ನಟಿ ರನ್ಯಾ ರಾವ್ ಬೆನ್ನಲ್ಲೇ ಚಿನ್ನ ಸಾಗಾಟ ಮಾಡ್ತಿದ್ದ ಮತ್ತೋರ್ವ ಸಿಕ್ಕಿಬಿದ್ದ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 3 ಕೆಜಿ 995 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೊಬ್ಬ ತನ್ನ ಶರ್ಟ್‌ನಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದ. ಈ ಚಿನ್ನದ ಮೌಲ್ಯ 3 ಕೋಟಿ 44 ಲಕ್ಷ ರೂ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

ದೇವನಹಳ್ಳಿ, ಮಾರ್ಚ್ 07: ಕರ್ನಾಟಕದಲ್ಲಿ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ (Smuggling) ಕೇಸ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ರನ್ಯಾ ಮೇಲೆ 12 ಕೋಟಿ ರೂ ಮೌಲ್ಯದ ಗೋಲ್ಡ್ ಸ್ಮಗ್ಲಿಂಗ್ ಆರೋಪ ಇದೆ. ಇದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಆಪರೇಷನ್ ಎನ್ನಲಾಗಿದೆ. ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಅಕ್ರಮವಾಗಿ ಸಾಗಿಸುತ್ತಿದ್ದ 3 ಕೋಟಿ 44 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 995 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕ ಶರ್ಟ್‌ನ ಒಳ ಭಾಗದಲ್ಲಿ ಚಿನ್ನ ಅಡವಿಟ್ಟುಕೊಂಡು ಬಂದಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ವಿಚಾರಣೆ ಮಾಡಿದ್ದಾರೆ.
ವಿದೇಶದಿಂದ ಅಕ್ರಮವಾಗಿ ತಂದಿದ್ದ ಕೋಟ್ಯಂತರ ಮೌಲ್ಯದ ಗಾಂಜಾ ವಶಕ್ಕೆ
ಪ್ರತಿ ನಿತ್ಯ ದೇಶ ವಿದೇಶಗಳಿಗೆ ಸಾವಿರಾರು ಜನ ಪ್ರಯಾಣಿಸುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ತಂದಿದ್ದ ಕೋಟಿ ಕೋಟಿ ರೂ ಬೆಲೆ ಬಾಳುವ ಗಾಂಜಾವನ್ನು ಏರ್ಪೋರ್ಟ್ ನ ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿರುವಂತಹ ಘಟನೆ ಇತ್ತೀಚೆ ನಡೆದಿತ್ತು.
ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್ನಲ್ಲಿ 2 ಕೋಟಿ ರೂ ವಿದೇಶಿ ಹಣ ಜಪ್ತಿ: ಮೂವರ ಬಂಧನ
ಬ್ಯಾಂಕಾಂಕ್ನಿಂದ ಬೆಂಗಳೂರಿಗೆ ಬಂದಿದ್ದ ಹೈಡ್ರೋಪೋನಿಕ್ಸ್ ಗಾಂಜಾ, ಮೈರವಾನ್ ಗಾಂಜಾ ಹೂ ಸೇರಿದಂತೆ ವಿವಿಧ ಬಗೆಯ 23 ಕೋಟಿ ರೂ ಮೌಲ್ಯದ 23 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನು ಈ ಗಾಂಜಾವನ್ನು ಪ್ರತಿಷ್ಠಿತ ಶಾಲಾ ಕಾಲೇಜು ಹಾಗೂ ಪಾರ್ಟಿಗಳು ನಡೆಯುವ ಜಾಗಗಳಿಗೆ ತಲುಪಿಸಲು ತರಲಾಗಿತ್ತು ಅಂತ ಹೇಳಲಾಗಿದ್ದು, ಶ್ರೀಮಂತರು ಹೆಚ್ಚಾಗಿ ಬಳಸುವ ಗಾಂಜಾ ಇದಾಗಿದೆ ಎನ್ನಲಾಗಿದೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುವ ವೇಳೆ ಪ್ರತ್ಯೇಕ ಕವರ್ಗಳಲ್ಲಿ ಪ್ಯಾಕ್ ಮಾಡಿಕೊಂಡು ಲಗೇಜ್ ಬ್ಯಾಗ್ನಲ್ಲಿ ಇಟ್ಟಿಕೊಂಡು ಅಕ್ರಮವಾಗಿ ಗಾಂಜಾ ಸಾಗಿಸಲಾಗ್ತಿತ್ತು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಏರ್ಪೋರ್ಟ್ನಲ್ಲಿ ಲಗೇಜ್ ಚೆಕ್ ಮಾಡುವ ವೇಳೆ ಗಾಂಜಾ ಸಮೇತ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಏರ್ ಶೋ ಹೊತ್ತಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!
ಇನ್ನೂ ಮಾರುಕಟ್ಟೆಯಲ್ಲಿ ಹೆಚ್ವಿನ ಬೆಲೆ ಬಾಳುವ ಹೈಡ್ರೋಪೋನಿಕ್ ಗಾಂಜಾ ವನ್ನು ಆರೋಪಿಗಳು ಸಾಗಿಸುತ್ತಿದ್ದು, ಆರೋಪಿಗಳ ಮೇಲೆ ಎನ್ಡಿಪಿಎಸ್ ಖಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.