ನೋಯ್ಡಾ: ಕಾರಿನಲ್ಲಿ ₹2 ಕೋಟಿಗಿಂತಲೂ ನಗದು ಪತ್ತೆ, 8 ಮಂದಿ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: Nov 11, 2022 | 2:32 PM

ಪೊಲೀಸರು ವಶಪಡಿಸಿಕೊಂಡ ನಗದು ಮತ್ತು ತಲೆಮರೆಸಿಕೊಂಡ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ತನಿಖೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಯ್ಡಾ: ಕಾರಿನಲ್ಲಿ ₹2 ಕೋಟಿಗಿಂತಲೂ ನಗದು ಪತ್ತೆ, 8 ಮಂದಿ ಬಂಧನ
ಕಾರಿನಲ್ಲಿ ನಗದು ಪತ್ತೆ
Follow us on

ನೋಯ್ಡಾ: ಸೆಕ್ಟರ್ 58 ಪ್ರದೇಶದಲ್ಲಿ ಗುರುವಾರ ಸಂಜೆ ಕಾರಿನಲ್ಲಿ ₹ 2 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದು, ಎಂಟು ಜನರನ್ನು ನೋಯ್ಡಾ ಪೊಲೀಸರು (Noida Police) ಬಂಧಿಸಿದ್ದಾರೆ. ನಗದು ಹವಾಲಾ ದಂಧೆಗೆ (Hawala Network)ಸಂಬಂಧಿಸಿದೆ ಎಂದು ಶಂಕಿಸಲಾಗಿದ್ದು, ವಶಪಡಿಸಿಕೊಂಡ ನಗದನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಅಹಮದಾಬಾದ್‌ನ ಜಯಂತಿ ಭಾಯ್, ದೆಹಲಿಯ ಸಂದೀಪ್ ಶರ್ಮಾ, ದೆಹಲಿಯ ವಿನಯ್ ಕುಮಾರ್, ವಾಯುವ್ಯ ಬಂಗಾಳದ ಅಭಿಜೀತ್ ಹಜ್ರಾ, ನೋಯ್ಡಾ ಸೆಕ್ಟರ್ -56 ರ ರೋಹಿತ್ ಜೈನ್, ದೆಹಲಿಯ ವಿಪುಲ್, ಮುಂಬೈನ ಮಿನೇಶ್ ಶಾ ಮತ್ತು ಇಂದೋರ್‌ನ ಅನುಜ್ ಎಂದು ಗುರುತಿಸಲಾಗಿದೆ.ಪೊಲೀಸರು ವಶಪಡಿಸಿಕೊಂಡ ಕೂಡಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
‘ಹವಾಲಾ ಜಾಲಕ್ಕಾಗಿ ₹ 2 ಕೋಟಿ ಹಣ ತೆಗೆದಿರಬಹುದೆಂದು ನಿರೀಕ್ಷಿಸಲಾಗಿದ್ದು, ಬಂಧಿತರೆಲ್ಲರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಟರ್ 55ರಲ್ಲಿ ಹವಾಲಾ ದಂಧೆ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. “ಹವಾಲಾ ದಂಧೆ ನಡೆಸುತ್ತಿರುವ ಕೆಲವರು ಸೆಕ್ಟರ್ -55 ರಲ್ಲಿ ಸಾಕಷ್ಟು ನಗದು ಹೊಂದಿರುವವರು ಡೀಲ್ ಮಾಡಲು ಬರುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಸೆಕ್ಟರ್ 58 ಗೆ ಮಾಹಿತಿ ಸಿಕ್ಕಿತು. ನೋಯ್ಡಾದ ಸೆಕ್ಟರ್ 55 ರ ಪೊಲೀಸ್ ತಂಡವು ಮಾಹಿತಿಯ ಮೇರೆಗೆ ತ್ವರಿತ ಕ್ರಮ ಕೈಗೊಂಡು ಎಂಟು ಜನರನ್ನು ಬಂಧಿಸಿತು. ಎಂದು ಪೊಲೀಸರು ಹೇಳಿದರು.
ವಿಚಾರಣೆಯ ನಂತರ ಆದಾಯ ತೆರಿಗೆ ಇಲಾಖೆಯಿಂದ ವಶ ಪಡಿಸಿಕೊಂಡಿರುವ ನಗದು ಎಣಿಕೆಯನ್ನು ಮಾಡಲಾಗುತ್ತದೆ.

ಪೊಲೀಸರು ವಶಪಡಿಸಿಕೊಂಡ ನಗದು ಮತ್ತು ತಲೆಮರೆಸಿಕೊಂಡ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ತನಿಖೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.