಧರ ಎನ್ನುವಾತನನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಪ್ರೀತಿ ಮಾಡಿದ ಮೂರೇ ತಿಂಗಳಲ್ಲಿ ಮದುವೆ ಆಗಿದ್ದಾರೆ. ಪೂಜಾ ಮದುವೆಯಾದ ವಿಷಯ ಪ್ರಿತಂಗೆ ಗೊತ್ತಾಗುತ್ತಿದ್ದಂತೆ ಕಾಲ್ ಮಾಡಿ ತನ್ನಿಂದಾದ ತಪ್ಪಿನ ಬಗ್ಗೆ ಕ್ಷಮೆ ಕೇಳಿದ್ದಾನೆ. ಆಗ ಮತ್ತೆ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.

ಆದ್ರೆ ನಮ್ಮಿಬ್ಬರ ಪ್ರೀತಿಗೆ ಗಂಗಾಧರ ಅಡ್ಡಿ ಆಗಿರುವುದು ಇಬ್ಬರಿಗೂ ಸಹಿಸುವುದಕ್ಕೆ ಆಗಲ್ಲ. ಹಾಗಾಗಿ ನಿನ್ನೆ ಶಿರಸಿಯಲ್ಲಿದ್ದ ಗಂಗಾಧರ ಅಕ್ಕಳ ಮನೆಯ ಕಾರ್ಯಕ್ರಮದ ನಿಮಿತ್ತ, ಪತ್ನಿಯ ಜೊತೆಗೆ ಅಕ್ಕನ ಮನೆಗೆ ಬಂದಿದ್ದ ಗಂಗಾಧರ, ಕಾರ್ಯಕ್ರಮ ಮುಗಿಸಿ ಶಿರಸಿಯಿಂದ ಬೆಂಗಳೂರು ಬಸ್ ಹತ್ತಿ ಹೊಗುತ್ತಿದ್ದ. ಈ ವೇಳೆ ಬಸ್ ಹತ್ತಿದ ಪ್ರಿತಂ ಜಗಳ ಮಾಡಿಕೊಂಡು ಗಂಗಾಧರ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ.

ಇಬ್ಬರ ನಡುವಿನ ಪ್ರೀತಿ ಮತ್ತು ವೈಮನಸ್ಸಿಗೆ ಒಂದು ಅಮಾಯಕ ಜೀವ ಬಲಿಯಾಗಿದೆ. ಸದ್ಯ ಪ್ರೇಮಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣಿರು ಸುರಿಸುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.