AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ಕಾರು ಪಾರ್ಕ್ ಮಾಡಿದ್ದಾತ ಇಡೀ ದಿನವಾದರೂ ಇಳಿಯಲೇ ಇಲ್ಲ: ಹತ್ತಿರ ಹೋಗಿ ನೋಡಿದವರಿಗೆ ಶಾಕ್

ಆ ವ್ಯಕ್ತಿ ಎಂದಿನಂತೆ ಕಾರಿನಲ್ಲಿ ಕಚೇರಿಗೆ ತೆರಳಿದ್ದರು. ಆದರೆ ಮಾರ್ಗ ಮಧ್ಯೆ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದರು. ಸಂಜೆಯಾದರೂ ಕಾರಿನಿಂದ ಆ ವ್ಯಕ್ತಿ ಇಳಿಯಲೇ ಇಲ್ಲ! ಕೊನೆಗೆ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿಯಾತ ಬಂದು ಕಾರಿನ ಕಿಟಿಕಿ ಗಾಜು ಒಡೆದಾಗ ಒಳಗಡೆ ಇದ್ದ ವ್ಯಕ್ತಿಗೆ ಉಸಿರೇ ಇರಲಿಲ್ಲ!

ರಸ್ತೆ ಬದಿ ಕಾರು ಪಾರ್ಕ್ ಮಾಡಿದ್ದಾತ ಇಡೀ ದಿನವಾದರೂ ಇಳಿಯಲೇ ಇಲ್ಲ: ಹತ್ತಿರ ಹೋಗಿ ನೋಡಿದವರಿಗೆ ಶಾಕ್
ಕಚೇರಿಗೆ ತೆರಳ್ತಿದ್ದ ವ್ಯಕ್ತಿಗೆ ಕಾರಿನಲ್ಲೇ ಹೃದಯಾಘಾತ
ಗಣಪತಿ ಶರ್ಮಾ
|

Updated on: Feb 24, 2025 | 8:27 AM

Share

ಬೆಂಗಳೂರು, ಫೆಬ್ರವರಿ 24: ಸಾವು ಯಾವಾಗ ಎಲ್ಲಿ ಹೇಗೆ ಬರುತ್ತದೆಯೋ ಹೇಳಲಾಗದು. ಹೃದಯಾಘಾತ, ಅನಿರೀಕ್ಷಿತ ಸಾವಂತೂ ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನ ಬ್ರೂಕ್ ಫಿಲ್ಡ್​​​ನಲ್ಲಿ ನಡೆದಿದೆ. ಐಟಿಪಿಎಲ್ ರಸ್ತೆಯಲ್ಲಿ ಗುರುವಾರ ಐಟಿ ಉದ್ಯೋಗಿ ಸಂತೋಷ್ ಪ್ರಸಾದ್, ಪಾರ್ಕ್ ಮಾಡಿದ್ದ ಕಾರಿನಲ್ಲೇ ಹೃದಯಾಘಾತದಿಂದ ಜೀವ ಬಿಟ್ಟಿದ್ದಾರೆ.

37 ವರ್ಷ ವಯಸ್ಸಿನ ಸಂತೋಷ್ ಪ್ರಸಾದ್ ಇಂದಿರಾನಗರಲ್ಲಿ ಕುಟುಂಬ ಸಮೇತ ವಾಸವಿದ್ದರು. ಗುರುವಾರ ಬೆಳಗ್ಗೆ ಕೂಡ ಎಂದಿನಂತೆ ತಮ್ಮ ಕಚೇರಿಗೆ ಕಾರಿನಲ್ಲಿ ತೆರಳಿದ್ದರು. ಆದರೆ, ಮೊದಲೇ ಹೈ ಶುಗರ್​​ನಿಂದ ಬಳಲುತ್ತಿದ್ದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದಾರೆ. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಆದರೆ, ಸಂಜೆ ತನಕ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ.

ಇದರಿಂದ ಕಾರ್ ನಿಲ್ಲಿಸಿದ್ದ ಸ್ಥಳದ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿಯವನಿಗೆ ಕೊಂಚ ಅನುಮಾನ ಶುರುವಾಗಿದೆ. ಬಳಿಕ ಕಾರಿನ ಬಳಿ ಹೋಗಿ ಒಳಗಿದ್ದವರನ್ನು ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದಾಗ ಕಾರಿನ ಗ್ಲಾಸ್ ಒಡೆದಿದ್ದಾರೆ. ಆಗ, ಸಂತೋಷ್ ಮೃತಪಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಯಾವಾಗ ಕಾರಿನಲ್ಲಿ ಮೃತದೇಹ ಕಾಣಿಸಿತೋ, ತಕ್ಷಣವೇ ಬೀಡಾ ಅಂಗಡಿಯ ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಹೆಚ್ಎಎಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿ ಸಿಕ್ಕ ಐಡಿ ಕಾರ್ಡ್, ಕಾರ್ ನಂಬರ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ಹೆಚ್ಎಎಲ್ ಪೊಲೀಸರು ಘಟನೆ ಬಗ್ಗೆ ಯುಡಿಆರ್ ದಾಖಲಿಸಿ ತನಿಖೆ ಮುಂದುರಿಸಿದ್ದಾರೆ. ಒಟ್ಟಿನಲ್ಲಿ ಸಾವು ಎಂಬುದು ನೀರಿನ ಮೇಲೆ ಗುಳ್ಳೆ ಇದ್ದಂತೆ ಎಂಬುದು ಮತ್ತೆ ನಿರೂಪಿತವಾಗಿದೆ. ಅದು ಯಾವಾಗ ಒಡೆದು ಹೋಗುತ್ತದೆಯೋ ಹೇಳಲಾಗದು.

ವರದಿ: ಪ್ರದೀಪ್ ಚಿಕ್ಕಾಟಿ ‘ಟಿವಿ9’

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್