ಕಂಠಪೂರ್ತಿ ಕುಡಿದು ಸ್ಕೂಟಿಗೆ ಐಷಾರಾಮಿ ಕಾರು ಗುದ್ದಿಸಿದ ವ್ಯಕ್ತಿ, 5 ವರ್ಷದ ಬಾಲಕಿ ಸಾವು

ಇತ್ತೀಚಿನ ದಿನಗಳಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವ್ಯಕ್ತಿಯೊಬ್ಬ ಕಂಠಪೂತರ್ಿ ಕುಡಿದು ಸ್ಕೂಟಿಗೆ ಐಷಾರಾಮಿ ಕಾರು ಗುದ್ದಿದ ಪರಿಣಾಮ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆಯ ಪೋಷಕರಿಗೆ ಗಂಭೀರ ಗಾಯಗಳಾಗಿವೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂದು(ಭಾನುವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಅಪಘಾತದ ನಂತರ ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಕಾರನ್ನು ವಶಪಡಿಕೊಳ್ಳಲಾಗಿದೆ.

ಕಂಠಪೂರ್ತಿ ಕುಡಿದು ಸ್ಕೂಟಿಗೆ ಐಷಾರಾಮಿ ಕಾರು ಗುದ್ದಿಸಿದ ವ್ಯಕ್ತಿ, 5 ವರ್ಷದ ಬಾಲಕಿ ಸಾವು
ಕಾರು

Updated on: Jul 27, 2025 | 10:29 AM

ನೋಯ್ಡಾ, ಜುಲೈ 27: ಇತ್ತೀಚಿನ ದಿನಗಳಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತ(Accident) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಸ್ಕೂಟಿಗೆ ಐಷಾರಾಮಿ ಕಾರು ಗುದ್ದಿದ ಪರಿಣಾಮ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆಯ ಪೋಷಕರಿಗೆ ಗಂಭೀರ ಗಾಯಗಳಾಗಿವೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂದು(ಭಾನುವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಅಪಘಾತದ ನಂತರ ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಕಾರನ್ನು ವಶಪಡಿಕೊಳ್ಳಲಾಗಿದೆ.

ನೋಯ್ಡಾದ ಸೆಕ್ಟರ್ 30 ರಲ್ಲಿರುವ ಪಿಜಿಐ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದ್ದು, ಅತಿ ವೇಗದಲ್ಲಿ ಬಂದ ಬಿಎಂಡಬ್ಲ್ಯೂ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯು ಚಲಾಯಿಸುತ್ತಿದ್ದ ಇಬ್ಬರು ಯುವಕರು ವಾಹನದ ನಿಯಂತ್ರಣ ತಪ್ಪಿ ಮೂರು ಜನರಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ಪರಿಣಾಮವಾಗಿ, 5 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ತ್ವರಿತವಾಗಿ ಕಾರ್ಯನಿರ್ವಹಿಸಿದ ನೋಯ್ಡಾ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಅಪಘಾತದಲ್ಲಿ ಭಾಗಿಯಾದ BMW ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ತನಿಖೆ ನಡೆಯುತ್ತಿದ್ದು, ಘಟನೆಯ ಸಮಯದಲ್ಲಿ ಇಬ್ಬರೂ ಮದ್ಯದ ನಶೆಯಲ್ಲಿದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ; ಓರ್ವ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ಈ ಪ್ರಕರಣವು ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಕುಡಿದು ವಾಹನ ಚಲಾಯಿಸುವುದರ ಬಗ್ಗೆ ಮತ್ತು ಕಠಿಣ ರಸ್ತೆ ಸುರಕ್ಷತಾ ಜಾರಿಯ ಅಗತ್ಯತೆಯ ಬಗ್ಗೆ ಕಳವಳಗಳನ್ನು ಮತ್ತೆ ಹುಟ್ಟುಹಾಕಿದೆ. ಘಟನೆಗಳ ಅನುಕ್ರಮವನ್ನು ಸ್ಥಾಪಿಸಲು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ