Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಸೆಂಚುರಿ ಸ್ಟಾರ್ ಶಿವಕುಮಾರ್ ರ ಓಂ ಸಿನಿಮಾ ಇಂಡಷ್ಟ್ರೀಲಿ ರೆಕಾರ್ಡ್ ಬರೆದಿತ್ತು.. ಒಬ್ಬ ರೌಡಿಶೀಟರ್ ಲವ್ ಸ್ಟೋರಿ ನೋಡಿ ಜನ ಶಿಳ್ಳೆ ಹೊಡೆದು ಎಂಜಾಯ್ ಮಾಡಿದ್ರು‌.. ಅದೇ ರೀತಿ ಬೆಂಗಳೂರಲ್ಲಿ ಒಬ್ಬ ರೌಡಿಶೀಟರ್ ಲವ್ ಸ್ಟೋರಿ ಬೆಳಕಿಗೆ ಬಂದಿದೆ.. ಅವೈಡ್ ಮಾಡಿದ್ಲು ಎಂದು ಸಿನಿಮಾ ಸ್ಟೈಲ್ ನಲ್ಲಿ ಗ್ಯಾಂಗ್ ಸಮೇತ ಯುವತಿ ಮನೆಗೆ ಹೋಗಿದ್ದ ರೌಡಿಶೀಟರ್ ಕಾರಿಗೆ ಬೆಂಕಿ ಹಚ್ಚಿದ್ದಾನೆ.. ಅಷ್ಟಕ್ಕೂ ಯಾರವ್ನು ಅಂತೀರಾ ಈ ಸ್ಟೋರಿ ನೋಡಿ..

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
Lover Car Fire
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Feb 23, 2025 | 4:29 PM

ಬೆಂಗಳೂರು, (ಫೆಬ್ರವರಿ 23): ಯುವತಿ ಪ್ರೀತಿ ನಿರಾಕರಿಸಿದ್ದಕ್ಕಾಗಿ ಆಕೆಯ ಕಾರು ಹಾಗೂ ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ (Bengaluru) ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಬಳಿ ನಡೆದಿದೆ. ಆರೋಪಿಯನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಈತ ಓರ್ವ ರೌಡಿಶೀಟರ್​ ಎಂದು ತಿಳಿದುಬಂದಿದೆ. ಕಳೆದ 9 ವರ್ಷಗಳಿಂದ ಯುವತಿಯೋರ್ವಳಿ ಈ ರೌಡಿಶೀಟರ್ ರಾಹುಲ್​ನನ್ನು ಪ್ರೀತಿಸುತ್ತಿದ್ದಳು. ರೌಡಿಶೀಟರ್ ರಾಹುಲ್​ನ ಹಿನ್ನೆಲೆ ಗೊತ್ತಿದ್ದರೂ ಸಹ ಯುವತಿ ಲವ್ ಮಾಡುತ್ತಿದ್ದಳು. ಆದ್ರೆ, ಕೆಲ ತಿಂಗಳಿಂದ ರಾಹುಲ್​ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡು ರಾಹುಲ್​, ಪ್ರಿಯತಮೆ ಮನೆ ಬಳಿ ಹೋಗಿ ಆಕೆಯ ಕಾರು, ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾನೆ.

ಕೆಲ ತಿಂಗಳಿಂದ ಯುವತಿ ರಾಹುಲ್​ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ರಾಹುಲ್​, ಸಹಚರರ ಜೊತೆ ಯುವತಿ ಮನೆ ಬಳಿ ಬಂದು ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದೆಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ ಪ್ರೇಯಸಿ ತಂದೆಗೆ ಸೇರಿದ 2 ಕಾರು, 1 ಬೈಕ್​ಗೆ ಬೆಂಕಿ ಹಚ್ಚಿದ್ದಾನೆ. ಆಕೆಯ ಕುಟುಂಬಸ್ಥರಿಗೆ ಭಯ ಬೀಳಿಸುವ ಉದ್ದೇಶದಿಂದ ಬೆಂಕಿ ಹಚ್ಚಿದ್ದಾನೆ.

ಇದನ್ನೂ ಓದಿ: ನನ್ನ ಹೆಂಡತಿಯನ್ನ ಯಾಕೆ ಆಸ್ಪತ್ರೆಗೆ ದಾಖಲಿಸಿದೆ: ಪತ್ನಿ ಸ್ನೇಹಿತೆ ಮೇಲೆ ಹಲ್ಲೆ ಮಾಡಿದ ಗಂಡ

ನಿನ್ನೆ(ಫೆಬ್ರವರಿ 23) ರಾತ್ರಿ ಸುಮಾರು ನಾಲ್ಕು ಹುಡುಗರು ಬಂದಿದ್ದಾರೆ. ಲಾಂಗ್ ,ಮಚ್ಚಿನಿಂದ ಸೆಕ್ಯೂರಿಟಿಗೆ ಹೆದರಿಸಿ ಯುವತಿಯ ಪೋಟೊ ತೋರಿಸಿ ಆಕೆಯ ಕಾರು ಯಾವುದು ಎಂದು ಕೇಳಿದ್ದಾರೆ. ಬಳಿಕ ಒಳಗಡೆ ಹೋಗಿ ಕಾರಿನ ಗ್ಲಾಸ್ ಹೊಡೆದು ಹಾಕಿ ಪೆಟ್ರೋಲ್ ಸುರಿದು ಬೆಂಕಿ‌ ಹಚ್ಚಿದ್ದಾರೆ. ಒಂದು ಕಾರಿಗೆ ಬೆಂಕಿ ಹಚ್ಚಿದ ನಂತರ ಮತ್ತೊಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಸುಮಾರು 45 ಕುಟುಂಬಗಳು ವಾಸ ಮಾಡುತ್ತಿವೆ. ತಕ್ಷಣ ಇದನ್ನ ಗಮನಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಸ್ಥಳಕ್ಕೆ ‌ಬಂದ ಅಗ್ನಿಶಾಮಕ ದಳದ ಬೆಂಕಿ ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಎರಡು ಕಾರುಗಳು ಸುಟ್ಟು ಭಸ್ಮಯವಾಗಿವೆ. ಘಟನೆ ಸಂಬಂಧ  ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

ಇನ್ನು ಈ ಪಾಗಲ್ ಪ್ರೇಮಿ ರಾಹುಲ @ಸ್ಟಾರ್ ರಾಹುಲ ಹನುಮಂತನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್ ಗಳಿವೆ. ಈ ಹಿಂದೆ ರಾಹುಲನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದರು. ರಾಹುಲನ ವಿರುದ್ಧ ಇಷ್ಟೊಂದು ಪ್ರಕರಣಗಳಿದ್ದರೂ ಸಹ ಯುವತಿ ಕಳೆದ 9 ವರ್ಷಗಳಿಂದ ರೌಡಿಶೀಟರ್​ನನ್ನು ಪ್ರೀತಿಸುತ್ತಿದ್ದಳು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:13 pm, Sun, 23 February 25